Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
Team Udayavani, Oct 6, 2024, 7:30 AM IST
ದುಬಾೖ: ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಆರಂಭಿಕ ಮುಖಾಮುಖಿಯಲ್ಲೇ ನ್ಯೂಜಿಲ್ಯಾಂಡ್ ಕೈಯಲ್ಲಿ ಆಘಾತಕಾರಿ ಸೋಲುಂಡ ಭಾರತಕ್ಕೆ ಮುಂದಿ ನೆಲ್ಲ ಪಂದ್ಯಗಳೂ ನಿರ್ಣಾಯಕವಾಗಿ ಪರಿಣಮಿಸಿವೆ. ಇಂಥ ಒತ್ತಡದಲ್ಲೇ ಕೌರ್ ಪಡೆ ರವಿವಾರ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಕಿವೀಸ್ ವಿರುದ್ಧ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದ ಭಾರತ, ಒಗ್ಗೂಡಿ ಹೋರಾಡಿ ಹಳಿ ಏರಲು ಶತಪ್ರಯತ್ನ ಮಾಡಬೇಕಿದೆ.
ಇನ್ನೊಂದೆಡೆ ಪಾಕಿಸ್ಥಾನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಎಂದೇ ಪರಿಗಣಿಸಲಾಗಿದ್ದ ಶ್ರೀಲಂಕಾವನ್ನು 31 ರನ್ನುಗಳಿಂದ ಮಣಿಸಿ, ಭಾರತ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಕುಸಿದಿದೆ ರನ್‌ರೇಟ್
ನ್ಯೂಜಿಲ್ಯಾಂಡ್ ಕೈಯಲ್ಲಿ 58 ರನ್ನುಗಳ ಸೋಲನುಭವಿಸಿದ ಕಾರಣ ಭಾರತದ ರನ್‌ರೇಟ್ – 2.900ಕ್ಕೆ ಇಳಿದಿದೆ. ಮುಂದೆ ಹಾಲಿ ಚಾಂಪಿ ಯನ್ ಆಸ್ಟ್ರೇಲಿಯ, ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾವನ್ನು ಎದು ರಿಸಬೇಕಾದ ಭಾರೀ ಸವಾಲಿದೆ. ಸೆಮಿ ಫೈನಲ್ ಪ್ರವೇಶಿಸಬೇಕಾದರೆ ಉಳಿದೆಲ್ಲ ಪಂದ್ಯಗಳನ್ನೂ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದುದು ಅಗತ್ಯ. “ಎ’ ವಿಭಾಗ “ಗ್ರೂಪ್ ಆಫ್ ಡೆತ್’ ಆಗಿ ಪರಿಣಮಿ ಸಿರುವುದು ಕೂಡ ಇನ್ನೊಂದು ಕಾರಣ.
ಕೇವಲ ಒಂದು ದಿನದ ಅವಧಿಯಲ್ಲಿ ಪುನರ್ ಸಂಘಟಿತಗೊಂಡು ಗೆಲುವಿನ ಮೆಟ್ಟಿಲೇರುವುದು ಸುಲಭವಲ್ಲ. ಅಂದ ಮಾತ್ರಕ್ಕೆ ಅಸಾಧ್ಯವಲ್ಲ. ದಾಖಲೆಗಳೆಲ್ಲ ಭಾರತದ ಪರವಾಗಿವೆ. ಪಾಕ್ ವಿರುದ್ಧ ಆಡಿದ 15 ಟಿ20 ಪಂದ್ಯಗಳಲ್ಲಿ ಭಾರತ 12ರಲ್ಲಿ ಜಯ ಸಾಧಿಸಿದೆ.
ಕೆಲವು ಎಡವಟ್ಟುಗಳು
ಭಾರತವಿಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮಾಡಿಕೊಂಡ ಕೆಲವು ಎಡವಟ್ಟುಗ ಳನ್ನು ಸರಿಪಡಿಸಿಕೊಳ್ಳಬೇಕಿದೆ. ನಾಯಕಿ ಕೌರ್ 3ನೇ, ಜೆಮಿಮಾ 4ನೇ, ರಿಚಾ 5ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಆದರೆ ಇವ್ಯಾವುದೂ ಇವರ ಬ್ಯಾಟಿಂಗ್ ಕ್ರಮಾಂಕವಲ್ಲ. ಕೌರ್ 4ನೇ ಕ್ರಮಾಂಕದ ಗಟ್ಟಿಗಿತ್ತಿ. ವನ್‌ಡೌನ್‌ನಲ್ಲಿ ಆಡಿದ 19 ಪಂದ್ಯಗಳಲ್ಲಿ ಅವರಿಂದ ಒಂದೂ ಅರ್ಧ ಶತಕ ದಾಖಲಾಗಿಲ್ಲ. ಅರ್ಥಾತ್, ಭಾರತ ವಿನ್ನೂ ಸೂಕ್ತ ವನ್‌ಡೌನ್ ಆಟಗಾರ್ತಿಯ ಹುಡುಕಾಟದಲ್ಲೇ ಇದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.