Haryana Polls: ‘ಈ ತೀರ್ಪು ಸಾಧ್ಯವೇ ಇಲ್ಲ…’: ಹರ್ಯಾಣ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಕಿಡಿ


Team Udayavani, Oct 8, 2024, 7:36 PM IST

haryana

ಹೊಸದಿಲ್ಲಿ: ಎಕ್ಸಿಟ್‌ ಪೋಲ್‌ ಫಲಿತಾಂಶವನ್ನು ಅದಲು ಬದಲು ಮಾಡಿ ಹರ್ಯಾಣ (Haryana) ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) ವು ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರ ನಡೆಸಲು ಸಜ್ಜಾಗಿದೆ. ಚುನಾವಣೋತ್ತರ ಫಲಿತಾಂಶಗಳು ಕಾಂಗ್ರೆಸ್‌ ಗೆ ಅಧಿಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ಮಂಗಳವಾರ (ಅ.08) ನಡೆದ ಮತ ಎಣಿಕೆಯಲ್ಲಿ ಬಿಜೆಪಿಯು ಗೆಲುವು ಸಾಧಿಸಿದೆ.

ಆದರೆ ಈ ಚುನಾವಣೆಯ ತೀರ್ಪಿನಿಂದ ಅಘಾತಕ್ಕೊಳಗಾಗಿರುವ ಕಾಂಗ್ರೆಸ್‌ ಇದನ್ನು ಒಪ್ಪಲು ಸಿದ್ದವಿಲ್ಲ. ಹರ್ಯಾಣ ಚುನಾವಣೆಯ ಅಪ್ಡೇಟ್‌ ನ್ನು ನಿಧಾನಗೊಳಿಸಲಾಗಿತ್ತಿದೆ ಎಂದು ಕಾಂಗ್ರೆಸ್‌ ಮಧ್ಯಾಹ್ನದ ವೇಳೆ ಚುನಾವಣಾ ಸಂಸ್ಥೆಗಳಿಗೆ ದೂರು ನೀಡಿತ್ತು.

ಸಂಜೆ 5 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ (Jairam Ramesh), ಹರ್ಯಾಣದ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಸಂಪೂರ್ಣವಾಗಿ ಆಶ್ಚರ್ಯಕರ. ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಹರ್ಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಗಾಗಿ ಮನಸ್ಸು ಮಾಡಿದ್ದಕ್ಕೆ ಇದು ವಿರುದ್ಧವಾಗಿದೆ. ಹೀಗಿರುವಾಗ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹರ್ಯಾಣದಲ್ಲಿ ನಾವು ಇಂದು ನೋಡಿರುವುದು ಕುಯುಕ್ತಿಯ ಗೆಲುವು, ಜನರ ಇಚ್ಛೆಯನ್ನು ಬುಡಮೇಲು ಮಾಡಿದ ವಿಜಯವಾಗಿದೆ. ಇದು ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಸೋಲು. ಹರಿಯಾಣದ ಅಧ್ಯಾಯವು ಪೂರ್ಣಗೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.

ಹರಿಯಾಣದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (EAM) ಎಣಿಕೆಯ ಪ್ರಕ್ರಿಯೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ದೂರುಳಿವೆ. ಇನ್ನೂ ಹೆಚ್ಚಿನ ದೂರುಗಳು ಬರುತ್ತಿವೆ. ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಇಂದು ಅಥವಾ ನಾಳೆ ಚುನಾವಣಾ ಆಯೋಗಕ್ಕೆ ಪ್ರಸ್ತುತಪಡಿಸುತ್ತೇವೆ” ಎಂದು ಅವರು ಹೇಳಿದರು.

“ಈ ವ್ಯವಸ್ಥೆಯ ಸಾಧನಗಳಾದ ಇವಿಎಂಗಳ ಸಮಗ್ರತೆ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳ ಮೇಲೆ ತರಲಾದ ಅಸಾಧಾರಣ ಒತ್ತಡದ ಬಗ್ಗೆ ಗಂಭೀರ ಪ್ರಶ್ನೆಗಳಿವೆ. ಹರ್ಯಾಣವು ‘ಡಬಲ್ ಇಂಜಿನ್’ ಸರ್ಕಾರವಾಗಿದೆ, ಆದ್ದರಿಂದ ಇಲ್ಲಿ ‘ಡಬಲ್’ ಒತ್ತಡವಿತ್ತು. ಉತ್ತಮ ಅಂತರದಿಂದ ಮುನ್ನಡೆ ಸಾಧಿಸಿದ್ದ ಅಭ್ಯರ್ಥಿಗಳು 50, 100, 250 ಮತಗಳಿಂದ ಸೋತಿದ್ದಾರೆ. ಇದು ಒತ್ತಡ ಮತ್ತು ತಿರುಚುವಿಕೆಯಿಂದ ಮಾತ್ರ ಸಾಧ್ಯ ಎಂದು ಜೈರಾಮ್‌ ರಮೇಶ್‌ ಹೇಳಿದರು.

ಟಾಪ್ ನ್ಯೂಸ್

Road Mishap: ಕಾರು ಅಪಘಾತ; ಪಾದಚಾರಿ ಸಾವು

Road Mishap: ಕಾರು ಅಪಘಾತ; ಪಾದಚಾರಿ ಸಾವು

KB-koliwada

Haryana Result: ಸಿದ್ದರಾಮಯ್ಯ ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಪರಿಣಾಮ: ಕೋಳಿವಾಡ

Madanthyar: ಉದ್ಯೋಗ ಕೊಡಿಸುವುದಾಗಿ 19.90 ಲಕ್ಷ ರೂ. ವಂಚನೆ

Madanthyar: ಉದ್ಯೋಗ ಕೊಡಿಸುವುದಾಗಿ 19.90 ಲಕ್ಷ ರೂ. ವಂಚನೆ

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

udupi-DC-office-Kota

Udupi: ಗ್ರಾ.ಪಂ ಸಿಬ್ಬಂದಿ ಮುಷ್ಕರದಿಂದ ಆಡಳಿತ ವ್ಯವಸ್ಥೆಯೇ ಸ್ಥಗಿತ: ಸಂಸದ ಕೋಟ ಶ್ರೀನಿವಾಸ

13-bharamasagara

Bharamasagara: ಸಾಲಭಾದೆಯಿಂದ ಮನನೊಂದು ನೇಣೆಗೆ ಶರಣಾದ ರೈತ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doctor’s case: 50 senior doctors of Kolkata hospital resign

Doctor Case: ಕೋಲ್ಕತಾ ಆಸ್ಪತ್ರೆಯ 50 ಹಿರಿಯ ವೈದ್ಯರ ರಾಜೀನಾಮೆ

The BJP people mocked Rahul by giving him Jalebi!

Haryana: ಜಿಲೇಬಿ ಕೊಟ್ಟು ರಾಹುಲ್‌ರನ್ನು ಲೇವಡಿ ಮಾಡಿದ ಬಿಜೆಪಿಗರು!

RG Kar Hospital: ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿ ಹಿರಿಯ ವೈದ್ಯರಿಂದ ಸಾಮೂಹಿಕ ರಾಜೀನಾಮೆ

RG Kar Hospital: ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿ ಹಿರಿಯ ವೈದ್ಯರಿಂದ ಸಾಮೂಹಿಕ ರಾಜೀನಾಮೆ

Haryana: How did Nayab Singh Saini become the “Nawab” of Haryana despite only being CM for 210 days?

Haryana: ಕೇವಲ 210 ದಿನ ಸಿಎಂ ಆದರೂ ನಯಾಬ್‌ ಸಿಂಗ್ ಸೈನಿ ಹರ್ಯಾಣದ ʼನವಾಬʼನಾಗಿದ್ದು ಹೇಗೆ?

farooq

Jammu Kashmir Result: ಜಮ್ಮು-ಕಾಶ್ಮೀರದ ನೂತನ ಸಿಎಂ ಹೆಸರು ಘೋಷಿಸಿದ ಫಾರೂಕ್ ಅಬ್ದುಲ್ಲಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Road Mishap: ಕಾರು ಅಪಘಾತ; ಪಾದಚಾರಿ ಸಾವು

Road Mishap: ಕಾರು ಅಪಘಾತ; ಪಾದಚಾರಿ ಸಾವು

KB-koliwada

Haryana Result: ಸಿದ್ದರಾಮಯ್ಯ ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಪರಿಣಾಮ: ಕೋಳಿವಾಡ

Doctor’s case: 50 senior doctors of Kolkata hospital resign

Doctor Case: ಕೋಲ್ಕತಾ ಆಸ್ಪತ್ರೆಯ 50 ಹಿರಿಯ ವೈದ್ಯರ ರಾಜೀನಾಮೆ

Madanthyar: ಉದ್ಯೋಗ ಕೊಡಿಸುವುದಾಗಿ 19.90 ಲಕ್ಷ ರೂ. ವಂಚನೆ

Madanthyar: ಉದ್ಯೋಗ ಕೊಡಿಸುವುದಾಗಿ 19.90 ಲಕ್ಷ ರೂ. ವಂಚನೆ

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.