BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

Team Udayavani, Oct 8, 2024, 11:06 PM IST

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.

ಆಯಾ ಸ್ಪರ್ಧಿಗಳು ಯಾಕೆ ಮನೆಯಲ್ಲಿ ಇರಬೇಕು ಇರಬಾರದು. ತಮ್ಮ ಸಾಮರ್ಥ್ಯದ ಬಗ್ಗೆ ‌ಮಾತನಾಡಿದ್ದು, ಎದುರಾಳಿ ಸ್ಪರ್ಧಿ ತಾವು ಅವರಿಗಿಂತ ಯಾಕೆ ಬೆಸ್ಟ್ ಎನ್ನುವ ಸಮರ್ಥನೆ ನೀಡಿದರು.

ನಾಮಿನೇಟ್ ಪ್ರಕ್ರಿಯೆ ಸಂದರ್ಭದಲ್ಲಿ ಕಾರಣಗಳನ್ನು ‌ನೀಡಿ ಕೆಲ ಸ್ಪರ್ಧಿಗಳು ಕಣ್ಣೀರಿಟ್ಟರು.

ಗೌತಮಿ ಹಾಗೂ ರಂಜಿತ್ ನಡುವೆ ಅರ್ಹತೆ ವಿಚಾರದಲ್ಲಿ ಕೆಲ ಹೊತ್ತು ವಾಗ್ವಾದ ನಡೆಯಿತು. ನಾನು ನೀವು ಹೇಳಿದ್ದನ್ನು ಒಪ್ಪಲ್ಲ. ನೀವು ನನ್ನನ್ನು ಶಕ್ತಿಹೀನಳೆಂದು (ಎನರ್ಜಿ ಇಲ್ಲದವಳು) ಗೌತಮಿ ರಂಜಿತ್ ಮಾತಿಗೆ ಉತ್ತರಿಸಿದರು.

ನಾಮಿನೇಟ್ ಆದವರಿಗೆ ಮುಖಕ್ಕೆ ಕಪ್ಪು ಮಸಿಯನ್ನು ಹಾಕಲಾಗಿದೆ.

ಮಧ್ಯರಾತ್ರಿ ಚಪಾತಿಗೆ ಬೇಡಿಕೆಯಿಟ್ಟ ನರಕ ವಾಸಿಗಳು:
ಸ್ವರ್ಗ ನಿವಾಸಿಗಳಿಂದ ನರಕ ವಾಸಿಗಳು ಮಧ್ಯರಾತ್ರಿ ಚಪಾತಿ ಮಾಡಿಕೊಡಲು ಹೇಳಿ ಸತಾಯಿಸಿದರು. ಬೆಳಗ್ಗೆ 4 ಗಂಟೆಗೆ ಚಹಾ ಮಾಡಿಕೊಡಿ ಎಂದು ಜಗದೀಶ್ ಕ್ಯಾಪ್ಟನ್ ಬಳಿ ಹೇಳಿದರು. ಆದರೆ ಚಹಾ ಮಾಡಿಕೊಡದ್ದಕ್ಕೆ ಜಗದೀಶ್ ಕ್ಯಾಪ್ಟನ್ ಅವರ ಮೇಲೆ ಗರಂ ಆದರು. ನೀವು ಹೇಳಿದ್ದನೆಲ್ಲ ಮಾಡಿಕೊಟ್ಟಿದ್ದೇವೆ. ಆದ್ರೆ ಯೋಗ್ಯತೆ ಅದು ಇದು ಅಂಥ ಮಾತನಾಡ್ಬೇಡಿ ಹಾಗೆ ಮಾಡಿದ್ರೆ ಶಿಕ್ಷೆ ಕೊಡುವುದು ಖಚಿತವೆಂದು ಕ್ಯಾಪ್ಟನ್ ಹಂಸಾ ಜಗದೀಶ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕ್ಯಾಪ್ಟನ್ ಗೆ ಕ್ವಾಟ್ಲೆ ಕೊಟ್ಟ ಜಗದೀಶ್:
ಜಗದೀಶ್ ಅವರನ್ನು ಮನೆ ಕೆಲಸಕ್ಕೆ ಕರೆದುಕೊಂಡು ಬರಲು ಕ್ಯಾಪ್ಟನ್ ಹಂಸಾ ಅವರು ಅನ್ನಿಸುತ್ತಿದೆ ಹಾಡಿಗೆ ಎದೆಯ ಮೇಲೆ ಕಾಲಿಟ್ಟು ನಡೆದ ಪ್ರಸಂಗಕ್ಕೆ ಇಡೀ ಮನೆಮಂದಿಯ ನಗುವಿಗೆ ಕಾರಣವಾಯಿತು. ಮನೆಯವರನ್ನು ತನ್ನ ನೃತ್ಯದ ಮೂಲಕ ಜಗದೀಶ್ ಮನರಂಜನೆ ನೀಡಿದರು.

ನಿಯಮ ಉಲ್ಲಂಘನೆ; ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ :
ಟಾಸ್ಕ್ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಕಿದ್ದ ಬಿಳಿ ಬಣ್ಣದ ಪರೆದಯನ್ನು ಸ್ಪರ್ಧೆಯೊಬ್ಬರು ಇಣುಕಿ ನೋಡಿದ ಪರಿಣಾಮ ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಡೀ ಮನೆಗೆ ಬಿಗ್ ಬಾಸ್ ನಾಮಿನೇಟ್ ಶಿಕ್ಷೆಯನ್ನು ನೀಡಿದ್ದಾರೆ.

ಸುರೇಶ್ ಅವರು ಪರದೆ ಆಚೆ ರೆಡಿಯಾಗುತ್ತಿರುವ ಸ್ಪರ್ಧೆಯನ್ನು ‌ನೋಡಿ ಬಾ ಎಂದು ಮಾನಸ ಅವರಿಗೆ ಹೇಳಿದ್ದಾರೆ. ಮಾನಸ ಹೋದ ಬಳಿಕ ಜಗದೀಶ್ ಕೂಡ ಪರದೆ ಆಚೆ ಹೋಗಿದ್ದಾರೆ. ಇದಕ್ಕೂ ಮೊದಲು ಶಿಶಿರ್, ಮೋಕ್ಷಿತಾ ಅವರು ಪರದೆ ಆಚೆ ಇಣುಕಿ ನೋಡಿದ್ದಾರೆ. ಆ ಮೂಲಕ ಮುಖ್ಯವಾದ ನಿಯಮದ ಉಲ್ಲಂಘನೆ ಆಗಿದೆ.

ಕ್ಯಾಪ್ಟನ್ ಇದನ್ನು ನೋಡಿಯೂ ಯಾವ ಕ್ರಮವನ್ನು ತೆಗೆದುಕೊಳ್ಳದೆ ಇರುವುದರಿಂದ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಹಂಸಾ ಅವರಿಗೆ ಶಿಕ್ಷೆ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಪ್ಟನ್ ಒಬ್ಬರ ವಿಶೇಷ ಅಧಿಕಾರ ಇದರಿಂದ ಕಳೆದುಕೊಂಡಂತಾಗಿದೆ.

ಮೊದಲು ನಾಮಿನೇಟ್ ಆದವರು ಯಾರು..?
ಜಗದೀಶ್ ಅವರು ಕ್ಯಾಪ್ಟನ್ ‌ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದು, ತಿವಿಕ್ರಮ್, ಅನುಷಾ,ಧನರಾಜ್, ಐಶ್ವರ್ಯಾ, ಮಾನಸ, ರಂಜಿತ್ ಅವರು ನಾಮಿನೇಟ್ ಆಗಿದ್ದರು.

ಟಾಪ್ ನ್ಯೂಸ್

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Parameshwar

Congress Politics: ಕಾಫೀ ಪೇ ಚರ್ಚೆ ಆಗಬೇಕಲ್ಲವೇ: ಗೃಹ ಸಚಿವ ಪರಮೇಶ್ವರ್‌

Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ

Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

Sslc

PUC: ವಿಜ್ಞಾನದಲ್ಲಿ ಪ್ರೀತಂ, ವಾಣಿಜ್ಯದಲ್ಲಿ ಸಾನ್ವಿ, ಕಲಾ ವಿಭಾಗದಲ್ಲಿ ವೇದಾಂತ್‌ ಟಾಪರ್‌

Rain; ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರು ಜಖಂ

Rain; ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರು ಜಖಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

12

Bhuvanam Gaganam Movie: ಹೃದಯವೇ ಚೂರು ನಿಲ್ಲು…

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

yash shetty’s jungle mangal kannada movie

Jangal Mangal Movie: ಜಂಗಲ್‌ನಲ್ಲಿ ಮಂಗಲ್‌ ಲವ್‌ ಸ್ಟೋರಿ

Shine shetty’s just married movie teaser out

Just Married: ಟೀಸರ್‌ನಲ್ಲಿ ʼಜಸ್ಟ್‌ ಮ್ಯಾರೀಡ್‌ʼ; ನಿರ್ಮಾಣದತ್ತ ಅಜನೀಶ್‌ ಲೋಕನಾಥ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Parameshwar

Congress Politics: ಕಾಫೀ ಪೇ ಚರ್ಚೆ ಆಗಬೇಕಲ್ಲವೇ: ಗೃಹ ಸಚಿವ ಪರಮೇಶ್ವರ್‌

Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ

Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.