Kundapura: ರೈಲು ಢಿಕ್ಕಿ ಹೊಡೆದು ಚಿರತೆ ಸಾ*ವು
Team Udayavani, Oct 10, 2024, 2:06 AM IST
ಕುಂದಾಪುರ : ರೈಲು ಢಿಕ್ಕಿ ಯಾಗಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗ್ಗೆ 5 ರ ಸುಮಾರಿಗೆ ಸಂಭವಿಸಿದೆ.
ಐದು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಈ ಭಾಗದಲ್ಲಿ ಅರಣ್ಯ ಪ್ರದೇಶ ಹಾಗೂ ಗೇರು ಪ್ಲಾಂಟೇಶನ್ ಇರುವ ಕಾರಣ ಕಾಡಿನಿಂದ ಆಹಾರ ಅರಸಿಕೊಂಡು ಬಂದಿರಬಹುದು.
ರೈಲ್ವೇ ಹಳಿ ದಾಟುವಾಗ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.ಬುಧವಾರ ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಎಸಿಎಫ್ ಪ್ರಕಾಶ್ ಪೂಜಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಡಿಆರ್‌ಎಫ್‌ಒ ಮುರುಗನ್, ಬೀಟ್ ಫಾರೆಸ್ಟರ್ ರಾಮಪ್ಪ ಹಾಗೂ ಸಿಬಂದಿ ಚಿರತೆಯ ಮೃತದೇಹ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಕುಂದಾಪುರ ವಲಯ ಅರಣ್ಯ ಇಲಾಖೆಯ ವಂಡ್ಸೆ ಡಿಪ್ಪೋದಲ್ಲಿ ಚಿರತೆಯ ಅಂತ್ಯ ಸಂಸ್ಕಾರ ನಡೆಸಲಾಯಿತು.
ಕರಿಚಿರತೆ ಸಾವು
ಇದೇ ಬಡಾಕೆರೆಯ ಸೌಪರ್ಣಿಕ ನದಿಯ ರೈಲ್ವೇ ಮೇಲ್ಸೇತುವೆಯಲ್ಲಿ 2021 ರ ಫೆ. 2 ರಂದು ಈ ಭಾಗಕ್ಕೆ ಅಪರೂಪವೆನಿಸಿರುವ ಕರಿ ಚಿರತೆಯೊಂದು ರೈಲು ಢಿಕ್ಕಿಯಾಗಿ ಸಾವನ್ನಪ್ಪಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೂಂದು ಚಿರತೆ ಸಾವನ್ನಪ್ಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.