![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 6, 2024, 12:27 AM IST
ಉಪ್ಪಿನಂಗಡಿ: ವರದಕ್ಷಿಣೆಗಾಗಿ ಆಗ್ರಹಿಸಿ ಪತಿ, ಅತ್ತೆ ಮತ್ತು ಮಾವ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ 25ರ ಹರೆಯದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ತೆಕ್ಕಾರು ಗ್ರಾಮದ ಬೆನಪು ಉರ್ಲಡ್ಕ ನಿವಾಸಿ ಅಲ್ತಾಪ್ ಅವರ ಪತ್ನಿ ಫಾತಿಮಾತ್ ಸೈನಾಜ್ ದೂರು ನೀಡಿದವರು. ಪತಿ ಮನೆಯವರ ಹಿಂಸೆಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಕೆಯ ವಿವಾಹವು 2021ರ ಫೆ. 15ರಂದು ನಡೆದಿತ್ತು. ಮನೆಯ ಇತರ ಸೊಸೆಯಂದಿರು 70 ಪವನ್ ಚಿನ್ನಾಭರಣ ತಂದಿದ್ದು, ನೀನು ಕೇವಲ 30 ಪವನ್ ತಂದಿದ್ದೀ ಎಂದು ಗಂಡ, ಮಾವ ಹಾಗೂ ಅತ್ತೆ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಮಾತ್ರವಲ್ಲದೇ ಜೀವ ಬೆದರಿಕೆಯೊಡ್ಡುತ್ತಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಂಡ ಅಲ್ತಾಪ್‌ನ ತಂಗಿಯ ಮದುವೆ ನಿಗದಿಯಾಗಿದ್ದು, ಆಕೆಗೆ ನೀಡುವ ಸಲುವಾಗಿ ಉಳಿದ ಚಿನ್ನಾಭರಣವನ್ನು ತರಬೇಕೆಂದು ತಾಕೀತು ಮಾಡಿ, ಅ. 3ರ ಸಾಯಂಕಾಲ ಫಾತಿ ಮಾತ್ ಸೈನಾಜ್‌ಳನ್ನು ಅತ್ತೆ ನೆಲಕ್ಕೆ ದೂಡಿ ಹಾಕಿದ್ದು, ಮಾವ ಮಹಮ್ಮದ್ ಕಾಲಿ ನಿಂದ ಹೊಟ್ಟೆಗೆ ತುಳಿದು ಹಲ್ಲೆ ನಡೆಸಿ ಮನೆಯಿಂದ ಹೊರಗಟ್ಟಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಆಕೆ ತನ್ನ ಅಣ್ಣನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.