Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ
Team Udayavani, Oct 5, 2024, 9:13 PM IST
ಹೈದರಾಬಾದ್: ಚಾರ್ ಮಿನಾರ್‌ನ ಪಶ್ಚಿಮ ಭಾಗದಲ್ಲಿರುವ ಹಲವಾರು ಕಮಾನಿನ ಕಿಟಕಿಗಳ ಮೂಲಕ ವ್ಯಕ್ತಿಯೊಬ್ಬ ಯಾವುದೇ ರಕ್ಷಣ ಪರಿಕರಗಳಿಲ್ಲದೆ ನಡೆದುಕೊಂಡು ಹೋಗುತ್ತಿರುವುದು ವಿಡಿಯೋ ವೈರಲ್ ಆಗುತ್ತಿದೆ.
ದಾರಿಹೋಕರೊಬ್ಬರು ವೀಡಿಯೊವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋದಲ್ಲಿ, ದುಸ್ಸಾಹಸ ಮಾಡುತ್ತಿದ್ದ ವ್ಯಕ್ತಿ ಕಿಟಕಿಗಳ ಮೂಲಕ ಅಪಾಯಕಾರಿಯಾಗಿ ಸಾಗುತ್ತಿದ್ದ. ಈ ವೇಳೆ ಇನ್ನೊಬ್ಬ ವ್ಯಕ್ತಿ ಮಿನಾರ್‌ಗಳ ಮೇಲೆ ನಿಂತು ನೋಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ಕೊನೆಯಲ್ಲಿ ನಾಲ್ಕು ಕಿಟಕಿಗಳನ್ನು ದಾಟಿದ ವ್ಯಕ್ತಿ, ಕಮಾನಿನ ಕಿಟಕಿಯ ಬಳಿ ಕುಳಿತುಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಮಾಣ ಕೆಲಸ ನಡೆಯುತ್ತಿದ್ದು, ಕಾರ್ಮಿಕರಲ್ಲಿ ಒಬ್ಬನಾಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ವ್ಯಕ್ತಿ ಯಾವುದೇ ರಕ್ಷಣ ಪರಿಕರಗಳಿಲ್ಲದೆ ಹೋಗಿರುವುದಕ್ಕೆ ನೆಟಿಜನ್‌ಗಳು ಆಕ್ರೋಶ ಹೊರ ಹಾಕಿದ್ದಾರೆ.ಚಾರ್ ಮಿನಾರ್‌ನಂತಹ ಸ್ಮಾರಕಗಳಲ್ಲಿ ಜನರು ಮಾಡುವ ಅಪಾಯಕಾರಿ ಸಾಹಸಗಳ ಬಗ್ಗೆ ದೂರಿದ್ದಾರೆ.
A man was spotted walking dangerously between windows on the #Charminar. Police suspect he might be one of the construction workers in the area#Hyderabad #GHMC #RevanthReddy #Hydraa #SSRajamouli #TheyCallHimOG #SWAG #KeerthySuresh pic.twitter.com/uXQ1pY8Ktg
— Pakka Telugu Media (@pakkatelugunewz) October 5, 2024
ಚಾರ್ ಮಿನಾರ್ ಹೈದರಾಬಾದ್‌ನಲ್ಲಿ 1591 ರಲ್ಲಿ ನಿರ್ಮಿಸಲಾದ ಒಂದು ಸ್ಮಾರಕವಾಗಿದ್ದು, ಹೈದರಾಬಾದ್ ನಗರದ ಹೆಗ್ಗುರುತಾಗಿದೆ. ಅದನ್ನು ಅಧಿಕೃತವಾಗಿ ತೆಲಂಗಾಣದ ಲಾಂಛನದಲ್ಲಿ ಸಂಯೋಜಿಸಲಾಗಿದೆ. ಚಾರ್ ಮಿನಾರ್‌ನ ಸುದೀರ್ಘ ಇತಿಹಾಸ ಅದರ ಮೇಲಿನ ಮಹಡಿಯಲ್ಲಿರುವ 425 ವರ್ಷಗಳಿಗೂ ಹೆಚ್ಚು ಕಾಲ ಹಳೆಯ ಮಸೀದಿಯ ಅಸ್ತಿತ್ವವನ್ನು ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.