Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ


Team Udayavani, Oct 6, 2024, 4:03 PM IST

12-health

ಪುರುಷರಿಗೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣದ ಮಹಿಳೆಯರು ಅಲ್ಜೀಮರ್ ಅಥವಾ ಮರೆಗುಳಿ ಕಾಯಿಲೆಗೆ ತುತ್ತಾಗುತ್ತಾರೆ. ಅಲ್ಜೀಮರ್ ರೋಗಕ್ಕೆ ತುತ್ತಾಗಿರುವವರಲ್ಲಿ ಮೂರನೇ ಎರಡರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಪ್ರತೀ ಐವರಲ್ಲಿ ಒಬ್ಬರು ಮಹಿಳೆ ತನ್ನ ಜೀವಿತ ಕಾಲದಲ್ಲಿ 65 ವರ್ಷ ವಯಸ್ಸಿನ ವೇಳೆಗೆ ಈ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ.

ಪುರುಷರಿಗೆ ಹೋಲಿಸಿದರೆ ಸ್ತ್ರೀಯರು ಹೆಚ್ಚು ದೀರ್ಘ‌ಕಾಲ ಬದುಕುತ್ತಾರೆ. ಇದಕ್ಕೆ ಸರಿಯಾಗಿ ಡಿಮೆನ್ಶಿಯಾ ರೋಗಕ್ಕೆ ತುತ್ತಾಗುವ ಸಾಧ್ಯತೆಯು ವಯಸ್ಸು ಹೆಚ್ಚಿದಂತೆ ವೃದ್ಧಿಸುತ್ತ ಹೋಗುತ್ತದೆ. ಇದಕ್ಕೆ ಒಂದು ಕಾರಣವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಸಮಾಜದಲ್ಲಿ ವಯೋವೃದ್ಧ ಪುರುಷರು ಅಂದರೆ ಅಜ್ಜಂದಿರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಅಜ್ಜಿಯಂದಿರು ಇರುತ್ತಾರೆ ಹಾಗೂ ವಯಸ್ಸು ಹೆಚ್ಚಿದಂತೆ ಅಲ್ಜೀಮರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತ ಹೋಗುತ್ತದೆ.

ಇದಷ್ಟೇ ಅಲ್ಲ; ಮಹಿಳೆಯರಲ್ಲಿ ಅಲ್ಜೀಮರ್ ಉಂಟಾಗುವ ಸಾಧ್ಯತೆಯು ಅಲ್ಜೀಮರ್ ಡಿಮೆನ್ಶಿಯಾಕ್ಕಿಂತ ಹೊರತಾದ ಅಲ್ಜೀಮರ್ ಉಂಟಾಗುವುದಕ್ಕಿಂತ ಹೆಚ್ಚಿರುತ್ತದೆ.

ಭ್ರೂಣವನ್ನು ಯಾವುದೇ ಸೋಂಕುಗಳಿಂದ ರಕ್ಷಿಸುವ ಉದ್ದೇಶದಿಂದ ರೋಗ ನಿರೋಧಕ ಶಕ್ತಿ ಮಹಿಳೆಯರಲ್ಲಿ ಪ್ರಬಲವಾಗಿರುತ್ತದೆ; ಇದು ಜೀವವಿಕಾಸದ ಭಾಗವಾಗಿ ಬೆಳೆದುಬಂದಿರುವಂಥದ್ದು. ಇದು ಮಹಿಳೆಯರ ದೇಹದಲ್ಲಿ ಆಟೊಆ್ಯಂಟಿಬಾಡಿಗಳು ಉತ್ಪಾದನೆಯಾಗಲು ಕಾರಣವಾಗಿ ಆ ಮೂಲಕ ಪುರುಷರಿಗೆ ಹೋಲಿಸಿದರೆ ಹೆಚ್ಚು ಪ್ರಮಾಣದಲ್ಲಿ ಅಮಲಾಯ್ಡ ಸಮರ್ಪಕವಾದ ಮತ್ತು ಚೈತನ್ಯದಾಯಕವಾದ ನಿದ್ದೆ ಪ್ರತೀ ರಾತ್ರಿ ಆರರಿಂದ ಎಂಟು ತಾಸುಗಳ ವರೆಗೆ ಸುಖ ನಿದ್ದೆ ಮಾಡುವವರಿಗಿಂತ ರಾತ್ರಿ ಐದು ತಾಸುಗಳಿಗಿಂತ ಕಡಿಮೆ ನಿದ್ದೆ ಮಾಡುವವರು ಡಿಮೆನ್ಶಿಯಾಕ್ಕೆ ತುತ್ತಾಗುವ ಇಮ್ಮಡಿ ಅಪಾಯವನ್ನು ಹೊಂದಿರುತ್ತಾರೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಹಗಲಿನ ವೇಳೆ ಮಿದುಳಿನಲ್ಲಿ ಶೇಖರಣೆಯಾಗುವ ಬೆಟಾ ಅಮಲಾಯ್ಡ ಮಡ್ಡಿಯನ್ನು ನಿದ್ದೆ ನಿರ್ಮೂಲನಗೊಳಿಸುತ್ತದೆ, ಹೀಗಾಗಿ ಪ್ರತೀ ದಿನ ಚೆನ್ನಾಗಿ ನಿದ್ದೆ ಮಾಡುವುದು ಬಹಳ ಅಗತ್ಯವಾಗಿದೆ. ಸಾಕಷ್ಟು ತಾಸು ನಿದ್ದೆ ಮಾಡಿಲ್ಲ ಎಂದಾದರೆ ಮಿದುಳು ಅಮಲಾಯ್ಡ ಮಡ್ಡಿಯನ್ನು ಹೊರಹಾಕಲು ಸಾಕಷ್ಟು ಸಮಯ ಸಿಕ್ಕಿಲ್ಲ ಎಂದರ್ಥ; ಇದರಿಂದಾಗಿ ಕಾಲಾನುಕ್ರಮದಲ್ಲಿ ಅಮಲಾಯ್ಡ ಮಡ್ಡಿ ಶೇಖರಗೊಂಡು ಡಿಮೆನ್ಶಿಯಾ ಉಂಟಾಗಲು ಕಾರಣವಾಗುತ್ತದೆ.

ಸಮರ್ಪಕವಾದ ಮತ್ತು ಚೈತನ್ಯದಾಯಕವಾದ ನಿದ್ದೆ

ಪ್ರತೀ ರಾತ್ರಿ ಆರರಿಂದ ಎಂಟು ತಾಸುಗಳ ವರೆಗೆ ಸುಖ ನಿದ್ದೆ ಮಾಡುವವರಿಗಿಂತ ರಾತ್ರಿ ಐದು ತಾಸುಗಳಿಗಿಂತ ಕಡಿಮೆ ನಿದ್ದೆ ಮಾಡುವವರು ಡಿಮೆನ್ಶಿಯಾಕ್ಕೆ ತುತ್ತಾಗುವ ಇಮ್ಮಡಿ ಅಪಾಯವನ್ನು ಹೊಂದಿರುತ್ತಾರೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಹಗಲಿನ ವೇಳೆ ಮಿದುಳಿನಲ್ಲಿ ಶೇಖರಣೆಯಾಗುವ ಬೆಟಾ ಅಮಲಾಯ್ಡ ಮಡ್ಡಿಯನ್ನು ನಿದ್ದೆ ನಿರ್ಮೂಲನಗೊಳಿಸುತ್ತದೆ, ಹೀಗಾಗಿ ಪ್ರತೀ ದಿನ ಚೆನ್ನಾಗಿ ನಿದ್ದೆ ಮಾಡುವುದು ಬಹಳ ಅಗತ್ಯವಾಗಿದೆ. ಸಾಕಷ್ಟು ತಾಸು ನಿದ್ದೆ ಮಾಡಿಲ್ಲ ಎಂದಾದರೆ ಮಿದುಳು ಅಮಲಾಯ್ಡ ಮಡ್ಡಿಯನ್ನು ಹೊರಹಾಕಲು ಸಾಕಷ್ಟು ಸಮಯ ಸಿಕ್ಕಿಲ್ಲ ಎಂದರ್ಥ; ಇದರಿಂದಾಗಿ ಕಾಲಾನುಕ್ರಮದಲ್ಲಿ ಅಮಲಾಯ್ಡ ಮಡ್ಡಿ ಶೇಖರಗೊಂಡು ಡಿಮೆನ್ಶಿಯಾ ಉಂಟಾಗಲು ಕಾರಣವಾಗುತ್ತದೆ.

ನೀವು ಮಹಿಳೆಯಾಗಿದ್ದಲ್ಲಿ ಅಲ್ಜೀಮರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು?

 ದೈಹಿಕ ಚಟುವಟಿಕೆ, ವ್ಯಾಯಾಮಗಳನ್ನು ಮಾಡುವ ಮೂಲಕ ಗ್ರಹಣ ಶಕ್ತಿ ಕುಂದುವುದನ್ನು ಮುಂದೂಡಬಹುದು. ವೇಗವಾದ ನಡಿಗೆ, ಜಾಗಿಂಗ್‌, ಸೈಕಲ್‌ ಸವಾರಿ, ಈಜು ಅಥವಾ ಏರೋಬಿಕ್‌ ವ್ಯಾಯಾಮಗಳನ್ನು ದಿನಂಪ್ರತಿ ಕನಿಷ್ಠ 30 ನಿಮಿಷಗಳಂತೆ ವಾರಕ್ಕೆ ಐದು ದಿನಗಳ ಕಾಲ ನಡೆಸುವುದು ಉತ್ತಮ.

 ಸಾಮಾಜಿಕ ಚಟುವಟಿಕೆಗಳು ಮತ್ತು ಗ್ರಹಣ ಶಕ್ತಿಯನ್ನು ಪ್ರಚೋದಿಸುವ ವಿನೂತನವಾದ ಚಟುವಟಿಕೆಗಳಲ್ಲಿ ಭಾಗವಹಿಸಿ. ಗ್ರಹಣ ಶಕ್ತಿಯನ್ನು ಪ್ರಚೋದಿಸುವ ಜೀವನಶೈಲಿಯಿಂದ ನಮ್ಮ ಗ್ರಹಣ ಶಕ್ತಿ ಸುರಕ್ಷಿತವಾಗಿರುತ್ತದೆ, ಹೊಸ ಹೊಸ ನರ ಜೀವಕೋಶಗಳು ಉತ್ಪಾದನೆಗೊಳ್ಳುತ್ತವೆ; ಇದರಿಂದಾಗಿ ಅಲ್ಜೀಮರ್ ಕಾಯಿಲೆಯ ಆರಂಭ ಐದು ವರ್ಷಗಳ ವರೆಗೆ ಮುಂದೂಡಲ್ಪಡುತ್ತದೆ. 7 ವರ್ಷಗಳ ಕಾಲ, 1903 ವ್ಯಕ್ತಿಗಳ ಮೇಲೆ ನಡೆಸಲಾಗಿರುವ ಒಂದು ಅಧ್ಯಯನದಲ್ಲಿ ಕಂಡುಕೊಂಡಿರುವಂತೆ, ಗ್ರಹಣಾತ್ಮಕ ಚಟುವಟಿಕೆಗಳು ಅತ್ಯುಚ್ಚ ಮಟ್ಟದಲ್ಲಿದ್ದ (ಉನ್ನತ ಶೇ. 10) ಮಂದಿ ಅಲ್ಜೀಮರ್ ಕಾಯಿಲೆಗೆ ವಿಳಂಬವಾಗಿ, ಸರಾಸರಿ 93.6 ವರ್ಷ ವಯಸ್ಸಿನಲ್ಲಿ ತುತ್ತಾದರು.

ಇದಕ್ಕೆ ಹೋಲಿಸಿದರೆ ಗ್ರಹಣಾತ್ಮಕ ಚಟುವಟಿಕೆಗಳು ಕಡಿಮೆ ಪ್ರಮಾಣದಲ್ಲಿದ್ದ (ಕೆಳಗಿನ ಶೇ. 10) ಮಂದಿ ಅಲ್ಜೀಮರ್ ಕಾಯಿಲೆಗೆ ಸರಾಸರಿ 88.6 ವರ್ಷ ವಯಸ್ಸಿನಲ್ಲಿ ತುತ್ತಾದರು. ಗ್ರಹಣ ಶಕ್ತಿಯನ್ನು ಪ್ರಚೋದಿಸುವ ಚಟುವಟಿಕೆಗಳಲ್ಲಿ ಓದು, ಬರವಣಿಗೆ, ವಿವಿಧ ಆಟಗಳನ್ನು ಆಡುವುದು (ಬೋರ್ಡ್‌ ಗೇಮ್‌ ಗಳು, ಇಸ್ಪೀಟ್‌, ಪಜಲ್‌ಗ‌ಳು ಇತ್ಯಾದಿ), ಹೊಸ ಹೊಸ ಭಾಷೆಗಳನ್ನು ಕಲಿಯುವುದು ಇತ್ಯಾದಿ ಸೇರಿವೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವವರು ಜೀವನ ಮತ್ತು ಕೆಲಸದ ಬಗ್ಗೆ ಧನಾತ್ಮಕ ನೋಟವನ್ನು ಹೊಂದಿರುತ್ತಾರೆ, ಹೊಸತನ್ನು ಕಲಿಯುತ್ತಾರೆ ಹಾಗೂ ಏಕಾಂಗಿಯಾಗಿ ಬಾಳುವವರು ಅಥವಾ ಋಣಾತ್ಮಕ ಮನೋಭಾವವನ್ನು ಹೊಂದಿರುವವರಿಗಿಂತ ದೀರ್ಘ‌ಕಾಲ ತಮ್ಮ ಗ್ರಹಣ ಶಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ.

ಮೆಡಿಟರೇನಿಯನ್‌ ಆಹಾರಾಭ್ಯಾಸ

ಮೀನು, ತರಕಾರಿಗಳನ್ನು ಒಳಗೊಂಡಿರುವ ಮೆಡಿಟರೇನಿಯನ್‌ ಆಹಾರ ಶೈಲಿಯು ಡಿಮೆನ್ಶಿಯಾದ ವೈದ್ಯಕೀಯ ಚಿಹ್ನೆಗಳ ಆರಂಭವನ್ನು ವಿಳಂಬಿಸುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಗ್ರಹಣ ಸಂಬಂಧಿ ಸಾಮರ್ಥ್ಯ ಕುಸಿತ, ವೈಕಲ್ಯಗಳು ತಲೆದೋರುವ ಅಪಾಯವನ್ನು ದೂರಮಾಡುವ ಏಕಮಾತ್ರ ಆಹಾರ ಅಂಶವಾಗಿ ಮೀನು ಗುರುತಿಸಿಕೊಂಡಿದೆ. ಇಂಥ ಆಹಾರಗಳ ಪೈಕಿ ತರಕಾರಿಗಳಿಗೆ ದ್ವಿತೀಯ ಸ್ಥಾನವಿದೆ. ಆಲಿವ್‌ ಎಣ್ಣೆ, ಬೆಣ್ಣೆಹಣ್ಣು, ಹಣ್ಣುಗಳು, ಬೀಜಗಳು, ಬೀನ್ಸ್‌, ಇಡೀ ಧಾನ್ಯಗಳು ಮತ್ತು ಕೋಳಿ ಮಾಂಸ, ಮೊಟ್ಟೆ ಕೂಡ ಪ್ರಯೋಜನಕಾರಿ ಆಹಾರಗಳಾಗಿವೆ.

ಮದ್ಯ ಮತ್ತು ಧೂಮಪಾನಗಳ ಅಪಾಯಕಾರಿ ಬಳಕೆಯಿಂದ ದೂರವಿರಿ ಮದ್ಯಪಾನ ಮತ್ತು ಧೂಮಪಾನದಿಂದ ಗ್ರಹಣ ಶಕ್ತಿಯ ಕುಸಿತ ಗಮನಾರ್ಹವಾಗಿ ಹೆಚ್ಚುತ್ತದೆ. ಮದ್ಯಪಾನ ಮತ್ತು ಧೂಮಪಾನಗಳು ಅಲೆj„ಮರ್ ಕಾಯಿಲೆಯನ್ನು ಮತ್ತು ಇತರ ಸ್ವರೂಪದ ಡಿಮೆನ್ಶಿಯಾಗಳು ಉಲ್ಬಣಿಸುವಂತೆ ಮಾಡುತ್ತವೆ. ಧೂಮಪಾನ ಮತ್ತು ಮದ್ಯಪಾನದಿಂದಾಗಿ ಮಿದುಳಿನಲ್ಲಿರುವ ರಕ್ತನಾಳ ವ್ಯವಸ್ಥೆಯು ಹಾನಿಗೀಡಾಗುತ್ತದೆ, ಇದರಿಂದಾಗಿ ಮಿದುಳಿಗೆ ರಕ್ತ ಮತ್ತು ಆ ಮೂಲಕ ಆಮ್ಲಜನಕ ಸರಬರಾಜು ಕುಸಿತವಾಗಿ ನರಕೋಶಗಳಿಗೆ ಹಾನಿಯಾಗಲು ಕಾರಣವಾಗುತ್ತದೆ.

ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟರಾಲ್‌ ಮಟ್ಟಗಳ ಮೇಲೆ ಸಮರ್ಪಕ ನಿಯಂತ್ರಣ

ಅನಿಯಂತ್ರಿತ ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹಗಳಿಂದ ಮಿದುಳಿನಲ್ಲಿರುವ ರಕ್ತನಾಳಗಳಿಗೆ ಹಾನಿಯಾಗಿ ಗ್ರಹಣ ಶಕ್ತಿ ಕುಸಿತ ಉಲ್ಬಣಿಸಲು ಕಾರಣವಾಗುತ್ತದೆ.

ಆರೋಗ್ಯಪೂರ್ಣ ದೇಹತೂಕವನ್ನು ಕಾಯ್ದುಕೊಳ್ಳಿ

ಬೊಜ್ಜಿನಿಂದ ದೇಹದಲ್ಲಿ ದೀರ್ಘ‌ಕಾಲೀನ ಉರಿಯೂತಗಳು ಉಂಟಾಗಬಹುದು. ಮಿದುಳಿನಲ್ಲಿ ಉರಿಯೂತವು ಮಿದುಳಿನಲ್ಲಿ ರೋಗನಿರೋಧಕ ಕೋಶಗಳು ಸಕ್ರಿಯವಾಗುವುದಕ್ಕೆ ಕಾರಣವಾಗಬಹುದಾಗಿದ್ದು, ಇದರಿಂದ ಮಿದುಳಿನ ನರಕೋಶಗಳಿಗೆ ಹಾನಿಯಾಗಬಹುದು. ಹೀಗಾಗಿ ಮಿದುಳಿನ ಉರಿಯೂತಕ್ಕೂ ಡಿಮೆನ್ಶಿಯಾಕ್ಕೂ ಸಂಬಂಧ ಇದೆ.

-ಡಾ| ಪೂನಮ್‌ ಸಂತೋಷ್‌

ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.