High Court Order: ಹಳೆ ಸಂಹಿತೆ ಸಿಆರ್‌ಪಿಸಿಯ ಮೊದಲ ಎಫ್ಐಆರ್‌ ರದ್ದು!

ಬಿಎನ್‌ಎಸ್‌ಎಸ್‌ ಬಂದ ಮೇಲೆ ಸಿಆರ್‌ಪಿಸಿ ಅಡಿ ಎಫ್ಐಆರ್‌ ಸರಿಯಲ್ಲ: ಹೈಕೋರ್ಟ್‌

Team Udayavani, Oct 10, 2024, 2:39 AM IST

High-Court

ಬೆಂಗಳೂರು: “ಭಾರತೀಯ ನಾಗರಿಕ ಸುರಕ್ಷ ಸಂಹಿತೆ’ (ಬಿಎನ್‌ಎಸ್‌ಎಸ್‌) 2023 ಜಾರಿಗೆ ಬಂದ ಮೇಲೆ ಪೊಲೀಸರು ಹಿಂದಿನ “ದಂಡ ಪ್ರಕ್ರಿಯಾ ಸಂಹಿತೆ’ (ಸಿಆರ್‌ಪಿಸಿ) ಅಡಿಯಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳುವುದನ್ನು ಒಪ್ಪಲಾಗದು ಎಂದು ಹೇಳಿರುವ ಹೈಕೋರ್ಟ್‌, ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ದಿನ 2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಸಿಆರ್‌ಪಿಸಿ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಎಫ್ಐಆರ್‌ ಅನ್ನು ರದ್ದುಪಡಿಸಿ ಆದೇಶಿಸಿದೆ.

ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಸೆಕ್ಷನ್‌ 154ರಡಿ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್‌ ರದ್ದುಪಡಿಸಲಾಗುತ್ತಿದೆ. ಆದರೆ ದೂರಿನ ಗಂಭೀರತೆ ಆಧರಿಸಿ ಪ್ರಕರಣವನ್ನು ಪೊಲೀಸರಿಗೆ ಹಿಂದಿರುಗಿಸಲಾಗುತ್ತಿದ್ದು, ಸಿಆರ್‌ಪಿಸಿ ಸೆಕ್ಷನ್‌ 154 ಬದಲಿಗೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 173 ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 193ರಡಿ ವಿಚಾರಣ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ಆದೇಶಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಠಾಣೆಯಲ್ಲಿ ತಮ್ಮ ವಿರುದ್ಧ ಸಿಆರ್‌ಪಿಸಿ ಸೆಕ್ಷನ್‌ 376, 323, 506 ಹಾಗೂ 420 ಅಡಿಯಲ್ಲಿ 2024ರ ಜುಲೈ 1ರಂದು ದಾಖಲಾಗಿರುವ ಎಫ್ಐಆರ್‌ ಹಾಗೂ ಲಿಂಗಸುಗೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಅರುಣ್‌ ಕುಮಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಆರ್‌. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಈ ಆದೇಶ ಮಾಡಿದೆ. ಅಲ್ಲದೆ ವಿಚಾರಣ ನ್ಯಾಯಾಲಯಗಳು ಮತ್ತು ಪೊಲೀಸ್‌ ಠಾಣೆಗಳಿಗೆ ಕೆಲವು ನಿರ್ದೇಶನಗಳನ್ನೂ ಹೈಕೋರ್ಟ್‌ ನೀಡಿದೆ.

ಟಾಪ್ ನ್ಯೂಸ್

Ma-Jwala-Temple

Godesess Temple: ನೈಸರ್ಗಿಕ ಅನಿಲದಿಂದ ಹೊರಹೊಮ್ಮುವ ಜ್ವಾಲೆಯೇ ಇಲ್ಲಿ ಜ್ವಾಲಾಜೀ ಮಾ!

Madhu-MOU

Technology Assistance: ಮರುಸಿಂಚನ, ಗಣಿತ ಗಣಕಕ್ಕೆ ಎಐ ನೆರವು: ಸಚಿವ ಮಧು

EVM

Haryana Election: ಮತ್ತೆ ಇವಿಎಂ ಮೇಲೆ ಅನುಮಾನ ಕಾಂಗ್ರೆಸ್‌ ಸಾಕ್ಷ್ಯಾಧಾರ ಒದಗಿಸಲಿ

CM–Governer

Formal Welcome: 54 ದಿನಗಳ ಬಳಿಕ ಮುಖ್ಯಮಂತ್ರಿ- ರಾಜ್ಯಪಾಲರು ಮುಖಾಮುಖಿ

Ashok-BJP

Cast Census: ಜಾತಿ ಗಣತಿ ವರದಿ ಸಿದ್ದರಾಮಯ್ಯ ಬರೆಸಿದ್ದಾರೆ: ಆರ್‌.ಅಶೋಕ್‌

KSRTC

Ayudha Pooje: ಬಸ್‌, ಯಂತ್ರೋಪಕರಣ ಪೂಜೆಗೆ 250 ರೂ.: ಕೆಎಸ್‌ಆರ್‌ಟಿಸಿ

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhu-MOU

Technology Assistance: ಮರುಸಿಂಚನ, ಗಣಿತ ಗಣಕಕ್ಕೆ ಎಐ ನೆರವು: ಸಚಿವ ಮಧು

CM–Governer

Formal Welcome: 54 ದಿನಗಳ ಬಳಿಕ ಮುಖ್ಯಮಂತ್ರಿ- ರಾಜ್ಯಪಾಲರು ಮುಖಾಮುಖಿ

Ashok-BJP

Cast Census: ಜಾತಿ ಗಣತಿ ವರದಿ ಸಿದ್ದರಾಮಯ್ಯ ಬರೆಸಿದ್ದಾರೆ: ಆರ್‌.ಅಶೋಕ್‌

KSRTC

Ayudha Pooje: ಬಸ್‌, ಯಂತ್ರೋಪಕರಣ ಪೂಜೆಗೆ 250 ರೂ.: ಕೆಎಸ್‌ಆರ್‌ಟಿಸಿ

High-Court

Renukaswamy Case: ಕೈದಿಗಳ ಸ್ಥಳಾಂತರ ವೇಳೆ ಕೋರ್ಟ್‌ ವಿವೇಚನೆ ಬಳಸಬೇಕು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Ma-Jwala-Temple

Godesess Temple: ನೈಸರ್ಗಿಕ ಅನಿಲದಿಂದ ಹೊರಹೊಮ್ಮುವ ಜ್ವಾಲೆಯೇ ಇಲ್ಲಿ ಜ್ವಾಲಾಜೀ ಮಾ!

2

Mangaluru: ವಿಡಿಯೋ ಲೈಕ್‌ ಮಾಡಿ ಹಣಗಳಿಸಲು ಹೋಗಿ 5 ಲಕ್ಷ ಕಳೆದುಕೊಂಡರು!

Madhu-MOU

Technology Assistance: ಮರುಸಿಂಚನ, ಗಣಿತ ಗಣಕಕ್ಕೆ ಎಐ ನೆರವು: ಸಚಿವ ಮಧು

EVM

Haryana Election: ಮತ್ತೆ ಇವಿಎಂ ಮೇಲೆ ಅನುಮಾನ ಕಾಂಗ್ರೆಸ್‌ ಸಾಕ್ಷ್ಯಾಧಾರ ಒದಗಿಸಲಿ

CM–Governer

Formal Welcome: 54 ದಿನಗಳ ಬಳಿಕ ಮುಖ್ಯಮಂತ್ರಿ- ರಾಜ್ಯಪಾಲರು ಮುಖಾಮುಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.