Kasaragod ಅಪರಾಧ ಸುದ್ದಿಗಳು
Team Udayavani, Oct 6, 2024, 9:00 PM IST
ಧಾರ್ಮಿಕ ಭಾವನೆಗೆ ಧಕ್ಕೆ: ಕೇಸು ದಾಖಲು
ಕುಂಬಳೆ: ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೃಷ್ಟಿಸುವ ರೀತಿಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆ ಹಾಗೂ ಚಿತ್ರವನ್ನು ಬಹಿರಂಗಪಡಿಸಿದ ಆರೋಪದಂತೆ ಮಂಗಲ್ಪಾಡಿ ಶಿರಿಯ ಕುನ್ನಿಲ್ ಜಿಎಚ್‌ಎಸ್‌ಎಸ್‌ನ ನೀರಿನ ಟ್ಯಾಂಕ್ ಸಮೀಪದ ಅಬ್ದುಲ್ ಖಾದರ್ ಪುದಿಯಂಗಾಡಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಈತ ಈ ಹಿಂದೆಯೂ ಇದೇ ರೀತಿಯಲ್ಲಿ ಜನರ ಧಾರ್ಮಿಕ ಭಾವನೆಯನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ರೈಲು ಢಿಕ್ಕಿ ಹೊಡೆದು ಯುವಕನ ಸಾವು
ಕಾಸರಗೋಡು: ಪಯ್ಯನ್ನೂರು ಸಮೀಪ ಪಳಯಂಗಾಡಿಯಲ್ಲಿ ರೈಲು ಢಿಕ್ಕಿ ಹೊಡೆದು ಚೆಂಗಳ ಕೊಳತ್ತೂರು ನಿವಾಸಿ ಮುತ್ತು ನಾಯರ್ ಅವರ ಪುತ್ರ ಎ.ಎಂ. ಶ್ರೀಧರನ್(44)ಸಾವಿಗೀಡಾದರು. ಅ. 4ರಂದು ರಾತ್ರಿ 7.30ಕ್ಕೆ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮನೆಗೆ ನುಗ್ಗಿ ಹಾನಿ: ಕೇಸು ದಾಖಲು
ಕಾಸರಗೋಡು: ಅಕ್ರಮವಾಗಿ ನುಗ್ಗಿ ಆಲಂಪಾಡಿ ನಿವಾಸಿ ಅಬ್ದುಲ್ ಖಾದರ್ ಅವರ ಮನೆಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ತಂಸ್ಸಿಮ್ ಮತ್ತು ಶಮ್ನಾಸ್ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸುಮಾರು 20 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಬಿಐ ಅಧಿಕಾರಿ ಹೆಸರಿನಲ್ಲಿ 4.13 ಲಕ್ಷ ರೂ. ವಂಚನೆ
ಕಾಸರಗೋಡು: ಸಿಬಿಐ ಅಧಿಕಾರಿಯೆಂದು ನಂಬಿಸಿ ಅಪರಿಚಿತ ವ್ಯಕಿ 4.13 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಡಕ್ಕಾಡ್ ವಲಿಯಪೊಯಿಲ್ ನಿವಾಸಿ ಮೊಹಮ್ಮದ್ ಜಾಬಿರ್(26) ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ಫೆಬ್ರವರಿ 17ರಂದು ಹಣ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಸಿದು ಬಿದ್ದು ಸಾವು
ಕುಂಬಳೆ: ಕುಂಬಳೆ ದೇವಿನಗರ ಗಟ್ಟಿ ಸಮಾಜ ರಸ್ತೆಯ ನಿತ್ಯ ನಿಲಯದ ನಾಗಪ್ಪ ಗಟ್ಟಿ (72) ಮನೆಯಲ್ಲಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಕುಂಬಳೆಯಲ್ಲಿ ನಿತ್ಯಾನಂದ ವಾಚ್ ವರ್ಕ್ಸ್ ಸಂಸ್ಥೆ ನಡೆಸುತ್ತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.