Arrested: ಬಿಟ್‌ ಕಾಯಿನ್‌ ಕೇಸ್‌: ಡಿವೈಎಸ್‌ಪಿ ಶ್ರೀಧರ್‌ ಸೆರೆ


Team Udayavani, Oct 8, 2024, 11:17 AM IST

4

ಬೆಂಗಳೂರು: ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸೋಮವಾರ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ ಅವರನ್ನು ಬಂಧಿಸಿದೆ.

ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ ಅವರು ಈ ಹಿಂದೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಿಟ್‌ ಕಾಯಿನ್‌ ಪ್ರಕರಣದ ತನಿಖೆ ನಡೆಸಿದ್ದರು. ಆ ವೇಳೆ ಇವರು ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ಬಿಟ್‌ಕಾಯಿನ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ತಂಡವು ಸೋಮವಾರ ವಿಚಾರಣೆಗಾಗಿ ಶ್ರೀಧರ್‌ ಪೂಜಾರ್‌ ಅವರನ್ನು ಸಿಐಡಿಯಲ್ಲಿರುವ ತಮ್ಮ ಕಚೇರಿಗೆ ಬರುವಂತೆ ಸೂಚಿಸಿತ್ತು.

ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿರುವ ಶ್ರೀಧರ್‌ ಪೂಜಾರ್‌ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ನಂತರ 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರಿಪಡಿಸಿ 5 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯವು 3 ದಿನಗಳ ಕಾಲ ಶ್ರೀಧರ್‌ ಪೂಜಾರ್‌ ಅವರನ್ನು ವಶಕ್ಕೆ ನೀಡಿದೆ. ಇದರ ಬೆನ್ನಲ್ಲೇ ಶ್ರೀಧರ್‌ ಪೂಜಾರ್‌ಗೆ ಸಿಐಡಿ ಕಚೇರಿಯಲ್ಲಿ ಡ್ರಿಲ್‌ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಶ್ರೀಧರ್‌ ಪೂಜಾರ್‌ ವಿರುದ್ಧ ಎಫ್ಐಆರ್‌ ದಾಖಲಾಗಿತ್ತು. ಈ ಹಿಂದೆ ಶ್ರೀಧರ್‌ ಪೂಜಾರ್‌ ಅವರು ಬಿಟ್‌ಕಾಯಿನ್‌ ಹಗರಣದ ಪ್ರಮುಖ ಆರೋಪಿಯಾಗಿದ್ದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ವಿಚಾರಣೆ ನಡೆಸಿದ್ದರು. ಇನ್ನು ಎಸ್‌ಐಟಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸಿದಾಗ ಸಿಸಿಬಿ ಪೊಲೀಸರ ತನಿಖೆಯಲ್ಲಿ ಲೋಪ ನಡೆದಿರುವುದು ಕಂಡು ಬಂದಿತ್ತು.

ಹಿಂದೆ ಪೊಲೀಸರ ಮೇಲೆಯೇ ಕಾರು ಹತ್ತಿಸಿದ್ದ ಶ್ರೀಧರ್‌:

ಈ ಹಿಂದೆ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶ್ರೀಧರ್‌ ಅವರು ತಲೆಮರೆಸಿಕೊಂಡಿದ್ದರು. ಫೆಬ್ರುವರಿ 27ರಂದು ನಗರದ ಸೆಂಟ್ರಲ್‌ ಕಾಲೇಜು ಬಳಿ ಶ್ರೀಧರ್‌ ಅವರಿದ್ದ ಮಾಹಿತಿ ಪಡೆದಿದ್ದ ತನಿಖಾಧಿಕಾರಿಗಳು ಬಂಧನಕ್ಕೆ ತೆರಳಿದ್ದರು. ಮೆಟ್ರೋ ನಿಲ್ದಾಣ ಬಳಿ ವಕೀಲರ ಜತೆಗೆ ಕಾರಿನಲ್ಲಿದ್ದ ಶ್ರೀಧರ್‌ ತನಿಖಾಧಿಕಾರಿಗಳನ್ನು ಕಂಡ ತಕ್ಷಣ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾಗಿದ್ದರು. ಅವರನ್ನು ಹಿಡಿಯಲು ಮುಂದಾದಾಗ ಎಸ್‌ಐಟಿ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಿ ಪರಾರಿ ಆಗಿದ್ದರು. ಘಟನೆಯಲ್ಲಿ ಓರ್ವ ಪೊಲೀಸರು ಗಾಯಗೊಂಡಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟಾಪ್ ನ್ಯೂಸ್

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

8-vijayanagara

Kanahosahalli: ಈಜಲು ತೆರಳಿದ್ದ ಮೂವರು ಬಾಲಕರ ದಾರುಣ ಸಾವು

Eshwarappa

Gadag: ಆರ್‌ಸಿ ಬ್ರಿಗೇಡ್​ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್‌ ಸಮಾವೇಶ: ಈಶ್ವರಪ್ಪ

4

Tollense Valley: ಬಾಣದ ಮೊನೆಯಂಚು ಹುಡುಕುತ್ತಾ.. ಸುಂದರ ಜಾಗದ ಹಿಂದಿದೆ ರಕ್ತಸಿಕ್ತ ಇತಿಹಾಸ

Bangladesh Cricket: Another senior player announced his farewell in the midst of the India series

Bangladesh Cricket: ಭಾರತ ಸರಣಿಯ ನಡುವೆ ವಿದಾಯ ಘೋಷಿಸಿದ ಮತ್ತೊಬ್ಬ ಹಿರಿಯ ಆಟಗಾರ

Election Result: No faith in the exit poll survey…: DK Shivakumar

Election Result: ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಂಬಿಕೆಯಿಲ್ಲ…: ಡಿಕೆ ಶಿವಕುಮಾರ್

RG Kar Hospital: ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿ ಹಿರಿಯ ವೈದ್ಯರಿಂದ ಸಾಮೂಹಿಕ ರಾಜೀನಾಮೆ

RG Kar Hospital: ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿ ಹಿರಿಯ ವೈದ್ಯರಿಂದ ಸಾಮೂಹಿಕ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Bengaluru: ಬಿಲ್‌ ಕೇಳಿದ್ದಕ್ಕೆ ಬಾರ್‌ ಕ್ಯಾಶಿಯರ್‌ಗೆ ಹಲ್ಲೆ

Bengaluru: ಬಿಲ್‌ ಕೇಳಿದ್ದಕ್ಕೆ ಬಾರ್‌ ಕ್ಯಾಶಿಯರ್‌ಗೆ ಹಲ್ಲೆ

5

Bengaluru: ಆರ್‌.ಆರ್‌.ನಗರದ ಹೇರೋಹಳ್ಳಿ ಮುಖ್ಯ ರಸ್ತೆಯಲ್ಲೇ ಕೊಳವೆ ಬಾವಿ! 

Arrested: ಮೆಟ್ರೋ ಸಿಬ್ಬಂದಿ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ; ಮೂವರ ಸೆರೆ

Arrested: ಮೆಟ್ರೋ ಸಿಬ್ಬಂದಿ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ; ಮೂವರ ಸೆರೆ

Arrested: ಪಾರಿವಾಳ ಹಾರಿಸಿ ಕಳ್ಳತನ ಮಾಡುತ್ತಿದ್ದವ ಸೆರೆ!

Arrested: ಪಾರಿವಾಳ ಹಾರಿಸಿ ಕಳ್ಳತನ ಮಾಡುತ್ತಿದ್ದವ ಸೆರೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ

PDO misappropriation of lakhs of rupees: File a complaint

Davanagere: ಲಕ್ಷಾಂತರ ರೂ. ಹಣ ದುರುಪಯೋಗ ಮಾಡಿದ ಪಿಡಿಒ: ದೂರು ದಾಖಲು

8-vijayanagara

Kanahosahalli: ಈಜಲು ತೆರಳಿದ್ದ ಮೂವರು ಬಾಲಕರ ದಾರುಣ ಸಾವು

Eshwarappa

Gadag: ಆರ್‌ಸಿ ಬ್ರಿಗೇಡ್​ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್‌ ಸಮಾವೇಶ: ಈಶ್ವರಪ್ಪ

4

Tollense Valley: ಬಾಣದ ಮೊನೆಯಂಚು ಹುಡುಕುತ್ತಾ.. ಸುಂದರ ಜಾಗದ ಹಿಂದಿದೆ ರಕ್ತಸಿಕ್ತ ಇತಿಹಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.