Mangaluru: ಈ ಮೇಸ್ಟ್ರು ಹುಲಿ ತಂಡಗಳ ತಾಯಿ ಹುಲಿ!
ಮಂಗಳೂರಿನ ಹುಲಿಗಳಿಗೆ ಪ್ರೊ|ಉದಯ್ ಕುಮಾರ್ ಆಶೀರ್ವಾದವೇ ಶ್ರೀರಕ್ಷೆ; ಇವರೊಂದು ಹುಲಿ ಡಿಕ್ಷನರಿ; ಇವರ ಮನೆಯಲ್ಲಿ ವರ್ಷಕ್ಕೆ 15 ತಂಡ ಪ್ರದರ್ಶನ
Team Udayavani, Oct 9, 2024, 1:50 PM IST
ಪ್ರೊ| ಉದಯ್ ಕುಮಾರ್ ಅವರ ಮನೆಯಲ್ಲಿ ಹುಲಿ ವೇಷದ ತಂಡ.
ಮಹಾನಗರ: ತುಳುನಾಡಿನಲ್ಲಿ ಹುಲಿ ವೇಷ ಕುಣಿತಕ್ಕೆ ರಾಜ ಮರ್ಯಾದೆ. ಎಲ್ಲ ಹುಲಿ ತಂಡಗಳು ಎಲ್ಲ ಕಡೆಯಲ್ಲಿ ಕುಣಿಯುವುದಿಲ್ಲ. ಒಂದು ಕಡೆ ಒಂದೆರಡು ಮಾತ್ರ. ಆದರೆ, ನಗರದ ನಿವೃತ್ತ ಪ್ರಾಂಶುಪಾಲರೋರ್ವರ ಮನೆ ಅಂಗಳದಲ್ಲಿ ಬರೋಬ್ಬರಿ 45 ವರ್ಷದಿಂದ ನಿರಂತರವಾಗಿ 15ಕ್ಕೂ ಅಧಿಕ ಹುಲಿ ವೇಷದ ತಂಡಗಳು ಬಂದು ಕುಣಿಯುತ್ತವೆ!
ಮಂಗಳಾದೇವಿ ಸಮೀಪದಲ್ಲಿರುವ ಪ್ರೊ| ಉದಯ್ ಕುಮಾರ್ ಅವರ ಮನೆ ಹುಲಿ ವೇಷದ ತಂಡಗಳಿಗೆ ಅರಮನೆ ಇದ್ದ ಹಾಗೆ. ಇಲ್ಲಿ ಮೊದಲು ಕುಣಿದರೆ ಶುಭವಾಗುತ್ತದೆ ಎಂಬ ನಂಬಿಕೆ ಬಹು ಕಾಲದಿಂದ ಇದೆ. ಹೀಗಾಗಿ ಬಹುತೇಕ ತಂಡಗಳಿಗೆ ಈ ಮನೆಯೇ ಆಧಾರ ಶಕ್ತಿ. ವಿವಿಧ ಕ್ಷೇತ್ರದಲ್ಲಿ ಒಂದು, ಎರಡು, ಮೂರನೇ ಮರ್ಯಾದಿ (ಗೌರವ) ಸ್ವೀಕರಿಸುವ ತಂಡಗಳ ಸಹಿತ ಬಲಾಡ್ಯ ಹುಲಿ ತಂಡಗಳು ಪ್ರೊ|ಉದಯ್ ಕುಮಾರ್ ಅವರ ಮನೆಯ ಅಂಗಳವನ್ನು ಮೆಟ್ಟಿಯೇ ಮುಂದೆ ಹೋಗುವುದು. ಎಲ್ಲ ತಂಡಗಳೂ ಉದಯ್ ಕುಮಾರ್ ಅವರು ‘ಮೇಸ್ಟ್ರು’ ಎಂದು ಗೌರವಿಸುತ್ತವೆ.
ಇವರು ಒಂದು ರೀತಿಯ ಹುಲಿ ವೇಷ ಮತ್ತು ತಂಡಗಳಿಗೆ ಸಂಬಂಧಿಸಿ ಡಿಕ್ಷನರಿ ಇದ್ದ ಹಾಗೆ. ಹುಲಿ ವೇಷಗಳ ಇತಿಹಾಸ ಮತ್ತು ವರ್ತಮಾನಗಳಿಗೆ ಕೊಂಡಿ. ಹಿಂದಿನ ಅವಧಿಯಲ್ಲಿ ಹುಲಿ ವೇಷ ಹೇಗಿತ್ತು ಎಂಬ ಪ್ರಶ್ನೆಗೆ ಮೇಷ್ಟ್ರು ಹೇಳುವುದು ಹೀಗೆ: ‘1970ರ ಸುಮಾರಿನಲ್ಲಿ ರೈಲ್ವೇ ಟ್ರ್ಯಾಕ್‌ನಲ್ಲಿ ಚಪ್ಪಲು ಹಾಕದೆ ನಡೆದುಕೊಂಡು ಬಂದು ಹುಲಿ ವೇಷ ಕುಣಿಯುತ್ತಿದ್ದರು. 6 ಸ್ಟ್ಯಾಂಡ್ ಗ್ಯಾಸ್‌ಲೈಟ್ ಹಿಡಿದುಕೊಂಡು ಬರುತ್ತಿದ್ದರು. ಆಗ ಕುಣಿಯುವ ಚಂದವೇ ಅದ್ಬುತ. ಅರಸಿನ, ಚಿಮಿಣಿ ಕರಿ, ಮೊಟ್ಟೆಯ ಬಿಳಿ ಸಿಪ್ಪೆ ಹಾಕಿ ಅರೆದು ಬಿಸಿ ಮಾಡಿ ದೇಹಕ್ಕೆ ಬಳಿದು ರಂಗ್ ಹಾಕಲಾಗುತ್ತಿತ್ತು. ಅದಕ್ಕೂ ಮುನ್ನ ಕಡ್ಲೆಹಿಟ್ಟಿನ ಸ್ನಾನ ಆಗಬೇಕು. ಬಳಿಕ ಸಾಬೂನು ಸ್ನಾನ ಮಾಡಿ ರಂಗ್‌ಗೆ ನಿಲ್ಲುತ್ತಿದ್ದರು. ಗ್ಯಾಸ್‌ಲೈಟ್ ಬೆಳಕಿಗೆ ಕುಣಿತ ನೋಡುವುದು ಅಂದ. ಮನೆಯ ಮುಂಭಾಗ ಹುಲಿ ವೇಷಧಾರಿ ಕುಣಿಯುವ ಮನೆಯ ಛಾವಡಿಯಲ್ಲಿ ಏನೋ ಒಂದು ‘ವೈಬ್ರೇಶನ್’ ಆಗುತ್ತಿತ್ತು.
ರಜೆಯೇ ಮಾಡದ, ಮೊಬೈಲ್ ಹಿಡಿಯದ ಶಿಕ್ಷಕ!
ದೇಶದೆಲ್ಲೆಡೆ ದೊಡ್ಡ ಶಿಷ್ಯ ಸಮೂಹ ಹೊಂದಿರುವ ಪ್ರೊ| ಉದಯ್ ಕುಮಾರ್ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲರು. 33 ವರ್ಷಗಳ ಶಿಕ್ಷಣ ಸೇವೆ. ವಿಶೇಷವೆಂದರೆ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದ ಹಾಗೂ ತರಗತಿ ಮಿಸ್ ಮಾಡದ ಟೀಚರ್. ಆಗಿನಿಂದ ಇಂದಿನವರೆಗೆ ನಡಿಗೆಗೇ ಒಗ್ಗಿಕೊಂಡಿರುವ ಅವರು ದೂರ ಪ್ರಯಾಣಕ್ಕೆ ಮಾತ್ರ ಬಸ್ ಹಿಡಿಯುತ್ತಾರೆ. ಈಗಲೂ ಮೊಬೈಲ್ ಹಿಡಿದುಕೊಳ್ಳದ ಅವರು ಲ್ಯಾಂಡ್ ಲೈನ್ ಫೋನ್‌ನಲ್ಲಿ ಮಾತ್ರ ಸಂಪರ್ಕಕ್ಕೆ ಸಿಗುತ್ತಾರೆ.
ಯಕ್ಷಗಾನದಂತೆ ಹುಲಿವೇಷಕ್ಕೆ ಕೂಡಾ ಮಾನ್ಯತೆ ಸಿಗುವಂತಾಗಲಿ
ಬಾಲ್ಯದಿಂದಲೂ ನನಗೆ ಹುಲಿ ವೇಷದ ಬಗ್ಗೆ ಭಾರೀ ಆಸಕ್ತಿ. ಆ ಕುಣಿತದ ಗತ್ತು ಗೈರತ್ತು ನೋಡುವುದೇ ಚಂದ. ನಮ್ಮ ಮನೆಗೆ ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷವೂ ಹಲವಾರು ತಂಡಗಳು ಬಂದು ಪ್ರದರ್ಶನ ನೀಡುತ್ತವೆ. ಬಹಳಷ್ಟು ನಿಷ್ಠೆಯಿಂದ ಹುಲಿ ವೇಷ ಹಾಕುವ ಜನರಿದ್ದಾರೆ. ಸಸ್ಯಹಾರ ಸೇವಿಸುತ್ತ ನಿಷ್ಠೆ ಪಾಲಿಸುವವರು ಇದ್ದಾರೆ. ಹುಲಿ ವೇಷ ಗ್ರೇಟ್ ಆರ್ಟ್. ಯಕ್ಷಗಾನಕ್ಕೆ ಮಾನ್ಯತೆ ಸಿಕ್ಕಿದೆ. ಆದರೆ, ಹುಲಿ ವೇಷಕ್ಕೆ ಯಾವ ಮಾನ್ಯತೆಯೂ ಇಲ್ಲ. ಇದರ ಬಗ್ಗೆ ಮಾತನಾಡುವವರೂ ಇಲ್ಲ ಎನ್ನುತ್ತಾರೆ ಉದಯ್ ಕುಮಾರ್.
ಫ್ರಾನ್ಸ್‌ನ ಅಧ್ಯಕ್ಷರ ಮೆರವಣಿಗೆಯಲ್ಲಿ ಹುಲಿ ವೇಷ!
ಫ್ರಾನ್ಸ್‌ನ ಪ್ರವಾಸಿಗರು ಮಂಗಳೂರಿಗೆ ಬಂದಿದ್ದಾಗ ಪ್ರೊ|ಉದಯ್ ಕುಮಾರ್ ಅವರ ಮನೆಯಲ್ಲಿ ನಡೆದಿದ್ದ ಹುಲಿ ಕುಣಿತವನ್ನು ಗಮನಿಸಿದ್ದರು. ಅದರಂತೆ ಹುಲಿ ವೇಷವನ್ನು ಜರ್ಮನ್‌ಗೆ ಕರೆದುಕೊಂಡು ಬರುವ ವ್ಯವಸ್ಥೆಯನ್ನು 2000ರಲ್ಲಿ ಮಾಡಲಾಗಿತ್ತು. ಆಗ ಫ್ರಾನ್ಸ್‌ನ ಅಧ್ಯಕ್ಷರ ಮೆರವಣಿಗೆಗೆ ಹುಲಿ ವೇಷವೇ ಪ್ರಧಾನವಾಗಿತ್ತು. ಜರ್ಮನ್‌ಗೂ ತೆರಳಿದ್ದರು. ಅಲ್ಲಿನ ಪತ್ರಿಕೆಯಲ್ಲಿ ಕರಾವಳಿಯ ಹುಲಿ ವೇಷದ ಸುದ್ದಿ ಬಂದಿತ್ತು!
–ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.