Mangaluru: ಉಸಿರಾಟ ಸಮಸ್ಯೆ; ಎಂಟು ತಿಂಗಳ ಗರ್ಭಿಣಿ ಸಾವು
Team Udayavani, Oct 9, 2024, 6:45 AM IST
ಮಂಗಳೂರು: ನಗರ ಹೊರ ವಲಯದ ಅರ್ಕುಳ ಗಣೇಶ್‌ತೋಟ ನಿವಾಸಿ ಎಂಟು ತಿಂಗಳ ಗರ್ಭಿಣಿಯೊಬ್ಬರು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ಶರಣ್ಯ (29) ಮೃತ ದುರ್ದೈವಿ. ಅವರಿಗೆ ರವಿವಾರ ತಡರಾತ್ರಿ ಸುಮಾರು 1.15ರ ಸುಮಾರಿಗೆ ಉಸಿರಾಡಲು ಸಮಸ್ಯೆಯಾಗಿ ದಮ್ಮು ಕಟ್ಟುವುದಕ್ಕೆ ಆರಂಭವಾಗಿದೆ. ವೈದ್ಯರು ಮೊದಲೇ ನೀಡಿದ್ದ ಸೂಚನೆಯಂತೆ ವಾಕಿಂಗ್ ಮಾಡಿದರೂ ಕಡಿಮೆಯಾಗದೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ದಾರಿ ಮಧ್ಯದಲ್ಲಿ ಅವರಿಗೆ ವಾಂತಿಯಾಗಿದೆ. ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.
ಶರಣ್ಯ ಅವರು ರವಿವಾರವಷ್ಟೇ 29ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಮನೆಯಲ್ಲೇ ಸಣ್ಣ ಕಾರ್ಯಕ್ರಮವನ್ನೂ ಮಾಡಿದ್ದರು. ಎರಡನೇ ಬಾರಿ ಗರ್ಭಿಣಿಯಾಗಿದ್ದು, ಎರಡು ವರ್ಷದ ಒಂದು ಹೆಣ್ಣು ಮಗುವಿದೆ. ಎರಡು ಮೂರು ದಿನದ ಹಿಂದೆ ವೈದ್ಯರಲ್ಲಿಗೆ ತೆರಳಿ ತಪಾಸಣೆಯನ್ನೂ ಮಾಡಿಸಿಕೊಂಡು ಬಂದಿದ್ದರು.
ಶರಣ್ಯ ಅವರಿಗೆ ಮದುವೆಯಾಗಿ ಸುಮಾರು 8 ವರ್ಷವಾಗಿದ್ದು, ಪತಿಯೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದರು. ಗರ್ಭಿಣಿಯಾಗಿ ಎರಡು ತಿಂಗಳು ಆಗುತ್ತಲೇ ಊರಿಗೆ ಬಂದು ನೆಲೆಸಿದ್ದರು.
ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆಗೆ ನೈಜ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.