Devara 2: ʼದೇವರ-2ʼ ನಲ್ಲೂ ಬಾಲಿವುಡ್ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?
Team Udayavani, Oct 10, 2024, 5:22 PM IST
ಹೈದರಾಬಾದ್: ಜೂನಿಯರ್ ಎನ್ ಟಿಆರ್(Jr. NTR) ಅವರ ‘ದೇವರ’ (Devara) ಶುಕ್ರವಾರ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೆಲವೇ ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆಯನ್ನು ದಾಟಿದೆ.
ಕೊರಟಾಲ ಶಿವ (Koratala Siva) ನಿರ್ದೇಶನದ ಪ್ಯಾನ್ ಇಂಡಿಯಾ ಹಾಗೂ ಬಹು ತಾರಾಗಣವನ್ನಿಟ್ಟುಕೊಂಡು ಬಿಗ್ ಬಜೆಟ್ ನಲ್ಲಿ ಬಂದ ‘ದೇವರ’ ರಿಲೀಸ್ ಗೂ ಮುನ್ನವೇ ಹತ್ತಾರು ವಿಚಾರಗಳಿಂದ ಸದ್ದು ಮಾಡಿತ್ತು.
ಇದನ್ನೂ ಓದಿ: Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್ ಜಾಮೀನು ತೀರ್ಪು
ಸಿನಿಮಾ ಯಶಸ್ಸಿಯಾದ ಬೆನ್ನಲ್ಲೇ ಪ್ರೇಕ್ಷಕರಿಗೆ ಸೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ನಿರ್ದೇಶಕ ಕೊರಟಾಲ ಶಿವ ಅವರು ಈ ಬಗ್ಗೆ ಮಾತನಾಡಿದ್ದಾರೆ.
ʼಝೂಮ್ʼ ಜತೆ ಮಾತನಾಡಿರುವ ಅವರು, ʼದೇವರ ಸೀಕ್ವೆಲ್ʼ ನಲ್ಲಿ ಅತಿಥಿ ಪಾತ್ರಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
“ಹೌದು ʼದೇವರ-2ʼ ನಲ್ಲಿ ವಿಶೇಷ ಪಾತ್ರಗಳಿದೆ. ಅದನ್ನು ನಾವು ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ. ಇದನ್ನು ನಾನು ಅತಿಥಿ ಪಾತ್ರಗಳೆಂದು ಹೇಳಲ್ಲ. ಇದು ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರಗಳಾಗಿರುತ್ತವೆ” ಎಂದಿದ್ದಾರೆ.
ʼದೇವರ-2ʼ ನಲ್ಲಿ ಯಾರನ್ನು ಹಾಕಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ದೇವರ ಜಗತ್ತಿನಲ್ಲಿ ರಣವೀರ್ ಅಥವಾ ರಣಬೀರ್ ಅವರನ್ನು ನೋಡಲು ನಾನು ಇಷ್ಟಪಡುತ್ತೇನೆ. ನಾನು ತೆಲುಗು ಅಥವಾ ತಮಿಳು ಇಂಡಸ್ಟ್ರಿಯಿಂದ ಹೆಚ್ಚು ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಕೆಲವು ಹೆಸರುಗಳನ್ನು ಬಹಿರಂಗಪಡಿಸಿದರೆ, ಹಲವಾರು ಊಹೆಗಳು ಮತ್ತು ಊಹಾಪೋಹಗಳು ಏಳುತ್ತದೆ” ಎಂದು ಅವರು ಹೇಳಿದ್ದಾರೆ.
ಸದ್ಯ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ʼದೇವರʼ ಸಿನಿಮಾದಲ್ಲಿ ಜೂ.ಎನ್ ಟಿಆರ್ ಜತೆ ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.