T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 


Team Udayavani, Oct 6, 2024, 7:40 AM IST

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

ಗ್ವಾಲಿಯರ್‌: ಬಾಂಗ್ಲಾದೇಶ ವಿರು ದ್ಧದ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡ ಭಾರತವೀಗ 3 ಪಂದ್ಯಗಳ ಟಿ20 ಸರಣಿಗೆ ಅಣಿಯಾಗಿದೆ. ಇದು ಹೊಸಬರನ್ನು ಒಳಗೊಂಡ ಯುವ ಪಡೆ. ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯರಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಅವರ ಗೈರಲ್ಲಿ ನಡೆಯುವ ಮತ್ತೂಂದು ಸರಣಿ.

ಮೊದಲು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ 5 ಪಂದ್ಯಗಳ ಸರಣಿಯನ್ನಾಡಿದ ಭಾರತ, ಇದನ್ನು 4-1 ಅಂತರದಿಂದ ಜಯಿಸಿತ್ತು. ನಾಯಕರಾಗಿದ್ದವರು ಶುಭಮನ್‌ ಗಿಲ್‌. ಬಳಿಕ ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಆಡಲಾದ ಸರಣಿಯನ್ನು 3-0 ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡಿತು. ಈ ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವವಿತ್ತು. ಬಾಂಗ್ಲಾ ವಿರುದ್ಧ ಸೂರ್ಯ ಅವರೇ ಸಾರಥಿಯಾಗಿದ್ದಾರೆ. ಅಂದಹಾಗೆ, ಇದು ವಿಶ್ವಕಪ್‌ ಗೆಲುವಿನ ಬಳಿಕ ಭಾರತ ತಂಡ ತವರಲ್ಲಿ ಆಡುತ್ತಿರುವ ಮೊದಲ ಟಿ20 ಸರಣಿ. ಹೀಗಾಗಿ ಕುತೂಹಲ ಜಾಸ್ತಿ.

ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌, ಮೊಹಮ್ಮದ್‌ ಸಿರಾಜ್‌, ಅಕ್ಷರ್‌ ಪಟೇಲ್‌ ಮೊದಲಾದವರು ಮುಂಬರುವ ನ್ಯೂಜಿ ಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಯ ಸಂಭಾವ್ಯ ಆಟಗಾರರರಾಗಿರುವ ಕಾರಣ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಇದು ಯುವ ಪಡೆಯ ದರ್ಬಾರ್‌ ಆಗಲಿದೆ. ಆದರೆ ಪಂದ್ಯಕ್ಕೆ ಹಿಂದೂ ಸಂಘಟನೆಗಳು ಕರೆ ನೀಡಿದ “ಗ್ವಾಲಿಯರ್‌ ಬಂದ್‌’ ಬಿಸಿ ಮುಟ್ಟುವ ಸಾಧ್ಯತೆ ಇದೆ.

ಮಾಯಾಂಕ್‌ ಆಗಮನ:

ಭಾರತದ ಈ ತಂಡದಲ್ಲಿ ಯುವ ಆಟಗಾ ರರದೇ ಸಿಂಹಪಾಲು. ಬಹುತೇಕ ಮಂದಿ ಐಪಿಎಲ್‌ನಲ್ಲಿ ಮಿಂಚಿದವರೇ ಆಗಿದ್ದಾರೆ. ಇವರಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರು ಶರವೇಗಿ ಮಾಯಾಂಕ್‌ ಯಾದವ್‌ ಅವರದು. 2024ರಲ್ಲಿ ಮೊದಲ ಸಲ ಐಪಿಎಲ್‌ ಆಡಿದ ಮಾಯಾಂಕ್‌ 150 ಕಿ.ಮೀ. ವೇಗದಲ್ಲಿ ಎಸೆತಗಳನ್ನಿಕ್ಕಿ ಭಾರೀ ಸಂಚಲನ ಮೂಡಿಸಿದ್ದರು. ಆದರೆ ಕೆಲವೇ ಪಂದ್ಯಗಳನ್ನಾಡುವಷ್ಟರಲ್ಲಿ ಗಾಯಾಳಾಗಿ ಹೊರ ಬೀಳಬೇಕಾಯಿತು. ಇದೀಗ ಪ್ರಮುಖ ವೇಗಿಗಳ ಗೈರಲ್ಲಿ ಮಾಯಾಂಕ್‌ ಬೌಲಿಂಗ್‌ ಹಾಗೂ ಅವರ ಫಿಟ್‌ನೆಸ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

ಇವರಂತೆ ದಿಲ್ಲಿ ಪೇಸರ್‌ ಹರ್ಷಿತ್‌ ರಾಣಾ, ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ಟಿ20 ಪದಾರ್ಪಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ರಾಣಾ ಕಳೆದ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಗಾಯಾಳಾಗಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.

ತಂಡದಲ್ಲಿರುವ 3 ದೊಡ್ಡ ಹೆಸರೆಂದರೆ ನಾಯಕ ಸೂರ್ಯಕುಮಾರ್‌ ಯಾದವ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಕೀಪರ್‌ ಸಂಜು ಸ್ಯಾಮ್ಸನ್‌ ಅವರದು. ರಿಂಕು, ಅರ್ಷದೀಪ್‌, ವಾಷಿಂಗ್ಟನ್‌, ಬಿಷ್ಣೋಯಿ ಮೊದಲಾದವರು ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.

ಐಪಿಎಲ್‌ ಹೀರೋ, ಜಿಂಬಾಬ್ವೆಯಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಅಭಿಷೇಕ್‌ ಶರ್ಮ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಇವರಿಗೆ ಸ್ಯಾಮ್ಸನ್‌ ಜೋಡಿಯಾಗುವ ಸಾಧ್ಯತೆ ಇದೆ. ಪರಾಗ್‌, ಜಿತೇಶ್‌ ಶರ್ಮ, ವರುಣ್‌ ಚಕ್ರವರ್ತಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಆದರೆ ಶಿವಂ ದುಬೆ ಗಾಯಾಳಾಗಿ ಸರಣಿಯಿಂದ ಬೇರ್ಪಟ್ಟಿದ್ದು, ಇವರ ಸ್ಥಾನಕ್ಕೆ ತಿಲಕ್‌ ವರ್ಮ ಬಂದಿದ್ದಾರೆ.

ಕಾಡಲಿದೆ ಶಕಿಬ್‌ ಗೈರು:

ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ ನಿವೃತ್ತಿ ಬಾಂಗ್ಲಾದೇಶಕ್ಕೆ ಹಿನ್ನಡೆಯಾಗಿ ಪರಿಣಮಿಸಬಹುದು. ಇದರ ಹೊರತಾಗಿಯೂ ಬಾಂಗ್ಲಾ ಟಿ20 ಸ್ಪೆಷಲಿಸ್ಟ್‌ ಆಟಗಾರರನ್ನೇ ಹೊಂದಿದೆ. ಆಫ್ಸ್ಪಿನ್ನರ್‌ ಮೆಹಿದಿ ಹಸನ್‌ ಮಿರಾಜ್‌ 14 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಹಿರಿಯ ಬ್ಯಾಟರ್‌ ಮಹ್ಮದುಲ್ಲ ಅವರನ್ನೂ ಕರೆಸಿಕೊಳ್ಳಲಾಗಿದೆ. ಉಳಿದಂತೆ ಟೆಸ್ಟ್‌ ಸರಣಿಯ ಪ್ರಮುಖರೆಲ್ಲ ಬಾಂಗ್ಲಾ ತಂಡದಲ್ಲಿದ್ದಾರೆ.

14 ವರ್ಷ ಬಳಿಕ ಗ್ವಾಲಿಯರ್‌ನಲ್ಲಿ ಪಂದ್ಯ:

ಗ್ವಾಲಿಯರ್‌ನಲ್ಲಿ 14 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ. ಇಲ್ಲಿ ಕೊನೆಯ ಪಂದ್ಯ ನಡೆದದ್ದು 2010ರಲ್ಲಿ. ಅದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯವಾಗಿತ್ತು. ಸಚಿನ್‌ ತೆಂಡುಲ್ಕರ್‌ ಅವರ “ಫೇಮಸ್‌ ಡಬಲ್‌ ಸೆಂಚುರಿ’ಯಿಂದ ಈ ಪಂದ್ಯ ಮನೆಮಾತಾಗಿತ್ತು.

ವೇಳಾಪಟ್ಟಿ: 

ಅ. 6     ಮೊದಲ ಟಿ20 ಗ್ವಾಲಿಯರ್‌

ಅ. 9     2ನೇ ಟಿ20           ಹೊಸದಿಲ್ಲಿ

ಅ. 12  3ನೇ ಟಿ20           ಹೈದರಾಬಾದ್‌

ಪ್ರಸಾರ: ಸ್ಪೋರ್ಟ್ಸ್ 18

ಟಾಪ್ ನ್ಯೂಸ್

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

3

Arrested: 22 ಮನೆ ಕಳ್ಳತನ ಕೇಸ್‌ ಆರೋಪಿ ಸೆರೆ

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

BBK11: ಬಿಗ್‌ಬಾಸ್‌: ಮಾನವ ಹಕ್ಕು ಆಯೋಗಕ್ಕೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.