![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 9, 2024, 6:38 PM IST
ಮುಂಬಯಿ: ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ ʼಭೂಲ್ ಭುಲೈಯಾʼ ಸಿನಿಮಾದ ಮೂರನೇ ಭಾಗದ ಟ್ರೇಲರ್ ರಿಲೀಸ್ ಆಗಿದೆ.
ಕಾರ್ತಿಕ್ ಆರ್ಯನ್ (Kartik Aaryan) ಅಭಿನಯದ ʼಭೂಲ್ ಭುಲೈಯಾ 3ʼ(Bhool Bhulaiyaa 3) ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿತು. ಅದಕ್ಕೆ ಕಾರಣ ಸಿನಿಮಾದ ಎರಡನೇ ಭಾಗಕ್ಕೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್.
3 ನಿಮಿಷ 50 ಸೆಕೆಂಡ್ ವುಳ್ಳ ಟ್ರೇಲರ್ ನಲ್ಲಿ ರಕ್ತಘಾಟ್ ಎಂಬ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ. ಇಲ್ಲಿನ ಬಂಗಲೆಯೊಂದರಲ್ಲಿ ಒಬ್ಬರಲ್ಲ ಎರಡು ʼಮಂಜುಲಿಕಾʼ ಗಳಿರುತ್ತಾರೆ. (ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್). ಕುಟುಂಬದ ನಾನಾ ಪೀಳಿಗೆ ಆ ಮನೆಯಲ್ಲಿ ಬಂದು ನೆಲೆಸಿದರೂ ಆ ಆತ್ಮಗಳು ಮನೆಯಲ್ಲಿ ಇನ್ನು ಇವೆ ಎನ್ನುವುದನ್ನು ಟ್ರೇಲರ್‌ನಲ್ಲಿ ಹೇಳಲಾಗಿದೆ.
ಭೂತಗಳನ್ನು ನಂಬುವ ಈ ಜಗತ್ತು ಮೂರ್ಖರ ಜಗತ್ತು. ಈ ಆತ್ಮಗಳ ಲಾಭವನ್ನು ನಾವು ಪಡೆದುಕೊಳ್ಳಬೇಕೆಂದು ʼರೂಹ್ ಬಾಬಾʼ ಎಂಟ್ರಿ ಆಗುತ್ತಾರೆ. ಆತ್ಮಗಳೊಂದಿಗಿನ ಒಡನಾಟ ಹಾಗೂ ಹಾಸ್ಯದ ದೃಶ್ಯವನ್ನು ತೋರಿಸಲಾಗಿದೆ. ಕಾಮಿಡಿ ರೀತಿಯಲ್ಲಿ ಟ್ರೇಲರ್ ತೋರಿಸಲಾಗಿದ್ದು, ಎರಡು ʼಮಂಜುಲಿಕಾʼಗಳ ಹಿಂದಿನ ಕಥೆಯ ಝಲಕ್ ತೋರಿಸಲಾಗಿದೆ.
ಬಂಗಲೆಯ ಬಾಗಿಲು ಒಡೆದು ʼಮಂಜುಲಿಕಾʼಗಳ ರಹಸ್ಯವನ್ನು ʼರೂಹ್ ಬಾಬಾʼ ಬಯಲಿಗೆ ತರಲು ಹೊರಡುವ ದೃಶ್ಯ ಟ್ರೇಲರ್ ನಲ್ಲಿದೆ.
ಇದೊಂದು ಹಾರಾರ್ – ಕಾಮಿಡಿ ಸಿನಿಮಾವಾಗಿದ್ದು, ಹೆಚ್ಚು ಸಸ್ಪೆನ್ಸ್, ಹೆಚ್ಚಿನ ಹಾಸ್ಯವನ್ನು ಮೂರನೇ ಭಾಗದ ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ʼರೂಹ್ ಬಾಬಾʼ ನಾಗಿ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದಾರೆ. ಅವರ ಪ್ರೇಯಸಿಯಾಗಿ ತೃಪ್ತಿ ದಿಮ್ರಿ (Triptii Dimri) ಅವರು ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್ (Vidya Balan), ಮಾಧುರಿ ದೀಕ್ಷಿತ್ (Madhuri Dixit) ಇಲ್ಲಿ ʼಮಂಜುಲಿಕಾʼಗಳಾಗಿ ಕಾಣಿಸಿಕೊಂಡಿದ್ದಾರೆ.
ತೃಪ್ತಿ – ಕಾರ್ತಿಕ್ ನಡುವಿನ ರೊಮ್ಯಂಟಿಕ್ ದೃಶ್ಯಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ.
ಅನೀಸ್ ಬಾಜ್ಮಿ ನಿರ್ದೇಶನದ ʼಭೂಲ್ ಭುಲೈಯಾ 3ʼ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ಮತ್ತು ತೃಪ್ರಿ ದಿಮ್ರಿ ಸೇರಿದಂತೆ ಸಿನಿಮಾದಲ್ಲಿ ಹಲವರು ನಟಿಸಿದ್ದಾರೆ. ಇದೇ ನವೆಂಬರ್ 1 ರಂದು ಸಿನಿಮಾ ರಿಲೀಸ್ ಆಗಲಿದೆ. ವಿಶೇಷವೆಂದರೆ ಅದೇ ದಿನ ರೋಹಿತ್ ಶೆಟ್ಟಿ – ಅಜಯ್ ದೇವಗನ್ ಅವರ ʼಸಿಂಗಂ ಎಗೇನ್ʼ ಸಿನಿಮಾ ಕೂಡ ರಿಲೀಸ್ ಆಗಲಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.