![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 9, 2024, 8:45 AM IST
ಗೊಂಡಾ(ಉತ್ತರ ಪ್ರದೇಶ): ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕುಸ್ತಿಪಟು ವಿನೇಶ್ ಫೋಗಾಟ್ ಗೆದ್ದ ಕೆಲವೇ ಗಂಟೆಗಳ ನಂತರ, ಬಿಜೆಪಿಯ ಮಾಜಿ ಸಂಸದ ಬ್ರಜ್ ಭೂಷಣ್ ಶರಣ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಆಕೆ ಗೆಲುವು ಸಾಧಿಸಲು ನನ್ನ ಹೆಸರಿನ ಶಕ್ತಿ ಸಹಾಯ ಮಾಡಿದೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ವಿನೇಶ್ ಅವರು 65,080 ಮತಗಳನ್ನು ಗಳಿಸಿ 6,105 ಮತಗಳಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು ಸೋಲಿಸುವ ಮೂಲಕ ಜುಲಾನಾ ವಿಧಾನಸಭೆ ಕ್ಷೇತ್ರದಲ್ಲಿ ಜಯ ಸಾಧಿಸಿ ವಿಧಾನ ಸಭೆ ಪ್ರವೇಶಿಸಿದ್ದಾರೆ.
“ಅಕೆ ನನ್ನ ಹೆಸರನ್ನು ಬಳಸಿಕೊಂಡು ಗೆದ್ದರೆ, ಅದರರ್ಥ ನಾನೊಬ್ಬ ಮಹಾನ್ ವ್ಯಕ್ತಿ. ಕನಿಷ್ಠ ನನ್ನ ಹೆಸರಿಗಾದರೂ ಆಕೆಯ ರಾಜಕೀಯ ಯಾನಕ್ಕೆ ಸಹಾಯ ಮಾಡುವಷ್ಟು ಶಕ್ತಿ ಇದೆಯಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಸಿಂಗ್ ಹೇಳಿಕೆ ನೀಡಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ವಿನೇಶ್ ಫೋಗಾಟ್ ಎಲ್ಲಿಗೆ ಹೋದರೂ, ವಿನಾಶವು ಅವಳನ್ನು ಹಿಂಬಾಲಿಸುತ್ತದೆ, ಮತ್ತು ಭವಿಷ್ಯದಲ್ಲಿ ಅದು ಸಂಭವಿಸುತ್ತದೆ. ಅವಳು ಸ್ವತಃ ಚುನಾವಣೆಯಲ್ಲಿ ಗೆದ್ದಿರಬಹುದು ಆದರೆ ಕಾಂಗ್ರೆಸ್ ಸಂಪೂರ್ಣವಾಗಿ ಅವನತಿ ಹೊಂದುತ್ತದೆ. ಈ ರೀತಿಯ ಕುಸ್ತಿಪಟುಗಳು ಹೀರೋಗಳಲ್ಲ ಅವರು ಹರಿಯಾಣಕ್ಕೆ ಖಳನಾಯಕರು” ” ಎಂದು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥ, ಮಾಜಿ ಬಿಜೆಪಿ ಸಂಸದ ಕಿಡಿ ಕಾರಿದ್ದಾರೆ.
”ಹರಿಯಾಣದಲ್ಲಿ ಬಿಜೆಪಿ 48 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಗಳಿಸಿದೆ. ಕಾಂಗ್ರೆಸ್ 37 ಸ್ಥಾನ ಗಳಿಸಿದೆ. ರಾಹುಲ್ ಗಾಂಧಿಯವರ ಪ್ರಯತ್ನಗಳು ವಿಫಲವಾಗುತ್ತಿವೆ. ದೇಶದ ಜನರು ತಮ್ಮನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಈಗ ಕಾಂಗ್ರೆಸ್ ಒಪ್ಪಿಕೊಳ್ಳಬೇಕು” ಎಂದು ಸಿಂಗ್ ಹೇಳಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.