31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್!
ಛತ್ತೀಸ್‌ಗಢದಲ್ಲಿ 48 ಗಂಟೆಯ ಸಾಹಸ.. ರೋಚಕ ಕಾರ್ಯಾಚರಣೆ
Team Udayavani, Oct 6, 2024, 6:50 AM IST
ಛತ್ತೀಸ್‌ಗಢ: ದಟ್ಟಾರಣ್ಯ, 25 ಕಿ.ಮೀ. ಗುಡ್ಡಗಾಡು ಆರೋಹಣ, 10 ಕಿ.ಮೀ ಮೋಟಾರ್ ಸೈಕಲ್ ರೈಡ್, 1,500 ಮಂದಿ ಭದ್ರತಾ ಸಿಬಂದಿಯ 48 ಗಂಟೆಯ ಸಾಹಸ!
ಇದು ಛತ್ತೀಸ್‌ಗಢದ ಅಭುಜಮಾಡ್ ಅರಣ್ಯ ಪ್ರದೇಶದಲ್ಲಿ 31 ನಕ್ಸಲೀಯರನ್ನು ಸದೆಬಡಿದ ಭದ್ರತಾಪಡೆಗಳ ರೋಚಕ ಕಾರ್ಯಾಚರಣೆಯ ವಿವರ. ಹೌದು, 24 ವರ್ಷದಲ್ಲೇ ಅಂದರೆ ಛತ್ತೀಸ್‌ಗಢ ರಾಜ್ಯ ರಚನೆಯಾದ ಬಳಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಶುಕ್ರವಾರ ಅತೀದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿ, 28 ಮಂದಿಯನ್ನು ಸದೆಬಡಿಯಲಾಗಿತ್ತು. ಶನಿವಾರ ಇನ್ನೂ ಮೂವರು ನಕ್ಸಲರ ಮೃತದೇಹ ಪತ್ತೆಯಾಗಿದ್ದು, ಈ ಮೂಲಕ ಈ ಸಂಖ್ಯೆ 31ಕ್ಕೇರಿದೆ. ಈ ದೊಡ್ಡ ಕಾರ್ಯಾಚರಣೆ ಗಾಗಿ ಭದ್ರತಾಪಡೆ ನಡೆಸಿದ ಸಾಹಸ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹಲವಾರು ವರ್ಷಗಳಿಂದ ಭದ್ರತಾ ಪಡೆಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾಂಟೆಡ್ ನಕ್ಸಲರನ್ನೂ ಈಗ ಎನ್‌ಕೌಂಟರ್ ಮಾಡಲಾಗಿದೆ. ಈ ಪೈಕಿ ಸುರೇಶ್ ಸಾಲಾಮ್, ಮೀನಾ ಮಡ್ಕಮ್, ನಿತಿ ಅಲಿಯಾಸ್ ಊರ್ಮಿಳಾ ಸೇರಿ 16 ನಕ್ಸಲರ ಮೇಲೆ ಒಟ್ಟು 1.3 ಕೋಟಿ ರೂ.ಗಳ ಬಹುಮಾನ ಘೋಷಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.