Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ
Team Udayavani, Oct 9, 2024, 4:49 PM IST
ಹರ್ಯಾಣ: ವಿಧಾನ ಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಇಬ್ಬರು ಪಕ್ಷೇತರ ಶಾಸಕರು ಬುಧವಾರ(ಅ.9) ಬಿಜೆಪಿ ಸೇರ್ಪಡೆಗೊಂಡಿದ್ದು ಇದರಿಂದ ಬಿಜೆಪಿಯ ಸಂಖ್ಯಾ ಬಲ 50ಕ್ಕೆ ಏರಿಕೆಯಾಗಿದೆ.
ಅದರಂತೆ ಇಂದು (ಬುಧವಾರ) ಪಕ್ಷೇತರ ಶಾಸಕರಾದ ರಾಜೇಶ್ ಜೂನ್ ಮತ್ತು ದೇವೇಂದ್ರ ಕಾಡ್ಯಾನ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹಿಸ್ಸಾರ್ ಕ್ಷೇತ್ರದಲ್ಲಿ ಶಾಸಕಿ ಹಾಗೂ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಕೂಡ ಬಿಜೆಪಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ದೇವೇಂದ್ರ ಕಾಡ್ಯಾನ್ ಈ ಹಿಂದೆ ಬಿಜೆಪಿಯಲ್ಲಿದ್ದು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯ ಗಳಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿರುವ ಕಾಡ್ಯಾನ್, ಗನ್ನೂರ್ ಕ್ಷೇತ್ರದ ಜನತೆಗೆ ನಾನು ಚಿರಋಣಿಯಾಗಿದ್ದೇನೆ ಅಲ್ಲದೆ ನನ್ನನು ನಂಬಿದ ಕ್ಷೇತ್ರದ ಜನತೆಗೆ ನಾನು ಸಹಾಯ ಮಾಡಲೇ ಬೇಕು ಹಾಗಾಗಿ ನಾನು ಬಿಜೆಪಿಗೆ ಸೇರುತಿದ್ದೇನೆ ಎಂದು ಹೇಳಿದ್ದಾರೆ.
#WATCH | Delhi: Independent MLAs Rajesh Joon and Devender Kadyan extend their support to BJP in Haryana.
BJP is set to form the government in the state for the 3rd time. pic.twitter.com/JcCKch0rLZ
— ANI (@ANI) October 9, 2024
ರಾಜೇಶ್ ಜೂನ್ ಅವರಿಗೆ ಬಹದ್ದೂರ್ ಗಢದಿಂದ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ರಾಜೇಶ್ ಕೌಶಿಕ್ ಅವರನ್ನು 41,999 ಮತಗಳಿಂದ ಸೋಲಿಸಿದ್ದು ಇದೀಗ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ.
ಸಾವಿತ್ರಿ ಜಿಂದಾಲ್ ಸೇರಿದಂತೆ ಹರಿಯಾಣದ ಮೂವರು ಪಕ್ಷೇತರ ಶಾಸಕರು ಬಿಜೆಪಿಯನ್ನು ಬೆಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಹೇಳಿದ್ದಾರೆ.
#WATCH | Delhi: Independent MLA from Haryana’s Ganaur Assembly seat, Devender Kadyan extends support to BJP
He says, “I am supporting the BJP government. All the 36 fraternities of Ganaur have voted for me and their aspirations can be fulfilled only by joining the government. We… pic.twitter.com/sDO0s3HonZ
— ANI (@ANI) October 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ
Delhi; ನಿರಾಶ್ರಿತರಿಂದ ನಾಗರಿಕರು: ಮೊದಲ ಬಾರಿ ಮತ ಚಲಾಯಿಸಲಿರುವ ಪಾಕಿಸ್ಥಾನಿ ಹಿಂದೂಗಳು
Rahul Gandhi; ಬಿಜೆಪಿ-ಕಾಂಗ್ರೆಸ್ ವಾಕ್ಸಮರಕ್ಕೆ ಕಾರಣವಾದ ರಾಹುಲ್ ವಿಯೇಟ್ನಾಂ ಪ್ರವಾಸ
Delhi poll: ಅರ್ಚಕರಿಗೆ ತಿಂಗಳಿಗೆ 18000 ಗೌರವಧನ ಘೋಷಣೆ ಮಾಡಿದ ಕೇಜ್ರಿವಾಲ್, ಆದರೆ…
Shocking: 9 ದಿನದ ಮಗುವನ್ನೇ 60 ಸಾವಿರಕ್ಕೆ ಮಾರಾಟ ಮಾಡಿ ಬೈಕ್ ಖರೀದಿಸಿದ ಪೋಷಕರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.