Bantwal: ಅಶಕ್ತರಿಗೆ ಒಳಿತು ಬಯಸುವ ಪ್ರೇತ!; 1.50 ಲಕ್ಷ ರೂ. ನೆರವು

ಸರಪಾಡಿಯ ಯುವಕನ 5ನೇ ತಿರುಗಾಟ; ಮಹಿಷಾಸುರ, ಅವತಾರ್‌ ಬಳಿಕ ಪ್ರೇತ ವೇಷದಲ್ಲಿ ಬೈಕ್‌ ಸವಾರಿ!

Team Udayavani, Oct 8, 2024, 12:56 PM IST

ಅಶಕ್ತರಿಗೆ ಒಳಿತು ಬಯಸುವ ಪ್ರೇತ!

ಯುವಕ ದೇವದಾಸ್‌ನ ವೇಷ

ಬಂಟ್ವಾಳ: ಕಳೆದ 4 ವರ್ಷಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ ಹಣ ಸಂಗ್ರಹಿಸಿ ಸುಮಾರು 1.50 ಲಕ್ಷ ರೂ.ಗಳಷ್ಟು ಮೊತ್ತವನ್ನು 10ಕ್ಕೂ ಅಧಿಕ ಅಶಕ್ತರಿಗೆ ನೀಡಿದ್ದ ಸರಪಾಡಿಯ ಯುವಕ ಈ ಬಾರಿ ಪ್ರೇತದ ವೇಷ ಹಾಕಿ ತಿರುಗಾಟ ಆರಂಭಿಸಿದ್ದಾರೆ.

ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್‌ ನಾಯ್ಕ ಅವರು ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ 9 ದಿನಗಳ ಕಾಲ ಊರೂರು ಸುತ್ತಿ ಹಣ ಸಂಗ್ರಹಿಸಿ ಅಶಕ್ತರನ್ನು ಹುಡುಕಿ ಅವರಿಗೆ ನೆರವಾಗುತ್ತಿದ್ದಾರೆ. ಈ ಬಾರಿ ಅ. 6ರ ರಾತ್ರಿ ವೇಷ ಹಾಕಿ ಅ. 13ರ ವರೆಗೆ ತಿರುಗಾಟ ನಡೆಸಿ ವಿಟ್ಲದಲ್ಲಿ ತನ್ನ ತಿರುಗಾಟ ಕೊನೆಗೊಳಿಸಲಿದ್ದಾರೆ.

ಪ್ರತಿವರ್ಷವೂ ವೇಷ ಹಾಕುವ ಮೊದಲೇ ಎರಡು ಮೂರು ಅಶಕ್ತರನ್ನು ಹುಡುಕಿ ಸಂಗ್ರಹಗೊಂಡ ಮೊತ್ತವನ್ನು ಪಾಲು ಮಾಡಿ ನೀಡುತ್ತಿರುವ ದೇವದಾಸ್‌ ಅವರು ಈ ಬಾರಿ ಮೊತ್ತ ಸಂಗ್ರಹಗೊಂಡ ಬಳಿಕ ಅಶಕ್ತರನ್ನು ಹುಡುಕುವ ಕಾರ್ಯ ಮಾಡಲಿದ್ದಾರೆ. ಪ್ರತಿವರ್ಷವೂ ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಅಶಕ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಹೆಚ್ಚಿನ ಮೊತ್ತ ನೀಡಿ ಪ್ರೋತ್ಸಾಹ
ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ದೇವದಾಸ್‌ ಅವರು ಸರಪಾಡಿ, ಮಣಿ ನಾಲ್ಕೂರು ಪರಿಸರದಲ್ಲಿ ಚಿರಪರಿಚಿತವಾಗಿದ್ದು, ಪ್ರತಿವರ್ಷ ವೇಷ ಹಾಕಿಕೊಂಡು ಹೋದಾಗಲೂ ಈತನ ಸದುದ್ದೇಶವನ್ನು ಪ್ರೋತ್ಸಾಹಿಸಿ ಹೆಚ್ಚಿನ ಮೊತ್ತವನ್ನೇ ನೀಡುತ್ತಿದ್ದಾರೆ. ಇವರ ಸೇವಾ ಕಾರ್ಯದ ಕುರಿತು ತಿಳಿಯದೇ ಸ್ವಲ್ಪ ಹಣವನ್ನು ಕೊಟ್ಟವರು ತಿಳಿದ ಬಳಿಕ ಮತ್ತೆ ಕರೆದು ಹೆಚ್ಚಿನ ಹಣ ನೀಡಿದ ಉದಾಹರಣೆಗಳಿವೆ.

ಕಳೆದ ವರ್ಷ ಅವರು ಸುಮಾರು 47 ಸಾವಿರ ರೂ.ಗಳನ್ನು ಸಂಗ್ರಹಿಸಿ ಮೂವರು ಅಶಕ್ತರಿಗೆ ವಿತರಿಸಿದ್ದರು. ವಿಶೇಷವೆಂದರೆ ವೇಷ ಹಾಕುವ ಖರ್ಚು, ತಿರುಗಾಟ ಖರ್ಚು ಹೀಗೆ ಇತರ ಯಾವುದೇ ಖರ್ಚನ್ನು ಸಂಗ್ರಹಗೊಂಡ ಮೊತ್ತದಿಂದ ಪಡೆಯದೆ ಅದಕ್ಕೆ ತನ್ನ ದುಡಿಮೆಯ ಹಣವನ್ನೇ ಬಳಸುತ್ತಿದ್ದಾರೆ.

ಬೈಕಿನ ವಿನ್ಯಾಸವೂ ಬದಲು.!
ವಿಭಿನ್ನ ವೇಷಗಳ ಮೂಲಕ ಗಮನ ಸೆಳೆದಿರುವ ದೇವದಾಸ್‌ ಅವರು ಈ ಹಿಂದೆ ಮಹಿಷಾಸುರ, ಪ್ರೇತ, ಅವತಾರ್‌ ವೇಷದ ಮೂಲಕ ಗಮನ ಸೆಳೆದಿದ್ದು, ಈ ಬಾರಿ ಮತ್ತೆ ಪ್ರೇತವಾಗಲು ಹೊರಟಿದ್ದಾರೆ. ತನ್ನ ವೇಷಕ್ಕೆ ತಕ್ಕಂತೆ ತಿರುಗಾಡುವ ಬೈಕನ್ನೂ ಗ್ಯಾರೇಜ್‌ನಲ್ಲಿ ವಿನ್ಯಾಸಗೊಳಿಸಿ ಬಳಿಕ ಮತ್ತೆ ಹಿಂದಿನ ರೂಪಕ್ಕೆ ತರುತ್ತಾರೆ.

ನೆರವು ನೀಡುವುದರಲ್ಲಿ ತೃಪ್ತಿ
ಈ ಬಾರಿ ಪ್ರೇತದ ಮೂಲಕ 7 ದಿನಗಳ ಕಾಲ ತಿರುಗಾಟ ನಡೆಸಿ ವಿಟ್ಲದಲ್ಲಿ ಕೊನೆಗೊಳಿಸಲಿದ್ದೇನೆ. ಸಂಗ್ರಹಗೊಂಡ ಮೊತ್ತವನ್ನು ಪ್ರತಿವರ್ಷದಂತೆ ಅಶಕ್ತರಿಗೆ ನೀಡಲಿದ್ದು, ನವರಾತ್ರಿ ಮುಗಿದ ಬಳಿಕ ಯಾರಿಗೆ ನೀಡಬೇಕು ಎಂಬುದರ ಕುರಿತು ನಿರ್ಧರಿಸಲಿದ್ದೇನೆ. ಬೇರೆ ರೂಪದಲ್ಲಿ ಅಶಕ್ತರಿಗೆ ನೆರವು ನೀಡುವಷ್ಟು ಶ್ರೀಮಂತ ನಾನಲ್ಲ. ಹೀಗಾಗಿ ಈ ರೀತಿ ವೇಷ ಹಾಕಿ ನೆರವು ನೀಡುವುದರಲ್ಲಿ ತೃಪ್ತಿ ಇದೆ.
-ದೇವದಾಸ್‌ ನಾಯ್ಕ ನೀರೊಲ್ಬೆ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

udupi-DC-office-Kota

Udupi: ಗ್ರಾ.ಪಂ ಸಿಬ್ಬಂದಿ ಮುಷ್ಕರದಿಂದ ಆಡಳಿತ ವ್ಯವಸ್ಥೆಯೇ ಸ್ಥಗಿತ: ಸಂಸದ ಕೋಟ ಶ್ರೀನಿವಾಸ

13-bharamasagara

Bharamasagara: ಸಾಲಭಾದೆಯಿಂದ ಮನನೊಂದು ನೇಣೆಗೆ ಶರಣಾದ ರೈತ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

11-davangere

Davangere: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಬಂಧನ

Yathanal–Jamer

Waqf Board: ಯಾರದೋ ಅಪ್ಪನ ಆಸ್ತಿ ವಿಚಾರ: ಸಚಿವ ಜಮೀರ್‌ – ಶಾಸಕ ಯತ್ನಾಳ್‌ ವಾಕ್ಸಮರ!

9-kateel

Kateelu ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಆರಾಧನೆ

haryana

Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1)

Belthangady: ಅಸಹಾಯಕ ಕುಟುಂಬಕ್ಕೆ ಚಾಲಕನ ಆಸರೆ

Savanooru

Savanooru: ಪಿಕಪ್‌-ಬೈಕ್‌ ಅಪಘಾತ: ಸವಾರರಿಗೆ ಗಾಯ

River-Hand-Person

Vitla: ಹೊಳೆಗೆ ಬಿದ್ದ ವೃದ್ಧರೊಬ್ಬರ ರಕ್ಷಿಸಿದ ಯುವಕರು; ಶ್ಲಾಘನೆ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Untitled-1

Puttur: ಪದವಿ ವಿದ್ಯಾರ್ಥಿ ನಾಪತ್ತೆ; ದೂರು ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

The BJP people mocked Rahul by giving him Jalebi!

Haryana: ಜಿಲೇಬಿ ಕೊಟ್ಟು ರಾಹುಲ್‌ರನ್ನು ಲೇವಡಿ ಮಾಡಿದ ಬಿಜೆಪಿಗರು!

udupi-DC-office-Kota

Udupi: ಗ್ರಾ.ಪಂ ಸಿಬ್ಬಂದಿ ಮುಷ್ಕರದಿಂದ ಆಡಳಿತ ವ್ಯವಸ್ಥೆಯೇ ಸ್ಥಗಿತ: ಸಂಸದ ಕೋಟ ಶ್ರೀನಿವಾಸ

1

Siddapura: ಹೊಡೆದಾಟ; ಯುವಕರ ವಿರುದ್ಧ ಪ್ರಕರಣ ದಾಖಲು

complaint

Kundapura: ಪತಿಯಿಂದ ವರದಕ್ಷಿಣೆ ಹಿಂಸೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.