National Film Award: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರದಾನ
ಕನ್ನಡಕ್ಕೆ ಒಟ್ಟು 7 ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ʼದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿʼ ವಿತರಣೆ
Team Udayavani, Oct 9, 2024, 7:58 AM IST
ಹೊಸದಿಲ್ಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ಈ ಬಾರಿ ಕನ್ನಡಕ್ಕೆ 7 ಪ್ರಶಸ್ತಿಗಳು ಪ್ರಾಪ್ತವಾಗಿದ್ದವು. “ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್ ಶೆಟ್ಟಿ “ಅತ್ಯುತ್ತಮ ನಟ’ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಅವರಿಂದ ಸ್ವೀಕರಿಸಿದರು.
ಇದಲ್ಲದೆ “ಕಾಂತಾರ’ ಸಿನೆಮಾಕ್ಕಾಗಿ “ಅತ್ಯುತ್ತಮ ಮನೋರಂಜನೆ ಸಿನೆಮಾ’, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು “ಕೆಜಿಎಫ್ -2′, ಸಾಹಸ ನಿರ್ದೇಶನಕ್ಕಾಗಿ ಇರುವ ಪ್ರಶಸ್ತಿ “ಕೆಜಿಎಫ್ -2′, “ಮಧ್ಯಂತರ’ ಸಿನೆಮಾಕ್ಕಾಗಿ “ಅತ್ಯುತ್ತಮ ಸಂಕಲನ’ ಪ್ರಶಸ್ತಿಯನ್ನು ಸುರೇಶ್ ಅರಸ್, ನಿರ್ದೇಶಕರ ಚೊಚ್ಚಲ ಸಿನೆಮಾಕ್ಕಾಗಿನ ಪ್ರಶಸ್ತಿಯನ್ನು ಮಧ್ಯಂತರ’ ಸಿನೆಮಾ ನಿರ್ದೇಶಕ ದಿನೇಶ್ ಶೆಣೈ, ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ’ ರಂಗ ವೈಭೋಗ’ ಸಿನೆಮಾಕ್ಕೆ ನೀಡಿ ಗೌರವಿಸಲಾಯಿತು.
🏆70th National Film Awards🏆
President Droupadi Murmu confers National Award to Actor, Rishab Shetty (@shetty_rishab) for ‘Best Actor in a Leading Role’ in ‘KANTARA’#70thNationalFilmAwards #NationalFilmAwards pic.twitter.com/0QXvR1EnUw
— PIB India (@PIB_India) October 8, 2024
ಜತೆಗೆ ಈ ಬಾರಿಯ ಪ್ರತಿಷ್ಠಿತ “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಹಿರಿಯ ನಟ ಮಿಥುನ್ ಚಕ್ರವರ್ತಿಯವರಿಗೂ ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.
ಜನಪ್ರಿಯ ಚಲನಚಿತ್ರಗಳಾದ ಕಾಂತಾರ ಹಾಗೂ ಶ್ರೇಷ್ಠ ಕನ್ನಡ ಚಿತ್ರ ಕೆಜಿಎಫ್ -2 ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ವಿಜಯ್ ಕಿರಗಂದೂರು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪ್ರಶಸ್ತಿ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.