Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

ತುಮಕೂರು ಜಿಲ್ಲೆಯ ದಸರಾದಲ್ಲೂ ಪ್ರದರ್ಶನ.. 10 ದಿನ 10 ತಾಲೂಕಿನಲ್ಲಿ ಸ್ತಬ್ಧಚಿತ್ರ ಸಂಚಾರ

Team Udayavani, Oct 8, 2024, 9:28 PM IST

12-koratagere

ಕೊರಟಗೆರೆ: ವಿಜಯದಶಮಿ ಹಬ್ಬದಂದು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಸಸ್ಯ ಸಂಜೀವಿನಿ ಕ್ಷೇತ್ರದ ಸಿದ್ದರಬೆಟ್ಟ, ಏಷ್ಯಾ ಖಂಡದ ಏಕೈಕ ಏಕಶಿಲ ಬೆಟ್ಟ, ಮಧುಗಿರಿ ಬೆಟ್ಟ, ಏಳು ಸುತ್ತಿನ ಕೋಟೆ ಎಂದೇ ಹೆಸರುವಾಸಿಯಾದ ಚನ್ನರಾಯನದುರ್ಗ ಮತ್ತು ಸಸ್ಯ ಸಂಜೀವಿನಿ ಕ್ಷೇತ್ರವೆಂದು ಸುಪ್ರಸಿದ್ದಿ ಪಡೆದಿರುವ ಸಿದ್ದರಬೆಟ್ಟದ ಸ್ತಬ್ದಚಿತ್ರಗಳು ತುಮಕೂರು ಜಿಲ್ಲೆಯಿಂದ ಸೆ.12ರ ಶನಿವಾರ ಪ್ರದರ್ಶನವಾಗಲಿವೆ.

ತುಮಕೂರು ಜಿಲ್ಲಾಧಿಕಾರಿ ಡಾ.ಶುಭ ಕಲ್ಯಾಣ್ ಮತ್ತು ಜಿ.ಪಂ. ಸಿಇಓ ಜಿ.ಪ್ರಭು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯ 5 ಪ್ರಮುಖ ಕ್ಷೇತ್ರಗಳ ಮಾಹಿತಿ ಪಡೆದು ಕಲಾವಿದರಿಂದ ವಿನ್ಯಾಸ ಸಿದ್ದಪಡಿಸಿ ಅಂತಿಮವಾಗಿ ಸಿದ್ದರಬೆಟ್ಟ ಆಯ್ಕೆ ಮಾಡಿ ಜೊತೆಗೆ ಏಷ್ಯಾ ಖಂಡದ ಏಕಶಿಲಾ ಬೆಟ್ಟ ಮಧುಗಿರಿ ಮತ್ತು ಏಳು ಸುತ್ತಿನ ಕೋಟೆ ಆಗಿರುವ ಚನ್ನರಾಯನದುರ್ಗ ಸೇರಿದಂತೆ ಅರಸರು, ಸಂಜೀವಿನಿ ಪರ್ವತ, ಐತಿಹಾಸಿಕ ವಿಷಯಾಧಾರಿತ ಸ್ತಬ್ದಚಿತ್ರ ನಿರ್ಮಿಸಿ ದಸರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡಲು ಸಜ್ಜಾಗಿದೆ.

ಸ್ತಬ್ದಚಿತ್ರದ ವಿಶೇಷತೆ ಏನಿದೆ ಗೊತ್ತಾ..?

ಮೈಸೂರು ದಸರಾದಲ್ಲಿ ಪ್ರದರ್ಶನವಾಗುವ ಸ್ತಬ್ದಚಿತ್ರ 11 ಅಡಿ ಅಗಲ, 12 ಅಡಿ ಎತ್ತರ ಮತ್ತು 32 ಅಡಿ ಉದ್ದವಿದೆ. ಸ್ತಬ್ದಚಿತ್ರದ ಮುಂದಿನ ಅರ್ಧ ಭಾಗ ಸಿದ್ದರಬೆಟ್ಟ, ಶ್ರೀ ಸಿದ್ದೇಶ್ವರ ಸ್ವಾಮಿ, ಗುಹೆ, ಮಹಾದ್ವಾರ ಮತ್ತು ಮೆಟ್ಟಿಲುಗಳು ಮೂಡಿಬರಲಿದೆ. ರಾಜ ಕುರಂಗರಾಯ ಮತ್ತು ಐತಿಹಾಸಿಕ ಕುರುಹುಗಳಿವೆ. ಹಿಂದಿನ ಅರ್ಧಭಾಗದಲ್ಲಿ ಮಧುಗಿರಿ ಮತ್ತು ಚನ್ನರಾಯನದುರ್ಗದ ಪ್ರತಿಕೃತಿ, ಅರಸರ ಚಿತ್ರಗಳು, ಇತಿಹಾಸದ ಸಾಕ್ಷಿಗಳಾದ ಶಾಸನ, ವೀರಗಲ್ಲು, ದೇವಾಲಯಗಳ ಪ್ರತಿಕೃತಿ ಮೂಡಿ ಬಂದಿದೆ.

5 ಸಲ ಬಹುಮಾನ ಮತ್ತು ಜನಮೆಚ್ಚುಗೆ..

ತುಮಕೂರು ಜಿಲ್ಲೆಯನ್ನು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ 2014 ರಿಂದ 6 ಸಲ ಪ್ರತಿನಿಧಿಸಿ ತಿಪಟೂರಿನ ಅರಳುಗುಪ್ಪೆಯ ಶ್ರೀಚನ್ನಕೇಶವ ದೇವಾಲಯ (2014), ಎಡೆಯೂರು ಶ್ರೀಸಿದ್ದಲಿಂಗೇಶ್ವರ ದೇವಾಲಯ (2017), ಸಿದ್ದಗಂಗೆಯ ಶ್ರೀಶಿವಕುಮಾರ ಸ್ವಾಮಿಗಳು (2018), ಅಕ್ಷರ ದಾಸೋಹ ಸಿದ್ದಗಂಗಾ ಮಠ (2019), ನಿಟ್ಟೂರು ಹೆಚ್‍ಎಎಲ್ ಘಟಕ (2022), ಮೂಡಲಪಾಯ ಯಕ್ಷಗಾನ (2023) ದ ಬಹುಮಾನ ಜನಮೆಚ್ಚುಗೆ ಪಡೆದಿದೆ. 5 ಬಾರಿ ಬಹುಮಾನ ತಂದುಕೊಟ್ಟ ತಿಪಟೂರಿನ ಕಲಾವಿದ ತಿಪಟೂರು ಕೃಷ್ಣ ಮತ್ತು ಅವರ ತಂಡ ಈ ಬಾರಿಯು ಸ್ತಬ್ದಚಿತ್ರ ನಿರ್ಮಾಣದ ಹೊಣೆಗಾರಿಕೆ ಹೊತ್ತಿದೆ.

10 ತಾಲೂಕಿನಲ್ಲಿ 10 ದಿನ ಸಂಚಾರ..

ಮೈಸೂರು ದಸರಾದ ಜಂಬೂ ಸವಾರಿ ಮುಗಿದ ಮಾರನೇಯ ದಿನದಿಂದ ಸಸ್ಯ ಸಂಜೀವಿನಿ ಕ್ಷೇತ್ರ, ಏಳು ಸುತ್ತಿನ ಕೋಟೆ ಮತ್ತು ಏಕಶಿಲಾ ಬೆಟ್ಟದ ಸ್ತಬ್ದಚಿತ್ರವು ತುಮಕೂರು ಜಿಲ್ಲೆಯ 10 ತಾಲೂಕಿನಲ್ಲಿ ಸಂಭ್ರಮ ಮತ್ತು ಸಡಗರದಿಂದ ಸಂಚರಿಸಲಿದೆ. ಪ್ರತಿದಿನ 1ತಾಲೂಕಿನಲ್ಲಿ ಸಂಚಾರ ನಡೆಸಲು ಸಂಘ-ಸಂಸ್ಥೆ, ಇತಿಹಾಸ ತಜ್ಞರು ಮತ್ತು ಅಧಿಕಾರಿಗಳ ತಂಡ ವಿಶೇಷ ಕಾಳಜಿ ವಹಿಸಿವೆ.

ಸಿದ್ದರಬೆಟ್ಟ ಸ್ತಬ್ದಚಿತ್ರದ ವಿಶೇಷತೆ..

ಸಸ್ಯಸಂಜೀವಿನಿ ಕ್ಷೇತ್ರ ಎಂದೇ ಸುಪ್ರಸಿದ್ದ ಪಡೆದಿರುವ ಸಿದ್ದರಬೆಟ್ಟ ಸಮುದ್ರ ಮಟ್ಟದಿಂದ 2650 ಅಡಿ ಎತ್ತರದಲ್ಲಿದೆ. ಕೇವಲ ಸ್ಪರ್ಶದಿಂದಲೇ ಕಬ್ಬಿಣವೂ ಬಂಗಾರವಾಗುವ ಔಷಧಿ ಸಸ್ಯಗಳ ಸಂಜೀವಿನಿ ಬೆಟ್ಟದಲ್ಲಿದೆ. ರಾಜ ಕುರಂಗರಾಯ ಆದಿಯಿಂದಲೂ ಶ್ರೀಗಳ ಅಣತಿಯಂತೆ ಬೆಟ್ಟವನ್ನು ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕುರಂಗರಾಯ ಮೈಸೂರು ಪ್ರಾಂತ್ಯದ ಮೊದಲ ದಲಿತ ರಾಜ ಕಟ್ಟಿದ ಕೋಟೆಯು ಕುರಂಗಕೋಟೆ ಎನಿಸಿದೆ. ಚರ್ಮದ ನಾಣ್ಯವನ್ನು ಜಾರಿಗೆ ತಂದ ಪ್ರಥಮ ರಾಜನೆಂಬ ಹೆಗ್ಗಳಿಕೆಗೆ ಕುರಂಗರಾಯನಿಗೆ ಇದ್ದು ಇವೆಲ್ಲವು ಸ್ತಬ್ದಚಿತ್ರದಲ್ಲಿ ಅಡಕವಾಗಿದೆ.

ಏಷ್ಯಾಖಂಡದ ಅತಿದೊಡ್ಡ ಏಕಶಿಲಾಬೆಟ್ಟ..

ತುಮಕೂರು ಜಿಲ್ಲೆಯ ಮಧುಗಿರಿ ಕೇಂದ್ರದಲ್ಲಿನ ಏಕಶಿಲಾಬೆಟ್ಟ ಸಮುದ್ರ ಮಟ್ಟದಿಂದ 3930 ಅಡಿ ಎತ್ತರದಲ್ಲಿದೆ. ವಿಶೇಷವಾದ ವಾಸ್ತುಶಿಲ್ಪ ಕೋಟೆ ಎನಿಸಿರುವ ಮಧುಗಿರಿ ಕೋಟೆಯನ್ನು 17ನೇ ಶತಮಾನದಲ್ಲಿ ವಿಜಯನಗರ ರಾಜವಂಶದವರಿಂದ ನಿರ್ಮಿಸಲ್ಪಟ್ಟಿದೆ. ಕೋಟೆಯ ಗೋಡೆಗಳು ತುಂಬಾ ಕಡಿದಾಗಿದ್ದು ಶತ್ರುಗಳು ಏರಲು ಅಸಾಧ್ಯ. ಕೋಟೆಯ ವಿಶಿಷ್ಟ ಎಂದರೇ ಬೃಹತ್ ಪ್ರವೇಶದ್ವಾರ. ಹೀರೇಗೌಡ ಎಂಬ ಸಾಮಾಂತ ರಾಜನ ಆಳ್ವಿಕೆಯಲ್ಲಿದ್ದು ಮೈಸೂರು ಅರಸರ ಪ್ರಮುಖ ಭದ್ರಕೋಟೆ ಆಗಿತ್ತು ಎಂಬ ಇತಿಹಾಸವಿದೆ.

ಏಳು ಸುತ್ತಿನ ಕೋಟೆ ಸಿ.ಎನ್.ದುರ್ಗ..

ಸಿದ್ದರಬೆಟ್ಟ ಸಮೀಪವೇ ಇರುವ ಚನ್ನರಾಯನದುರ್ಗ ಏಳು ಸುತ್ತಿನ ಕೋಟೆ ಎಂದೇ ಸುಪ್ರಸಿದ್ದಿ ಪಡೆದಿದೆ. ಇತಿಹಾಸದ ಹಲವಾರು ಸಾಮ್ರಾಜ್ಯಗಳ ಉಗಮ ಮತ್ತು ಪತನಕ್ಕೆ ಸಾಕ್ಷಿಯಾಗಿರುವ ಏಳು ಸುತ್ತಿನ ಕೋಟೆಯು ಸುಮಾರು 3734 ಅಡಿ ಎತ್ತರದಲ್ಲಿದೆ. ಆಕರ್ಷಕವಾಗಿದ್ದ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಮೈಸೂರು ಒಡೆಯರು, ಮರಾಠರು ಸತತ ಸೆಣಸಾಟ ನಡೆಸಿದ್ದರು.

ನಂತರ ಆಂಗ್ಲರು ವಶಪಡಿಸಿಕೊಂಡಿದ್ದರೂ ಮೈಸೂರು ಅರಸರ ನಿರಂತರ ಹೋರಾಟದಿಂದ ಬಿಡುಗಡೆಗೊಂಡಿತ್ತು. ಕೋಟೆಯೂ ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗಿದೆ. ತಳದಿಂದ ಬೆಟ್ಟದ ತುದಿಯವರೆಗೂ ಮೂರು ಹಂತಗಳಲ್ಲಿ ಸುಂದರವಾಗಿ, ರಕ್ಷಣಾತ್ಮಕವಾಗಿ ಕೋಟೆ ನಿರ್ಮಿಸಲಾಗಿದೆ.

ಮೈಸೂರು ದಸರಾದಲ್ಲಿ ಕೊರಟಗೆರೆಯ ಸಿದ್ದರಬೆಟ್ಟ, ಚೆನ್ನರಾಯನದುರ್ಗ ಮತ್ತು ಮಧುಗಿರಿಯ ಏಕಶಿಲಾ ಬೆಟ್ಟದ ಸ್ತಬ್ದಚಿತ್ರದ ಜೊತೆ ಮಹಾರಾಜರ ಇತಿಹಾಸ ಒಳಗೊಂಡ ಚಿತ್ರ ಪ್ರದರ್ಶನದ ಆಗಲಿದೆ. 15 ಜನ ಕಲಾವಿದರಿಂದ ಕಳೆದ 20 ದಿನಗಳಿಂದ ಸ್ತಬ್ದಚಿತ್ರ ತಯಾರಿಸಲಾಗಿದೆ. ಇದು ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆಯ ವಿಚಾರ. – ಜಿ.ಪ್ರಭು. ಜಿಪಂ ಸಿಇಓ. ತುಮಕೂರು

ಟಾಪ್ ನ್ಯೂಸ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TMK-Cri-Stadium

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

2-tumkur

Tumkur: ಬಸ್ ಪಲ್ಟಿಯಾಗಿ ಮೂವರು ಸಾವು

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

hejjenu

Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

accident

Shirva: ಬೈಕ್‌ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.