Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ
Team Udayavani, Oct 10, 2024, 9:01 AM IST
ಬಾಗಲಕೋಟೆ : ದೇಶ ಹಾಗೂ ಜಗತ್ತು ಕಂಡ ವಿಶೇಷ ಹಾಗೂ ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದೊಡ್ಡಿದೆ ಎಂದು ಮಾಜಿ ಸಚಿವ, ಉದ್ಯಮಿಯೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದ ದೊಡ್ಡ ಉದ್ಯಮಿಗಳಲ್ಲಿ ಅತಿ ವಿಶೇಷವಾದ ಉದ್ಯಮಿ ರತನ್ ಟಾಟಾ, ಪದ್ಮವಿಭೂಷಣ ಪುರಸ್ಕೃತರು, ಭಾರತವನ್ನು ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಮಹಾನ್ ಉದ್ಯಮಿ. ಅವರ ಅಗಲಿಕೆ ಉದ್ಯಮ ರಂಗದ ಕೊಂಡಿ ಕಳಚಿದಂತೆ ಆಗಿದೆ. ರತನ್ ಟಾಟಾ ಅವರ ನಿಧನ ದೇಶಕ್ಕೆ ಬಾರಿ ನಷ್ಟವಾಗಿದೆ. ಬಹಳಷ್ಟು ದೂರದೃಷ್ಟಿ ಉದ್ಯಮಿ,ಕೇವಲ ಒಂದು ಲಕ್ಷದಲ್ಲಿ ನ್ಯಾನೊ ಕಾರು ಲೋಕಾರ್ಪಣೆ ಮಾಡಿ ದಾಖಲೆ ಮಾಡಿದವರು ಎಂದು ತಿಳಿಸಿದ್ದಾರೆ.
ಜಾಗತಿಕ ಉದ್ಯಮದ ಬಾರಿ ಸವಾಲುಗಳ ಮಧ್ಯೆ ಟಾಟಾ ಸಮೂಹ ಸಂಸ್ಥೆಯನ್ನು ಎತ್ತರೆತ್ತರಕ್ಕೆ ಬೆಳೆಸಿ ಟಾಟಾ ಕಂಪನಿಯಿಂದಲೇ ದೇಶವನ್ನು ಇತರೆ ರಾಷ್ಟ್ರದವರು ಗುರುತಿಸುವಂತೆ ಮಾಡಿದವರು. ಸರಳತೆ ಬಹುಪಾಲು ಲಾಭವನ್ನು ದಾನ ಮಾಡಿ ಆಸರೆ ಹಸ್ತ ಚಾಚಿದವರು ಶ್ರೀಮಾನ್ ರತನ್ ಟಾಟಾ ಅವರು, ನಾನು ಒಬ್ಬ ಉದ್ಯಮಿಯಾಗಲು ಅವರ ಜೀವನ ಪ್ರೇರಣೆಯಾಗಿತ್ತು ಎಂದು ಹೇಳಿದ್ದಾರೆ.
ಅವರ ನಿಧನ ಬಹಳ ದುಃಖ ತಂದೊಡ್ಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಜೀವನ ಸದಾ ಎಲ್ಲರಿಗೂ ಸ್ಪೂರ್ತಿದಾಯಕವಾಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ: Haryana Election: ಹರಿಯಾಣ ಬಿಜೆಪಿ ಗೆಲುವಿಗೆ ಶ್ರಮಿಸಿದ ವಾರ್‌ರೂಂನ “ತ್ರಿಶಕ್ತಿ’ ನಾಯಕರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
Waqf: ಅನ್ವರ್ ಮಾಣಿಪ್ಪಾಡಿಗೆ ಲಂಚ ನೀಡಲು ಯತ್ನ: ಆರೋಪ ತಳ್ಳಿ ಹಾಕಿದ ವಿಜಯೇಂದ್ರ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.