India; ವನ್ಯಜೀವಿಗಳ ಸಂಖ್ಯೆ 50 ವರ್ಷದಲ್ಲಿ 73% ಕುಸಿತ!
3 ತಳಿ ರಣಹದ್ದುಗಳ ಸಂಖ್ಯೆ ತೀವ್ರ ಕುಸಿತ
Team Udayavani, Oct 11, 2024, 7:55 AM IST
ಹೊಸದಿಲ್ಲಿ: 1970ರಿಂದ 2020ರವರೆಗೆ ಅಂದರೆ 50 ವರ್ಷಗಳಲ್ಲಿ ಆವಾಸಸ್ಥಾನದ ನಷ್ಟ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದಾಗಿ “ಕಣ್ಗಾವಲಿನಲ್ಲಿರುವ ವನ್ಯಜೀವಿ’ಗಳ ಸಂಖ್ಯೆ ಶೇ.73ರಷ್ಟು ಕುಸಿದಿದೆ ಎಂದು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್(ಡಬ್ಲ್ಯುಡಬ್ಲ್ಯುಎಫ್)ನ ವರದಿಯೊಂದು ತಿಳಿಸಿದೆ.
ಲಿವಿಂಗ್ ಪ್ಲಾನೆಟ್ ರಿಪೋರ್ಟ್-2024 ವರದಿಯು, 3 ತಳಿಯ ರಣಹದ್ದುಗಳ ಕುಸಿತದ ಬಗ್ಗೆ ಮಾಹಿತಿ ನೀಡಿದೆ. ಆದರೆ ಹುಲಿಗಳಂತಹ ಕೆಲವು ಪ್ರಭೇದಗಳ ಸಂಖ್ಯೆ ಚೇತರಿಕೆ ಕಾಣುತ್ತಿದೆ. ಇದಕ್ಕೆ ಸರಕಾರಗಳ ವನ್ಯಜೀವಿ ನೀತಿಗಳು ಕಾರಣ ಎಂದಿದೆ. ಜಾಗತಿಕವಾಗಿ ಸಿಹಿ ನೀರು ಪರಿಸರ, ಭೂ ಪರಿಸರ, ಸಮುದ್ರ ಪರಿಸರ ವ್ಯವಸ್ಥೆಗಳಲ್ಲಿ ವನ್ಯಜೀವಿ ಸಂಖ್ಯೆ ಕ್ರಮವಾಗಿ 85, 69 ಮತ್ತು 56 ಪ್ರತಿಶತ ಕುಸಿದಿದೆ. ವಿಶ್ವಾದ್ಯಂತ ವನ್ಯಜೀವಿ ಸಂಖ್ಯೆ ಇಳಿಕೆಗೆ ಆವಾಸಸ್ಥಾನದ ನಷ್ಟ ಮುಖ್ಯ ಕಾರಣವಾಗಿದ್ದು, ಬಳಿಕ ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಆಕ್ರ ಮಣಕಾರಿ ಪ್ರಭೇದಗಳು, ಕಾಯಿಲೆಗಳು ಕಾರಣವಾಗಿವೆ. ಅಲ್ಲದೇ ಚೆನ್ನೈ ಜೌಗು ಪ್ರದೇಶಗಳ ಪ್ರಮಾಣ ಕಡಿಮೆ, ನಿರಂತರ ವಾಗಿ ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ಉಲ್ಲೇಖಿಸಿ ಹವಾಮಾನ ಬದಲಾವಣೆ ಜತೆ ತಳುಕು ಹಾಕಿದ ಪರಿಸರ ನಾಶದಿಂದ ಹೆಚ್ಚು ಹಾನಿಯಾಗಲಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.