INDvsBAN; ಬಾಂಗ್ಲಾ ವಿರುದ್ಧ ದ್ವಿತೀಯ ಟಿ20 ಪಂದ್ಯ: ಕೋಟ್ಲಾ ವಶಕ್ಕೆ ಸೂರ್ಯ ಪಡೆ ಸಜ್ಜು

Team Udayavani, Oct 9, 2024, 7:05 AM IST

INDvsBAN; ಬಾಂಗ್ಲಾ ವಿರುದ್ಧ ದ್ವಿತೀಯ ಟಿ20 ಪಂದ್ಯ: ಕೋಟ್ಲಾ ವಶಕ್ಕೆ ಸೂರ್ಯ ಪಡೆ ಸಜ್ಜು

ಹೊಸದಿಲ್ಲಿ: ಗ್ವಾಲಿಯರ್‌ಯಲ್ಲಿ ಗೆಲುವಿನ ಗಮ್ಮತ್ತು ಆಚರಿಸಿದ ಭಾರತ ಯುವ ತಂಡ, ಬುಧವಾರ ಕೋಟ್ಲಾ ಕದನದಲ್ಲಿ ಬಾಂಗ್ಲಾ ವನ್ನು ಮಣಿಸಿ ಟಿ20 ಸರಣಿ ವಶಪಡಿಸಿ ಕೊಳ್ಳಲು ಸಿದ್ಧತೆ ಆರಂಭಿಸಿದೆ. ಇನ್ನೊಂದೆಡೆ ಸರಣಿ ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯವನ್ನು ಬಾಂಗ್ಲಾ ಗೆಲ್ಲಲೇಬೇಕಿದೆ.

ಬಾಂಗ್ಲಾದೇಶದ ಟಿ20 ತಂಡಕ್ಕೆ ಹೋಲಿ ಸಿದರೆ ಭಾರತ ತಂಡದ ಅನುಭವ ಕಡಿಮೆ. ಪ್ರಮುಖ ತ್ರಿವಳಿಗಳ ವಿದಾಯ ಒಂದೆಡೆ ಯಾದರೆ, ಜೈಸ್ವಾಲ್‌, ಗಿಲ್‌, ಪಂತ್‌, ಅಕ್ಷರ್‌, ಬುಮ್ರಾ ಅವರಂಥ ಟಿ20 ಸ್ಪೆಷಲಿಸ್ಟ್‌ಗ ಳಿಗೆ ನೀಡಲಾದ ವಿಶ್ರಾಂತಿ ಇನ್ನೊಂದೆಡೆ. ಇವೆಲ್ಲವನ್ನು ಮೀರಿಯೂ ಗ್ವಾಲಿಯರ್‌ನಲ್ಲಿ ಸೂರ್ಯಕುಮಾರ್‌ ಪಡೆಯ ಸಾಧನೆ ಪ್ರಶಂಸ ನೀಯ. 7 ವಿಕೆಟ್‌ಗಳ ವೀರೋಚಿತ ಗೆಲುವು ನಮ್ಮದಾಗಿತ್ತು. 12 ಓವರ್‌ಗಳೊಳಗಾಗಿ ಗುರಿ ಮುಟ್ಟಿದ್ದು ಹೆಗ್ಗಳಿಕೆಯ ಸಂಗತಿ.

ಬೌಲಿಂಗ್‌ನಲ್ಲಿ ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಮಾಯಾಂಕ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಹಾರ್ದಿಕ್‌ ಪಾಂಡ್ಯ… ಎಲ್ಲರೂ ನಿಯಂತ್ರಣ ಸಾಧಿಸಿ ಬಾಂಗ್ಲಾ ಪಡೆಯನ್ನು 127ರ ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಚೇಸಿಂಗ್‌ ವೇಳೆ ಸ್ಯಾಮ್ಸನ್‌, ಸೂರ್ಯ, ಪಾಂಡ್ಯ ಬಿರುಸಿನ ಆಟವಾಡಿದರು. ಅಭಿಷೇಕ್‌ ಶರ್ಮ ಉತ್ತಮ ಲಯದಲ್ಲಿದ್ದರೂ ಎಡವಟ್ಟು ಮಾಡಿಕೊಂಡು ರನೌಟ್‌ ಆದರು. ಒಟ್ಟಾರೆ ಯಂಗ್‌ ಇಂಡಿಯಾದ್ದು ಸಾಂ ಕ ಸಾಧನೆಯಾಗಿ ದಾಖಲಾಗಿದೆ. ಹೊಸದಿಲ್ಲಿಯಲ್ಲೂ ಇದು ಪುನರಾವರ್ತನೆಗೊಳ್ಳಬೇಕಿದೆ.

ಮೊದಲ ಆಯ್ಕೆಯ ಆರಂಭಿಕರಾದ ಜೈಸ್ವಾಲ್‌-ಗಿಲ್‌ ಗೈರಲ್ಲಿ ಸಂಜು ಸ್ಯಾಮ್ಸನ್‌ ಓಪನಿಂಗ್‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. 2015ರಲ್ಲಿ ಭಾರತ ತಂಡವನ್ನು ಪ್ರವೇಶಿಸಿದಂದಿನಿಂದ ಅಂದರ್‌- ಬಾಹರ್‌ ಆಗುತ್ತಲೇ ಇದ್ದ ಸ್ಯಾಮ್ಸನ್‌, ಗ್ವಾಲಿಯರ್‌ನಲ್ಲಿ 19 ಎಸೆತಗಳಿಂದ 29 ರನ್‌ ಮಾಡಿ ಗಮನ ಸೆಳೆದರು. ರಿಂಕು ಸಿಂಗ್‌, ರಿಯಾನ್‌ ಪರಾಗ್‌ ಅವರಿಗೆ ಬ್ಯಾಟಿಂಗ್‌ ಅವಕಾಶ ಲಭಿಸಿರಲಿಲ್ಲ. ಒಮ್ಮೆ ಖಾಯಂ ಆಟಗಾರರು ತಂಡಕ್ಕೆ ಮರಳಿದ ಬಳಿಕ ಈಗಿನ ಬಹುತೇಕ ಆಟಗಾರರು ಹೊರಬೀಳುವುದು ಖಾತ್ರಿ. ಹೀಗಾಗಿ ಈ ಅವಕಾಶವನ್ನು ಬಳಸಿ ಕೊಂಡು ಸರಣಿ ಗೆಲುವು ತಂದಿತ್ತರೆ ಇದೊಂದು ಮಹಾನ್‌ ಸಾಧನೆಯಾಗಿ ದಾಖಲಾಗಲಿದೆ.

ಗೆಲುವು ಕಾಣದ ಬಾಂಗ್ಲಾ

ಪಾಕಿಸ್ಥಾನ ವಿರುದ್ಧದ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡು ಬಂದ ಬಾಂಗ್ಲಾ ಅಪಾಯಕಾರಿಯಾಗಿ ಗೋಚರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಭಾರತಕ್ಕೆ ಕಾಲಿಟ್ಟ ಗಳಿಗೆಯಿಂದ ನಜ್ಮುಲ್‌ ಹುಸೇನ್‌ ಪಡೆ ಗೆಲುವಿನ ಮುಖವನ್ನೇ ಕಂಡಿಲ್ಲ.

“ನಾವು ಕೆಟ್ಟದಾಗೇನೂ ಆಡಿಲ್ಲ. ಆದರೆ ಕಳೆದ ಸುದೀರ್ಘಾವಧಿಯಿಂದ ಈ ಮಾದರಿಯಲ್ಲಿ ಉತ್ತಮ ಆಟವಾಡಿಲ್ಲ. ಇದೊಂದು ಕಳಪೆ ತಂಡ ಎಂದು ಅನಿಸುವುದೂ ಇಲ್ಲ. ಬ್ಯಾಟಿಂಗ್‌ ದೌರ್ಬಲ್ಯ ನಮ್ಮನ್ನು ಕಾಡುತ್ತಿದೆ’ ಎಂಬುದಾಗಿ ನಜ್ಮುಲ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

pramod madhwaraj

Pramod Madhwaraj;ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು

1-koppala

Koppala: ಉದ್ಯಮಿ ಅರ್ಜುನ್ ಸಾ ಕಾಟ್ವಾ ಶವ ಪತ್ತೆ

1-aaaaa

Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Women’s T20 World Cup: ಲಂಕಾ ಎದುರಾಳಿ: ಭಾರತಕ್ಕೆ ಬೇಕಿದೆ “ರನ್‌ ರೇಟ್‌ ಗೆಲುವು’

Women’s T20 World Cup: ಲಂಕಾ ಎದುರಾಳಿ: ಭಾರತಕ್ಕೆ ಬೇಕಿದೆ “ರನ್‌ ರೇಟ್‌ ಗೆಲುವು’

shami is not the part of Bengal Ranji Team

Ranji Trohpy: ಶಮಿ ಬಂಗಾಲ ತಂಡದಲ್ಲಿಲ್ಲ; ಮುಂಬೈಗೆ ಸರ್ಫರಾಜ್‌ ಅಲಭ್ಯ

Bangladesh Cricket: Another senior player announced his farewell in the midst of the India series

Bangladesh Cricket: ಭಾರತ ಸರಣಿಯ ನಡುವೆ ವಿದಾಯ ಘೋಷಿಸಿದ ಮತ್ತೊಬ್ಬ ಹಿರಿಯ ಆಟಗಾರ

IPL 2

IPL-2025;ಹರಾಜು ಯುಎಇ ಬದಲಿಗೆ ಬೇರೊಂದು ಅರಬ್ ರಾಷ್ಟ್ರದಲ್ಲಿ?

1-lll

Women’s T20 World Cup Cricket; ಲಂಕಾ ವಿರುದ್ಧ ಎಚ್ಚರಿಕೆಯ ಆಟ ಅಗತ್ಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

3-ankola

Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್‌ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.