Gadag;ಹಾಡ ಹಗಲೇ ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಹಣ ದೋಚಿ ಪರಾರಿ

ಎದೆ, ಮುಖ, ಬೆನ್ನು ಹಾಗೂ ತಲೆಗೆ ತೀವ್ರ ಗಾಯ... ವ್ಯಾಪಕ ಖಂಡನೆ

Team Udayavani, Oct 10, 2024, 11:53 PM IST

1-fffffg

ಗದಗ : ರಾಜ್ಯ ದ್ರಾಕ್ಷಾರಸ ಮಂಡಳಿಯ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಮುಖಂಡ ಕಾಂತೀಲಾಲ್ ಬನ್ಸಾಲಿ ಮೇಲೆ ದುಷ್ಕರ್ಮಿಗಳಿಬ್ಬರು ಹಾಡಹಗಲೇ ಹಲ್ಲೆ ನಡೆಸಿ 45 ಸಾವಿರ ರೂ. ದೋಚಿ ಪರಾರಿಯಾದ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

ದುಷ್ಕರ್ಮಿಗಳ ಹಲ್ಲೆಯಿಂದ ಕಾಂತೀಲಾಲ್ ಬನ್ಸಾಲಿ ಅವರ ಎದೆ, ಮುಖ, ಬೆನ್ನು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ. ಮುಖಕ್ಕೆ ದುಷ್ಕರ್ಮಿಗಳು ಜೋರಾಗಿ ಗುದ್ದಿದ್ದರಿಂದ ಮುಖ ಬಾತಿದೆ. ದುಷ್ಕರ್ಮಿಗಳು ಕಾಂತೀಲಾಲ ಬನ್ಸಾಲಿ ಜೇಬಿನಲ್ಲಿದ್ದ ಸುಮಾರು 45 ಸಾವಿರ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಬಿಜೆಪಿಯ ಮುಖಂಡ ಕಾಂತೀಲಾಲ ಬನ್ಸಾಲಿ ಮಧ್ಯಾಹ್ನ 2-30ರ ಸುಮಾರಿಗೆ ಸ್ನೇಹಿತರನ್ನು ಭೇಟಿ ಮಾಡಿ ಭೂಮರಡ್ಡಿ ಸರ್ಕಲ್ ಮೂಲಕ ವೀರಶೈವ ಲೈಬ್ರರಿ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಅವರನ್ನು ಭೂಮರಡ್ಡಿ ಸರ್ಕಲ್‌ದಿಂದಲೇ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದಿದ್ದ ಇಬ್ಬರು ಯುವಕರು ರಸ್ತೆಯಲ್ಲಿ ಒಮ್ಮಿಂದೊಮ್ಮೆಲೆ ಬನ್ಸಾಲಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಬನ್ಸಾಲಿ ಅವರ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು ಜೇಬಿನಲ್ಲಿದ್ದ 45 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ.

ದುಷ್ಕರ್ಮಿಗಳ ಹಲ್ಲೆಯಿಂದ ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ಕಾಂತೀಲಾಲ ಬನ್ಸಾಲಿ ಅವರನ್ನು ಕೆಲ ಅಟೋ ರಿಕ್ಷಾ ಚಾಲಕರು, ತರಕಾರಿ ಮಾರಾಟ ಮಾಡುವ ಮಹಿಳೆಯರು ಮುಖಕ್ಕೆ ನೀರು ಸಿಂಪಡಿಸಿದಾಗ ಎಚ್ಚರಗೊಂಡಿದ್ದಾರೆ. ಕಾಂತೀಲಾಲ ಬನ್ಸಾಲಿ ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಹರ ಸಿಪಿಐ ಡಿ.ಬಿ. ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವ್ಯಾಪಕ ಖಂಡನೆ: ಬಿಜೆಪಿ ಮುಖಂಡ ಕಾಂತೀಲಾಲ ಬನ್ಸಾಲಿ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಬಿ.ಎಚ್. ಲದವಾ, ವಿಜಯಕುಮಾರ ಮುತ್ತಿನಪೆಂಡಿಮಠ ಮುಂತಾದವರು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರನ್ನು ಕೂಡಲೇ ಪತ್ತೆ ಮಾಡುವಂತೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

Vijayendra (2)

Congress ಸರಕಾರದಲ್ಲಿ ಗುದ್ದಲಿ ಪೂಜೆ ಅಲ್ಲ,ಗುದ್ದಲಿ ಕೂಡ ಕಾಣದ ಸ್ಥಿತಿ: ವಿಜಯೇಂದ್ರ

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

1-ucchil

Uchchila Dasara: ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ

1-asdsad

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.