Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Team Udayavani, Oct 6, 2024, 5:04 PM IST
ಹೊಸದಿಲ್ಲಿ: ಸಿ-ವೋಟರ್ ಎಕ್ಸಿಟ್ ಪೋಲ್ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಅತಂತ್ರ ಅಸೆಂಬ್ಲಿಯನ್ನು ಅಂದಾಜಿಸಿದೆ. 95 ಸದಸ್ಯರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ 40 ರಿಂದ 48 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ತೊಂಬತ್ತು ಶಾಸಕರು ಚುನಾಯಿತರಾಗಿದ್ದರೆ, ಐವರನ್ನು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುತ್ತಾರೆ.
47 ಸ್ಥಾನಗಳನ್ನು ಹೊಂದಿರುವ ಕಣಿವೆಯಲ್ಲಿ ಬಿಜೆಪಿಯ ಒಟ್ಟಾರೆ ಸಾಧನೆ ಕಳಪೆಯಾಗಿ ಉಳಿಯುವ ನಿರೀಕ್ಷೆಯಿದೆ. 2014 ರ ಚುನಾವಣೆಯಲ್ಲಿ ಯಾವುದೇ ಸ್ಥಾನಗಳನ್ನು ಪಡೆಯಲು ವಿಫಲವಾಗಿದ್ದ ಬಿಜೆಪಿ ಈ ಬಾರಿಯ ಹೆಚ್ಚಿನ ಪ್ರದರ್ಶನದ ನಿರೀಕ್ಷೆ ಕಾಣುತ್ತಿಲ್ಲ. ಈತನ್ಮಧ್ಯೆ, ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಮ್ಮುವಿನಲ್ಲಿ ಪಕ್ಷವು ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲಿ ಒಟ್ಟು 43 ರಲ್ಲಿ 27-31 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂದು ವರದಿ ಹೇಳಿದೆ.
ಕಳೆದ ಐದು ವರ್ಷಗಳಲ್ಲಿ ಈ ಪ್ರದೇಶವನ್ನು ‘ನಯಾ ಕಾಶ್ಮೀರʼವನ್ನಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ವಾಕ್ಚಾತುರ್ಯ, ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯತ್ತ ಗಮನಹರಿಸಿದ್ದರೂ, ಈ ʼಬದಲಾವಣೆʼ ಕೇಸರಿ ಪಕ್ಷಕ್ಕೆ ಮತಗಳಾಗಿ ಪರಿವರ್ತನೆಯಾಗಲಿಲ್ಲ.
ಸಯ್ಯದ್ ಅಲ್ತಾಫ್ ಬುಖಾರಿಯವರ ಅಪ್ನಿಯಂತಹ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಕಣಿವೆಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಮತ್ತು ತನ್ನ ಕಾರ್ಯಕರ್ತರನ್ನು ಬಲಪಡಿಸಲು ಶ್ರಮಿಸಿದ ಬಿಜೆಪಿಗೆ ಈ ‘ನಯಾ ಕಾಶ್ಮೀರ’ ದೃಷ್ಟಿ ಏಕೆ ಚುನಾವಣಾ ಲಾಭವಾಗಿ ಬದಲಾಗಲಿಲ್ಲ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ.
2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರವು ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಕಿತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿಸಿತ್ತು. ಪರಿಸ್ಥಿತಿ ತಹಬಂದಿಗೆ ಬರುತ್ತಿದ್ದಂತೆ, ನರೇಂದ್ರ ಮೋದಿ ಸರ್ಕಾರವು ಅಭಿವೃದ್ಧಿ, ಉದ್ಯೋಗಗಳು ಮತ್ತು ಭದ್ರತೆಯ ಭರವಸೆಗಳೊಂದಿಗೆ ‘ನಯಾ ಕಾಶ್ಮೀರʼದ ತನ್ನ ನಿರೂಪಣೆಯನ್ನು ಮುಂದಿಟ್ಟಿತು. ಆದರೆ, ತಮ್ಮ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಜನರು ಅನುಭವಿಸಿದ ನಷ್ಟದ ಭಾವನೆಯನ್ನು ಪರಿಹರಿಸಲು ಸರಿಯಾದ ಪ್ರಯತ್ನ ನಡೆಸಿಲ್ಲ ಎನ್ನುತ್ತದೆ ವರದಿ.
ಈತನ್ಮಧ್ಯೆ, ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ‘ಘನತೆ’ ಅಂಶವನ್ನು ಒತ್ತಿ ಹೇಳುವ ಮೂಲಕ, ಈ ನಡೆಯನ್ನು ಕಾಶ್ಮೀರ ವಿರೋಧಿ ಎಂದು ರೂಪಿಸಿತು. ಬಿಜೆಪಿಯನ್ನು ಕಾಶ್ಮೀರಿ ವಿರೋಧಿ ಎಂದು ಬಣ್ಣಿಸಿತು, ಇದು ಬಿಜೆಪಿಯ ಶಾಂತಿಯ ಅಭಿವೃದ್ಧಿಯ ತುಡಿತದ ನಡುವೆಯೂ ಜೀವಂತವಾಗಿ ಉಳಿದಿದೆ.
ಬಿಜೆಪಿಯ ‘ನಯಾ ಕಾಶ್ಮೀರʼತಂತ್ರವು ಸಾಮೂಹಿಕ ಜವಾಬ್ದಾರಿ ಮತ್ತು ಶಿಕ್ಷೆಯ ನೀತಿಯನ್ನು ಒಳಗೊಂಡಿತ್ತು. ಇದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಕಲ್ಲು ತೂರಾಟದ ವಿರುದ್ಧ ದೃಢವಾದ ಕ್ರಮಗಳನ್ನು ಸ್ವಾಗತಿಸಿದರೂ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿಗ್ರಹಿಸಲಾಗುತ್ತಿದೆ ಎಂದು ಅನೇಕ ಸ್ಥಳೀಯ ನಿವಾಸಿಗಳು ಭಾವಿಸಿದರು. ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಭಯವನ್ನು ಬಳಸಲಾಗುತ್ತಿದೆ ಎಂಬ ವ್ಯಾಪಕ ಗ್ರಹಿಕೆಯು ಕಣಿವೆಯಲ್ಲಿ ಚುನಾವಣಾ ಹಿಡಿತವನ್ನು ಗಳಿಸುವ ಬಿಜೆಪಿಯ ಸಾಮರ್ಥ್ಯವನ್ನು ಸೀಮಿತಗೊಳಿಸಿದೆ.
ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ, ಈ ಪ್ರದೇಶದ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ಆದರೆ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಬೃಹತ್ ಹೂಡಿಕೆಗಳ ಮೂಲಕ ಉದ್ಯೋಗ ಸೃಷ್ಟಿ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಅಲೆಯನ್ನು ಬಿಜೆಪಿ ಭರವಸೆ ನೀಡಿತ್ತು. ಆದರೆ, ಈ ನಿರ್ಣಾಯಕ ವಿಷಯಗಳಲ್ಲಿ ಗಮನಾರ್ಹ ಪ್ರಗತಿಯ ಕೊರತೆಯು ಜನರಲ್ಲಿ ಹತಾಶೆ ಮತ್ತು ದ್ರೋಹದ ಭಾವನೆಯನ್ನು ಬೆಳೆಸಿದೆ ಎನ್ನುತ್ತದೆ ವರದಿ.
ತನ್ನ ಚುನಾವಣಾ ಕಾರ್ಯತಂತ್ರದ ಭಾಗವಾಗಿ, ಬಿಜೆಪಿಯು ಅಪ್ನಿ ಪಾರ್ಟಿ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನಂತಹ ಹೊಸ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಎನ್ ಸಿ ಮತ್ತು ಪಿಡಿಪಿ ಯ ಸಾಂಪ್ರದಾಯಿಕ ಪ್ರಾಬಲ್ಯವನ್ನು ಮೀರಿ ವಿಸ್ತರಿಸಲು ಪ್ರಯತ್ನಿಸಿತು. ಆದರೆ, ಈ ಮೈತ್ರಿಗಳಲ್ಲಿ ಹೂಡಿಕೆಯು ಫಲ ನೀಡಲಿಲ್ಲ, ಏಕೆಂದರೆ ಈ ಪಕ್ಷಗಳು ಎನ್ ಸಿ ಅಥವಾ ಪಿಡಿಪಿಯಂತಹ ಸ್ಥಾಪಿತ ಪಕ್ಷಗಳಿಗೆ ಸವಾಲು ಹಾಕುವ ಸಾಮರ್ಥ್ಯವಿರುವ ಪ್ರಬಲ ರಾಜಕೀಯ ಶಕ್ತಿಗಳಾಗಿ ಹೊರಹೊಮ್ಮಲು ವಿಫಲವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್ ಹತ್ಯೆ; ಇಬ್ಬರು ಪೊಲೀಸರ ಬಂಧನ
Modi ಸರಕಾರ 2 ವರ್ಷ ಇರುವುದೇ ಅನುಮಾನ: ಸಂಜಯ್ ರಾವತ್
ಪತಿ-ಪತ್ನಿ ಜಗಳದಲ್ಲಿ ಬಾವಿಗೆ ಹಾರಿದ ಪತಿ… ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ದುರ್ಮರಣ
Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ
ವಿಶ್ವದಾದ್ಯಂತ ಜೆನ್ ಬೀಟಾಪೀಳಿಗೆ ಯುಗಾರಾಂಭ! ಹೊಸ ವರ್ಷದ ಮೊದಲ ದಿನ 3 ಲಕ್ಷ ಮಕ್ಕಳ ಜನನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ
ಜ.26-30: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.