Haryana ಸೋಲಿಗೆ ನಿಮ್ಮ ಸ್ವಾರ್ಥ ಕಾರಣ: ರಾಹುಲ್ ಗಾಂಧಿ ಗರಂ?
ಪರಾಮರ್ಶೆ ಸಭೆಯಿಂದ ಎದ್ದುಹೋದ ಕಾಂಗ್ರೆಸ್ ನಾಯಕ
Team Udayavani, Oct 11, 2024, 7:30 AM IST
ಚಂಡೀಗಢ: “ರಾಜ್ಯ ಕಾಂಗ್ರೆಸ್ ನಾಯಕರ ಸ್ವಾರ್ಥವೇ ಹರಿಯಾಣದಲ್ಲಿ ಪಕ್ಷದ ಸೋಲಿಗೆ ಕಾರಣ. ಇಲ್ಲದಿದ್ದರೆ ನಾವೇ ಗೆಲ್ಲುತ್ತಿದ್ದೆವು.’ಇದು ಚುನಾವಣೆಗೂ ಮುನ್ನವೇ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದ ರಾಜ್ಯ ನಾಯಕರ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ ಪರಿ.
ನಿರೀಕ್ಷೆಯೆಲ್ಲ ಹುಸಿಯಾಗುವಂತೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡ ಹಿನ್ನೆಲೆಯಲ್ಲಿ ಫಲಿತಾಂಶದ ಕುರಿತು ಚರ್ಚಿಸಲು ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ನಿವಾಸದಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. ಇದರಲ್ಲಿ ರಾಹುಲ್ ಗಾಂಧಿ, ಹೂಡಾ, ಗೆಹ್ಲೋಟ್ ಸಹಿತ ಪ್ರಮುಖ ನಾಯಕರು ಹಾಜರಾಗಿದ್ದರು. ಈ ವೇಳೆ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ರಾಹುಲ್, “ನಮ್ಮ ಸೋಲಿನ ಬಗ್ಗೆ ಇವಿಎಂಗಳು ಮತ್ತು ಚುನಾವಣ ಆಯೋಗವೇ ಉತ್ತರಿಸಬೇಕಿದೆ.
ಎಣಿಕೆ ವೇಳೆ ಏನು ಲೋಪವಾಗಿದೆ ಎಂಬ ಬಗ್ಗೆ ನಮಗೆ ವಿಸ್ತೃತ ವರದಿ ಬೇಕಿದೆ’ ಎಂದರಲ್ಲದೆ, “ಕೆಲವು ರಾಜ್ಯ ನಾಯಕರಿಗೆ ಪಕ್ಷಕ್ಕಿಂತ ಸ್ವಹಿತವೇ ಮುಖ್ಯವಾಯಿತು’ ಎಂದು ಹೇಳಿ ಸಿಟ್ಟಿನಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಈ ಸಭೆಗೆ ಸುರ್ಜೇವಾಲ ಮತ್ತು ಕುಮಾರಿ ಸೆಲ್ಜಾ ಗೈರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.