Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ


Team Udayavani, Oct 9, 2024, 11:05 AM IST

Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ

ಬೆಂಗಳೂರು: ಪಿಜಿಗಳು ಹಾಗೂ ಬ್ಯಾಚ್ಯುಲರ್‌ ಗಳಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಹಾಸನ ಮೂಲದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೇತನ್‌ (35), ಆದರ್ಶ್‌ (29) ಮತ್ತು ಪವನ್‌ ಕುಮಾರ್‌ (21) ಬಂಧಿತರು. ಆರೋಪಿಗಳಿಂದ 23 ಲಕ್ಷ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳು, 28 ಮೊಬೈಲ್‌ಗ‌ಳು, 34 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕುಮಾರಸ್ವಾಮಿ ಲೇಔಟ್‌ನ 1ನೇ ಹಂತದಲ್ಲಿ ವಾಸವಾಗಿರುವ ದೂರುದಾರ ಪೃಥ್ವಿರಾಜ್‌, ಸೆ.15ರಂದು ಸ್ನೇಹಿತನ ಜತೆ ತಡರಾತ್ರಿವರೆಗೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿ, ಮುಂಬಾಗಿಲು ಲಾಕ್‌ ಮಾಡಿ, ಕೀಯನ್ನು ರೂಮಿನ ಬಾಗಿಲ ಪಕ್ಕದಲ್ಲಿರುವ ಕಿಟಕಿಯಲ್ಲಿ ಇಟ್ಟು ಮಲಗಿದ್ದರು. ಮರು ದಿನ ಬೆಳ್ಳಗೆ 10 ಗಂಟೆ ಸುಮಾರಿಗೆ ಸ್ನೇಹಿತ ಬಾಗಿಲು ತೆಗೆಯಲು ಕೀ ಹುಡುಕಾಟ ನಡೆಸಿದಾಗ, ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ದೂರುದಾರ ಕೂಡ ಎಚ್ಚರಗೊಂಡು ಎಲ್ಲೆಡೆ ಕೀ ಹುಡುಕುತ್ತಿದ್ದಾಗ 4 ಲ್ಯಾಪ್‌ಟಾಪ್‌ಗ್ಳು, 4 ವಾಚ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಪೃಥ್ವಿರಾಜ್‌, ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೂವರು ಆರೋಪಿಗಳು, ನಗರದಲ್ಲೇ ಬೈಕ್‌ಗಳ ಕಳವು ಮಾಡುತ್ತಿದ್ದರು. ಬಳಿಕ ಅವುಗಳ ಮೂಲಕ ಯುವಕರ ಪಿಜಿಗಳು ಹಾಗೂ ಬ್ಯಾಚ್ಯುಲರ್‌ಗಳು ವಾಸವಾಗಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ನಸುಕಿನ 2 ಅಥವಾ 3 ಗಂಟೆ ಸುಮಾರಿಗೆ ರೂಮ್‌ಗಳ ಬಳಿ ಹೋಗಿ, ಕಿಟಕಿ ಪಕ್ಕದಲ್ಲೇ ಇರುತ್ತಿದ್ದ ಕೀ ತೆಗೆದು ಕಳವು ಮಾಡಿ ಬಳಿಕ ಪರಾರಿಯಾಗುತ್ತಿದ್ದರು. ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಎಸ್‌ .ಬಿ.ಗಿರೀಶ್‌ ಮತ್ತು ಕುಮಾರಸ್ವಾಮಿ ಲೇಔಟ್‌ ಠಾಣೆಯ ಪಿಐ ಆರ್‌.ಜಗದೀಶ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕೊ

ರಿಯರ್‌ ಕೊಡಲು ಹೋದಾಗ ಪಿಜಿಗಳ ಗುರುತು

ಆರೋಪಿಗಳ ಪೈಕಿ ಚೇತನ್‌ ಕೊರಿಯರ್‌ ಬಾಯ್‌ ಆಗಿದ್ದು, ಪವನ್‌ ಮತ್ತು ಆದರ್ಶ್‌ ಆಟೋ ಚಾಲನೆ ಜತೆಗೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಚೇತನ್‌ ಕೊರಿಯರ್‌ ಕೊಡಲು ಹೋದಾಗಲೇ ಪಿಜಿ, ಬ್ಯಾಚುಲರ್‌ ರೂಮ್‌ಗಳನ್ನು ಗುರುತಿಸುತ್ತಿದ್ದ. ನಂತರ ತನ್ನ ಸ್ನೇಹಿತರ ಜತೆ ಹೋಗಿ ಕಳವು ಮಾಡುತ್ತಿದ್ದರು. ಕಳವು ವಸ್ತುಗಳನ್ನು ಹಾಸನ, ಚನ್ನರಾಯಪಟ್ಟಣ, ಬೆಂಗಳೂರಿನ ಕೆಲವಡೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 16 ಲ್ಯಾಪ್‌ಟಾಪ್‌ ಕಳವು ಪ್ರಕರಣಗಳು, 4 ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಮೊಬೈಲ್‌ ಇ-ಲಾಸ್ಟ್‌ನಲ್ಲಿ ದಾಖಲಾಗಿದ್ದ 11 ಮೊಬೈಲ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

UK-Khandre

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ

1-OP-BIG

Udupi: ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

1-mum

Mumtaz Ali Case: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

4

Renukaswamy Case:ದರ್ಶನ್‌ ಜಾಮೀನಿಗೆ ಆಕ್ಷೇಪ-SPPಯಿಂದ ಪ್ರಬಲ ವಾದ; ವಿಚಾರಣೆ ಮುಂದೂಡಿಕೆ

Mysuru: ದಸರಾ ನಂತರ ಸಿಎಂ ಬದಲಾವಣೆ ನಿಶ್ಚಿತ: ಬಿ.ವೈ. ವಿಜಯೇಂದ್ರ

Mysuru: ದಸರಾ ನಂತರ ಸಿಎಂ ಬದಲಾವಣೆ ನಿಶ್ಚಿತ: ಬಿ.ವೈ. ವಿಜಯೇಂದ್ರ

1-wwewqewq

Delhi;ಕಾಂಗ್ರೆಸ್ ನೊಂದಿಗೆ ಮೈತ್ರಿ?: 2 ರಾಜ್ಯಗಳ ಫಲಿತಾಂಶದ ಬಳಿಕ ಆಪ್ ಹೇಳಿದ್ದೇನು?

Haryana: ಇಬ್ಬರು ಪಕ್ಷೇತರ ಶಾಸಕರು ಸೇರ್ಪಡೆ… ಬಿಜೆಪಿ ಸಂಖ್ಯಾ ಬಲ 50ಕ್ಕೆ ಏರಿಕೆ

Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Bengaluru: ಬಿಲ್‌ ಕೇಳಿದ್ದಕ್ಕೆ ಬಾರ್‌ ಕ್ಯಾಶಿಯರ್‌ಗೆ ಹಲ್ಲೆ

Bengaluru: ಬಿಲ್‌ ಕೇಳಿದ್ದಕ್ಕೆ ಬಾರ್‌ ಕ್ಯಾಶಿಯರ್‌ಗೆ ಹಲ್ಲೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-anandpura

Anandapura: ವರುಣಾರ್ಭಟ: ಕೊಚ್ಚಿ ಹೋದ ಸೇತುವೆ: ಸಂಪರ್ಕ ಕಳೆದುಕೊಂಡ ಗ್ರಾಮಸ್ಥರು

UK-Khandre

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ

1-OP-BIG

Udupi: ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

1-ddd

Udupi: ಕಾರಿನ ಬ್ರೇಕ್ ಫೇಲ್ ಆಗಿ ಅವಘಡ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

11-sagara

Sagara: ನಗರಸಭೆ ಸಾಮಾನ್ಯ ಸಭೆ; ಲಲಿತಮ್ಮರ ತಡೆಯಾಜ್ಞೆ ವಿರುದ್ಧ ಸದಸ್ಯರ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.