Mysore Dasara: ಕಾಣ ಬನ್ನಿ … ಬೆಳಕಿನರಮನೆ


Team Udayavani, Oct 10, 2024, 6:03 PM IST

001

ಜಗದ್ವಿಖ್ಯಾತ ನಾಡಹಬ್ಬ ದಸರೆ ಬಂದಾಗ ಮೈಸೂರು ಸಿಂಗಾರಗೊಳ್ಳುವುದೇ ಒಂದು ಚೆಂದ. ಎಲ್ಲಿ ನೋಡಿ ದರೂ ಹೊಂಬೆಳಕು ಸೂಸುವ ದೀಪಾಲಂಕಾರ. ಅದ್ದೂರಿ ಮತ್ತು ಆಕರ್ಷಕ ಚೆಲುವನ್ನು ಹೊದ್ದು ನಿಂತ ಕಳೆ. ಅರಮನೆ ನಗರಿಯ ಈ ಸಡಗರವನ್ನು ಮದುವಣಗಿತ್ತಿಯ ಸಂಭ್ರಮಕ್ಕೆ ಹೋಲಿಸುವುದೂ ಅದಕ್ಕಾಗಿಯೇ… ದಸರಾ ಉತ್ಸವ ಎಂದರೆ ಸಣ್ಣ ಹಬ್ಬ ಎನ್ನುವಾ ಮಾತೇ ಇಲ್ಲ. ಝಗಮಗ, ವೈಭಯುತ, ಅದ್ದೂರಿ ಮತ್ತು ಆಕರ್ಷಕ. ಈ ಎಲ್ಲಾ ವಿಶೇಷಣಗಳನ್ನು ಧರಿಸಿದ ಐತಿಹಾಸಿಕ ಮೈಸೂರು ನಗರಿಯಲ್ಲಿ ದಸರಾವೆಂದರೆ ಅದು ಅತ್ಯಂತ ಸಂಭ್ರಮದ ಸಮಾರಾಧನೆ. ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುವ ಮೈಸೂರು ಅರಮನೆ, ಪ್ರಜ್ವಲಿಸುವ ಇಡೀ ಮೈಸೂರು ನಗರ ನಾಡಹಬ್ಬಕ್ಕೆ ನವ ವಧುವಿನಂತೆ ಸಿಂಗಾರಗೊಂಡಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದರೆ ತಪ್ಪಾಗಲಾರದು.

10 ದಿನ ನಡೆಯುವ ಮೈಸೂರು ದಸರೆ: ನಾಡ ಅದಿದೇವತೆ ದೇವಿ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ಈ ವರ್ಷದ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರಿಂದ ಚಾಲನೆ ಸಿಕ್ಕಿದ್ದು, 10 ದಿನಗಳ ಕಾಲ ನಡೆಯುವ ಮೈಸೂರು ದಸರೆಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿಯೇ ನಾಡಿನ ಎಲ್ಲಾ ರಸ್ತೆಗಳು ಮೈಸೂರಿನತ್ತ ಮುಖಮಾಡುತ್ತವೆ. ಮೈಸೂರಿಗೆ ಬರುವವರು-ಹೋಗುವವರ ಗಿಜಿಗಿಜಿಯಲ್ಲಿ ನಗರದ ಇಡೀ ರಸ್ತೆಗಳು, ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿ ದರೂ ಜನವೋ ಜನ.

ಹೊಂಬೆಳಕಿನಲ್ಲಿ ಮಿಂದೇಳುವ ಪ್ಯಾಲೇಸ್‌: ಆಕಾಶದ ನಕ್ಷತ್ರಗಳೇ ನಾಚುವಂಥ ಬೆರಗು, ಅರಮ ನೆಯ ದೀಪಾಲಂಕಾರವಾಗಿದ್ದು, ದಸರಾ ವೇಳೆ ಮೈಸೂರು ನೋಡುವ ಯಾರ ಕಣ್ಣಲ್ಲೂ, ಆ ಚಿತ್ರ ಅಚ್ಚಳಿಯದಂತೆ ಉಳಿಯುತ್ತದೆ. ಸುಮಾರು ಒಂದು ಲಕ್ಷ ವಿದ್ಯುತ್‌ ದೀಪಗಳಿಂದ ಸ್ವರ್ಣ ವರ್ಣದಲ್ಲಿ ಝಗಮಗಿಸುವ ಅರಮನೆಯನ್ನು ನೋಡುವುದೇ ಕಣ್ಣಿಗಾನಂದ. ಕೇವಲ ಅರಮನೆ ಮಾತ್ರವೇ ಅಲ್ಲ. ನವರಾತ್ರಿ ಸಂದರ್ಭದಲ್ಲಿ ಮೈಸೂರು ನಗರದ ಪ್ರಮುಖ ವೃತ್ತಗಳು, ರಸ್ತೆಗಳು, ಪಾರಂಪರಿಕ ಕಟ್ಟಡಗಳು, ಬಣ್ಣ ಬಣ್ಣದ ಎಲ್‌ಇಡಿ ಬಲ್ಬ್ಗಳ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಈ ವರ್ಷದ ದಸರೆಗೆ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ನಾಜಿರಾವ್‌ ರಸ್ತೆ, ಬಿಎನ್‌ ರಸ್ತೆ, ಇರ್ವಿನ್‌ ರಸ್ತೆ, ಅಲ್ಬರ್ಟ್‌ ವಿಕ್ಟರ್‌ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಸುಮಾರು 130 ಕಿ.ಮೀ. ಉದ್ದಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಹಾಗೆಯೇ ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ದೊಡ್ಡಕೆರೆ ಮೈದಾನ, ಕೆ.ಆರ್‌. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್‌), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್‌, ಎಲ್‌ಐಸಿ ವೃತ್ತ ಸೇರಿದಂತೆ 100 ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ಭುವನೇಶ್ವರಿ ದೇವಿ, ಸೋಮನಾಥೇಶ್ವರ ದೇವಾಲಯ, ಮೈಸೂರು ರಾಜಮನೆತನದ ಪ್ರಮುಖರು ಸೇರಿದಂತೆ 65 ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆ, ಮೈಸೂರಿನ ದಸರೆ ವಿದ್ಯುತ್‌ ದೀಪಾಲಂಕಾರಕ್ಕೆ 2 ಲಕ್ಷದ 42 ಸಾವಿರದ 12 ಯೂನಿಟ್‌ ಬಳಕೆಯಾಗಲಿದೆ. ಇದೇ ಮೊದಲ ಬಾರಿಗೆ ದಸರಾ ವಿದ್ಯುತ್‌ ದೀಪಾಲಂಕಾರ ಉಪಸಮಿತಿಯಿಂದ ಆಯೋಜಿಸಿರುವ ಡ್ರೋನ್‌ ಶೋ ನವರಾತ್ರಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ. ದಸರಾ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ವೀಕ್ಷಿಸಲು ದೇಶ- ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ರಾತ್ರಿ ಹೊತ್ತು ಅರಮನೆಯ, ಮೈಸೂರು ಬೀದಿಗಳ ಫೋಟೊಗ್ರಫಿ ಮಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ.

– ಸತೀಶ್‌ ದೇಪುರ

ಟಾಪ್ ನ್ಯೂಸ್

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

1-aa-2-bg

Ratan Tata; ಪಾರ್ಸಿ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಕ್ರಿಯೆ: ಸರ್ವ ಧರ್ಮ ಪ್ರಾರ್ಥನೆ

Terror 2

Hizb-Ut-Tahrir ಉಗ್ರ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಾಸ್ ಕಾರಂತ್

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಸ್ ಕಾರಂತ್

Vijayendra (2)

Congress ಸರಕಾರದಲ್ಲಿ ಗುದ್ದಲಿ ಪೂಜೆ ಅಲ್ಲ,ಗುದ್ದಲಿ ಕೂಡ ಕಾಣದ ಸ್ಥಿತಿ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Tata-Era

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

Shivarama-karantah

Jayanthi: ಅಪರೂಪದ ಬಹುಮುಖ ಪ್ರತಿಭೆ ಕೋಟ ಡಾ.ಶಿವರಾಮ ಕಾರಂತ

Ma-Jwala-Temple

Godesess Temple: ನೈಸರ್ಗಿಕ ಅನಿಲದಿಂದ ಹೊರಹೊಮ್ಮುವ ಜ್ವಾಲೆಯೇ ಇಲ್ಲಿ ಜ್ವಾಲಾಜೀ ಮಾ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

crime

Brahmavar: ಕಾರು-ರಿಕ್ಷಾ ಢಿಕ್ಕಿ; ಮೂವರಿಗೆ ಗಾಯ

de

Manipura: ವ್ಯಕ್ತಿ ನೇಣಿಗೆ ಶರಣು; ಪ್ರಕರಣ ದಾಖಲು

accident2

Kaup: ದಂಪತಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.