![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Oct 6, 2024, 10:42 PM IST
ಚನ್ನಪಟ್ಟಣ (ರಾಮನಗರ): ಚನ್ನಪಟ್ಟಣ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುದಾನ ತಂದಿದ್ದೇನೆ ಎಂದು ಹೇಳಿದ್ದಾರೆ. ಎಲ್ಲಿದೆ ಅನುದಾನ?, ಎಲ್ಲಿ ತಂದವ್ರೆ?, ಯಾವುದೋ ಬೋರ್ಡ್‌ಗಳಲ್ಲಿ ಮಾತ್ರವಾ? ಹಾಗಾದರೆ, ನಮ್ಮ ಅಧಿಕಾರಾವಧಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ವ? ನಾನು ಅಭಿವೃದ್ಧಿ ಮಾಡಿದ್ದು, ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೋಡಂಬಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳಲ್ಲಿ 20 ದಿನ ಬಂದಿದ್ದೇನೆ ಅಂತಾ ಹೇಳ್ತಿದ್ದೀರಲ್ಲ ಏನು ಮಾಡಿದ್ರಿ ಬಂದು? ಪಟ್ಟಿ ಕೊಡಿ?, ಒಬ್ಬ 300 ಕೋಟಿ, ಇನ್ನೊಬ್ಬ 500 ಕೋಟಿ ಇನ್ವೆಸ್ಟ್ ಮಾಡಿದ್ದೇವೆ ಅಂತಾನೆ. ಸೇತುವೆಗಳ ನಿರ್ಮಾಣಕ್ಕೆ ನಾನು ಅನುಮತಿ ಕೊಡಿಸಿದ್ದೆ. ಅದಕ್ಕೆ ಚೆಕ್ ಡ್ಯಾಂ ಅಂತ ಪಕ್ಕದಲ್ಲಿ ಬೋರ್ಡ್ ಹಾಕೊಂಡು ಓಡಾಡ್ತಿದ್ದಾರೆ ಎಂದು ದೂರಿದರು.
ಚನ್ನಪಟ್ಟಣದ ಕಡೆ ನೀವು ತಲೆ ಹಾಕ್ತಿದ್ರಾ:
“ಚನ್ನಪಟ್ಟಣದ ಸೀಟು ಖಾಲಿ ಇರೋದಕ್ಕೆ ಬಂದಿದ್ದೇನೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗರಂ ಆದ ಎಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣದ ಚೇರ್ ಖಾಲಿ ಇರೋದಕ್ಕೆ ಬಂದಿದ್ದೀರಾ? ಖಾಲಿ ಇಲ್ಲಾಂದಿದ್ರೆ ಬರ್ತಿರಲಿಲ್ಲವಾ? ಹಾಗಾದರೆ, ನೀವು ಪದೇ ಪದೆ ಇಲ್ಲಿಗೆ ಬರ್ತಿರೋದು ಕುರ್ಚಿಗಾಗಿ ತಾನೇ? ಇಲ್ಲವಾದ್ರೆ ಚನ್ನಪಟ್ಟಣದ ಕಡೆ ನೀವು ತಲೆ ಹಾಕ್ತಿದ್ರಾ, ತಿರುಗಿ ನೋಡ್ತಿರಲಿಲ್ಲ. ಚುನಾವಣೆ, ಕುರ್ಚಿ ಮೇಲೆ ಕಣ್ಣಿಟ್ಟು ಅಭಿವೃದ್ಧಿ ಅಂತಾ ನಾಟಕ ಮಾಡ್ತೀರಾ, ಚನ್ನಪಟ್ಟಣ ಜನರ ಬಗ್ಗೆ ನಿಜವಾಗಿ ಕಾಳಜಿ ಇದ್ದಿದ್ರೆ ಹೀಗೆ ಹೇಳ್ತಿದ್ರಾ, ಚುನಾವಣೆ ಮುಗಿದ ಮೇಲೆ ನೀವು ಮತ್ತೆ ಚನ್ನಪಟ್ಟಣ ಕಡೆ ಬರೋದಿಲ್ಲ. ಟಾಟಾ ಮಾಡ್ಕೊಂಡು ಹೋಗ್ತೀವೆ ಅನ್ನೋದೇ ಇವರ ಮಾತಿನ ಅರ್ಥ ಎಂದು ವಾಗ್ಧಾಳಿ ನಡೆಸಿದರು.
ಅಭ್ಯರ್ಥಿಯ ಪಕ್ಷಗಳ ಹೈಕಮಾಂಡ್ ನಿರ್ಧರಿಸುತ್ತೆ
ಎನ್‌ಡಿಎ ಅಭ್ಯರ್ಥಿ ಯಾರೇ ಆದ್ರೂ ಅವರನ್ನು ಗೆಲ್ಲಿಸಿ, ಹಾಗಾಂತ ನೀವು ನನಗೆ ಮಾತು ಕೊಡಿ, ನನಗೆ 3 ಬಾರಿ ಆಪರೇಷನ್ ಆಗಿದೆ. ನಿಮ್ಮ ಸೇವೆ ಮಾಡಲು ನಾನು ರಾಜಕೀಯದಲ್ಲಿ ಉಳಿದಿದ್ದೇನೆ. ದರೋಡೆ ಮಾಡುವವರ ಮಾತು ಕೇಳಬೇಡಿ. ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ಇರ್ತಾರೋ, ಬೇರೆಯವರು ಇರ್ತಾರೋ ಅನ್ನೋದನ್ನ ಎರಡು ಪಕ್ಷಗಳ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.
ನಾಗಮಂಗಲದ ಪ್ರಕರಣದಲ್ಲಿ ಬಂಧಿತರಲ್ಲಿ ಮುಸಲ್ಮಾನರೇ ಹೆಚ್ಚಿದ್ರು. ಆದರೂ ನಾನು ನಮ್ಮ ಲೀಡರ್‌ಗಳಿಗೆ ಹೇಳಿ ಎಲ್ಲರನ್ನೂ ಬಿಡಿಸಿದ್ದೇನೆ. ಆ ಮಹಾನುಭಾವರು ಅವರನ್ನು ಬಿಡಿಸವ್ರಾ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.