Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ಸಂತೋಷದ ವಾತಾವರಣ
Team Udayavani, Oct 10, 2024, 7:34 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಮನೆಯಲ್ಲಿ ದೇವೀ ಪೂಜೆಯ ಸಂಭ್ರಮ. ಮಾಧ್ಯಮಗಳಲ್ಲಿರುವವರ ಸಣ್ತೀಪರೀಕ್ಷೆಯ ಸನ್ನಿವೇಶಗಳು ಸೃಷ್ಟಿ.
ವೃಷಭ: ಉದ್ಯೋಗ ಸ್ಥಾನದಲ್ಲಿ ಕೊಂಚ ಹಿನ್ನಡೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ.
ಮಿಥುನ: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಉದ್ಯಮದಲ್ಲಿ ಹೊಸ ವಿಭಾಗ ಕಾರ್ಯಾರಂಭ. ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ.
ಕರ್ಕಾಟಕ: ಹಲವು ದಿನಗಳಿಂದ ನೆನಪಾಗುತ್ತಿದ್ದ ವ್ಯಕ್ತಿಯ ಭೇಟಿ. ಅಕಸ್ಮಾತ್ ಧನಾಗಮ ಯೋಗ. ಆಪ್ತಮಿತ್ರನ ಮನೆಯಲ್ಲಿ ವಿವಾಹ. ಆಹಾರಧಾನ್ಯ ಮಾರಾಟದಿಂದ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.
ಸಿಂಹ: ಸಾಮರ್ಥ್ಯದ ಸಂಪೂರ್ಣ ಉಪಯೋಗಕ್ಕೆ ಅವಕಾಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕಾರ್ಯಸ್ಥಾನದಲ್ಲಿ ಪೂಜೆಗೆ ಸಿದ್ಧತೆ.
ಕನ್ಯಾ: ಕುಟುಂಬದವರ ಕೂಡುವಿಕೆಯಲ್ಲಿ ದೇವತಾರಾಧನೆ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಬಂಧುಗಳ ಮನೆಯಲ್ಲಿ ವಿವಾಹ ಸಂಭ್ರಮ.
ತುಲಾ: ಪಂಚಮ ಶನಿಯ ಮಹಿಮೆಯ ಕಾರಣದಿಂದ ಆರೋಗ್ಯಕ್ಕೆ ಹಾನಿ. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ದಿನದ ಕೊನೆಯಲ್ಲಿ ಅಪರೂಪದ ವ್ಯಕ್ತಿಯ ಭೇಟಿ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಕೊಂಚ ಸುಧಾರಣೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳಿಗೆ ಯಶಸ್ಸು.
ಧನು: ಅವಿಶ್ರಾಂತ ಸಾಧನೆಯಿಂದ ಸಂಪಾದನೆ ವೃದ್ಧಿ. ಒಡನಾಡಿಗಳ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರ ಆದಾಯ ವೃದ್ಧಿ. ಸಮಾಜ ಸುಧಾರಣಾ ಕಾರ್ಯಕ್ರಮಗಳಲ್ಲಿ ಭಾಗಿ.
ಮಕರ: ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ. ಹಿರಿಯರ ಆರೋಗ್ಯದ ಕುರಿತು ಕಾಳಜಿ ಇರಲಿ.
ಕುಂಭ: ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸವಾಲು. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಪಾಲುದಾರಿಕೆ ವ್ಯವಹಾರ ವಿಸ್ತರಣೆಗೆ ಯೋಜನೆ. ಕುಲದೇವರ ದರ್ಶನಕ್ಕಾಗಿ ಪ್ರಯಾಣ.
ಮೀನ: ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ. ಸರಕಾರಿ ಇಲಾಖೆಗಳವರಿಂದ ಸಹಕಾರ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅನುಕೂಲ. ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ಪ್ರಗತಿಯ ಸೂಚನೆ. ಪತ್ನಿಯ ಕಡೆಯ ಬಂಧುಗಳ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.