Haryana; ಶೇ.96ರಷ್ಟು ಶಾಸಕರು ಕೋಟ್ಯಧಿಪತಿಗಳು: ಎಡಿಆರ್ ವರದಿ ಮಾಹಿತಿ
Team Udayavani, Oct 11, 2024, 7:25 AM IST
ಹೊಸದಿಲ್ಲಿ: ಹರಿಯಾಣ ವಿಧಾನಸಭೆಗೆ ಹೊಸದಾಗಿ ನೇಮಕವಾದ 90 ಶಾಸಕರಲ್ಲಿ 86 ಮಂದಿ ಕೋಟ್ಯಧಿಪತಿಗಳು ಎಂದು ಎಡಿಆರ್(ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ) ವರದಿ ತಿಳಿಸಿದೆ. ಅಲ್ಲದೇ ಇವರಲ್ಲಿ 12 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದೂ ಹೇಳಿದೆ.
ವಿಧಾನಸಭೆಯಲ್ಲಿ ಜಯಗಳಿಸಿದ 90 ಮಂದಿ ಶಾಸಕರು ಸಲ್ಲಿಸಿದ್ದ ಅಫಿದವಿತ್ ಆಧರಿಸಿ ಈ ವರದಿ ತಯಾರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2019ರಲ್ಲಿ ಶೇ.93ರಷ್ಟು ಕೋಟ್ಯಧಿಪತಿಗಳಿದ್ದರು. ಹಾಲಿ ಶಾಸಕರಲ್ಲಿ ಶೇ.44ರಷ್ಟು ಜನರ ಆಸ್ತಿ 10 ಕೋಟಿ ರೂ.ಗೂ ಅಧಿಕವಿದ್ದು, ಶೇ.2.2ರಷ್ಟು ಮಂದಿಯ ಆಸ್ತಿ ಮಾತ್ರ 20 ಕೋಟಿ ರೂ. ದಾಟಿದೆ. ಪಕ್ಷವಾರು ಗಮನಿಸಿದರೆ ಬಿಜೆಪಿಯ ಶೇ.96ರಷ್ಟು, ಕಾಂಗ್ರೆಸ್ನ ಶೇ.95ರಷ್ಟು, ಐಎನ್ಎಲ್ಡಿ, ಪಕ್ಷೇತರ ಶಾಸಕರಲ್ಲಿ ಶೇ.100ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.