Coastal People in Israel: ಸದ್ಯ ಸುರಕ್ಷಿತ, ಆದರೂ ಆದರೆ ಭವಿಷ್ಯವೇನು ಎಂಬ ಆತಂಕ
ಇರಾನ್ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದ್ದರಿಂದ ಬೆದರಿದ್ದೆವು, ಇದು ಇಸ್ರೇಲ್‌ನಲ್ಲಿರುವ ಕರಾವಳಿಗರ ಮಾತು
Team Udayavani, Oct 6, 2024, 7:25 AM IST
ಮಂಗಳೂರು: ಇಸ್ರೇಲ್‌ನ ಹೊಸ ವರ್ಷಾಚರಣೆ ವೇಳೆ ಇರಾನ್ ನಡೆಸಿದ ದಾಳಿಯಿಂದಾಗಿ ಆತಂಕ ಗೊಂಡಿದ್ದ ಕರಾವಳಿ ಮೂಲದವರು ಸದ್ಯ ಪರಿಸ್ಥಿತಿ ಶಾಂತವಾದ ಕಾರಣ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯ 10 ಸಾವಿರದಷ್ಟು ಮಂದಿ ಇಸ್ರೇಲ್‌ನಲ್ಲಿದಾರೆ. ಹೋಂ ನರ್ಸ್, ಕೇರ್ ಟೇಕರ್ ಮತ್ತಿತರ ಉದ್ಯೋಗ ದಲ್ಲಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ಬಾಂಬ್ ದಾಳಿ ಮಾಡುವುದು ಸಹಜವಾಗಿದ್ದು, ಸರಕಾರದ ಸೈರನ್ ಕೇಳಿಸಿದ ಕೂಡಲೇ ಬಂಕರ್‌ಗೆ ತೆರಳಿ ರಕ್ಷಣೆ ಪಡೆಯುತ್ತಿದ್ದರು. ನಾಲ್ಕು ದಿನಗಳ ಹೊಸ ವರ್ಷಾಚರಣೆ ಮುಗಿದಿದ್ದು, ಜನರು ಮತ್ತೆ ಉದ್ಯೋಗದತ್ತ ಮುಖ ಮಾಡಿದ್ದಾರೆ. ಆದರೆ ಈ ಬಾರಿ ಇರಾನ್ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ಮಾಡಿರುವುದು ಜನರಲ್ಲಿ ಭೀತಿಗೆ ಕಾರಣ.
ಇರಾನ್ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದ್ದರಿಂದ ನಾವೆಲ್ಲ ಬೆದರಿದ್ದೆವು. ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದೆ ಎಂದು ರನಾನಾದಲ್ಲಿನ ಬಿ.ಸಿ.ರೋಡ್ ಮೂಲದ ಮಹಿಳೆಯೊಬ್ಬರು ಉದಯವಾಣಿಗೆ ತಿಳಿಸಿದರು. ಸದ್ಯ ಸಮಸ್ಯೆ ಇಲ್ಲ. ಆದರೆ ಭವಿಷ್ಯವೇನು ಎಂಬ ಆತಂಕ ಇದ್ದೇ ಇದೆ ಎನ್ನುತ್ತಾರೆ ಇನ್ನೋರ್ವ ಮಂಗಳೂರಿನ ಮೂಲದವರು.
ಇರಾನ್ ದಾಳಿಯ ಬಳಿಕ ಹಲವು ವಿಮಾನ ಸೇವೆ ವ್ಯತ್ಯಯ ಗೊಂಡಿದ್ದು, ಊರಿಗೆ ಬರುವುದಕ್ಕೂ ಆಗುತ್ತಿಲ್ಲ ಎನ್ನುವುದು ಕೆಲವರ ಹೇಳಿಕೆ.
ಮಂಗಳೂರು ಹಾಗೂ ಬೆಂಗಳೂರಿ ನಿಂದ ಇಸ್ರೇಲ್‌ನ ಜೆರುಸಲೇಂ ಪವಿತ್ರ ಭೂಮಿಗೆ 45 ಮಂದಿ ಪ್ರವಾಸಹೋಗಿದ್ದು, ಅವರೆಲ್ಲರೂ ಸದ್ಯ ಸುರಕ್ಷಿತವಾಗಿದ್ದಾರೆ. ಕುಲಶೇ ಖರ ಚರ್ಚ್ ವ್ಯಾಪ್ತಿಯ 14 ಮಂದಿ ಇದರಲ್ಲಿದ್ದು ಅವರು ಇಸ್ರೇಲ್ ಪ್ರವಾಸ ಮಾಡುತ್ತಿದ್ದು, ಮುಂದಿನ ವಾರ ಮರಳುವ ನಿರೀಕ್ಷೆ ಇದೆ.
“ಇಸ್ರೇಲ್‌ನಲ್ಲಿರುವ ದ.ಕ.ದವರ ಬಗ್ಗೆ ಮಾಹಿತಿ ಇಲ್ಲ. ಕಳೆದ ವರ್ಷ ಹಮಾಸ್-ಇಸ್ರೇಲ್ ಸಂಘರ್ಷದ ವೇಳೆ ಇಸ್ರೇಲ್‌ನಲ್ಲಿರುವವರ ಕುಟುಂಬದ ಮಾಹಿತಿ ಕೇಳಿದ್ದೆವು. ಕೆಲವರು ಮಾಹಿತಿ ನೀಡಿದ್ದಾರೆ. ಆದರೂ ಒಟ್ಟು ಎಷ್ಟು ಮಂದಿ ಇದ್ದಾರೆ ಎನ್ನುವ ಮಾಹಿತಿ ಇಲ್ಲ.”
–ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.