Uchila Dasara: ಉಡುಪಿ ಉಚ್ಚಿಲ ದಸರಾ 2024: ಶೋಭಾಯಾತ್ರೆಗೆ ಅಂತಿಮ ಸಿದ್ಧತೆ


Team Udayavani, Oct 11, 2024, 4:06 PM IST

Uchila Dasara: ಉಡುಪಿ ಉಚ್ಚಿಲ ದಸರಾ 2024: ಶೋಭಾಯಾತ್ರೆಗೆ ಅಂತಿಮ ಸಿದ್ಧತೆ

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿ ರುವ ಉಡುಪಿ ಉಚ್ಚಿಲ ದಸರಾ – 2024ರ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಶೋಭಾಯಾತ್ರೆ ಅ. 12ರಂದು ಸಂಜೆ 3 ಗಂಟೆಗೆ ಆರಂಭಗೊಳ್ಳಲಿದ್ದು, ಶೋಭಾಯಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಲಕ್ಷಾಂತರ ಭಕ್ತರ ನಿರೀಕ್ಷೆ
ಈಗಾಗಲೇ ಲಕ್ಷಾಂತರ ಮಂದಿ ದೇಗುಲಕ್ಕೆ ಭೇಟಿ ನೀಡಿದ್ದು, ಅ. 12ರಂದು 3 ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ಭಕ್ತರು ಹಾಗೂ ಜಲಸ್ತಂಭನದ ಸಂದರ್ಭ 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಮೆರವಣಿಗೆ ಸಾಗುವ ಹಾದಿ
ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆದು, 3 ಗಂಟೆಗೆ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಮಹಾಲಕ್ಷಿ$¾à ದ್ವಾರದ ಬಳಿ ಶಾರದಾ ಮಾತೆ ಮತ್ತು ನವದುರ್ಗೆಯರಿಗೆ ಪುಷ್ಪಾರ್ಚನೆಗೈದು ಡಾ| ಜಿ. ಶಂಕರ್‌ ಸಹಿತ ಗಣ್ಯರು ಶೋಭಾ ಯಾತ್ರೆಗೆ ಚಾಲನೆ ನೀಡಲಿ ದ್ದಾರೆ. ಬಳಿಕ ರಾ. ಹೆ.66ರ ಉಚ್ಚಿಲ ದಿಂದ ಎರ್ಮಾಳ್‌-ಉಚ್ಚಿಲ- ಮೂಳೂರು – ಕೊಪ್ಪಲಂಗಡಿ ಮಾರ್ಗ ವಾಗಿ ಕಾಪು ಬೀಚ್‌(ದೀಪಸ್ತಂಭದ ಬಳಿ)ಗೆ ತಲುಪಲಿದೆ. ಈ ಸಂದರ್ಭ ಬೀಚ್‌ನಲ್ಲಿ ಮ್ಯೂಸಿಕಲ್‌ ನೈಟ್‌ ಆಯೋಜಿಸಲಾಗಿದೆ.

ಬೃಹತ್‌ ಗಂಗಾರತಿ
ಮೆರವಣಿಗೆಯು ಬೀಚ್‌ ತಲುಪಿದ ಬಳಿಕ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್‌ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ. ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ ಹತ್ತು ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಲಿದೆ. ಬಳಿಕ ಸಮುದ್ರ ಮಧ್ಯೆ ವಿಗ್ರಹಗಳ ಜಲಸ್ತಂಭನ ನಡೆಯಲಿದೆ. ಈ ವೇಳೆ ನೂರಾರು ದೋಣಿಗಳಿಂದ ಕೃತಕ ದೀÌಪ ಸೃಷ್ಟಿ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.

ಅತ್ಯಾಕರ್ಷಕ ಟ್ಯಾಬ್ಲೋ
ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳಗೊಂಡ 10 ಟ್ಯಾಬ್ಲೋ ಗಳ ಸಹಿತ ಸಾಮಾಜಿಕ ಜಾಗೃತಿ ಸಂದೇಶ ಸಾರುವ ಟ್ಯಾಬ್ಲೋಗಳು, ಭಜನೆ ತಂಡಗಳು, ತೆಯ್ಯಂ ಸಹಿತ ವಿವಿಧ ವೇಷಭೂಷಣಗಳು, ಹುಲಿ ವೇಷ, ಚೆಂಡೆ ಬಳಗ, ನಾಗಸ್ವರ, ವಾದ್ಯ ಸಹಿತ ನಾಸಿಕ್‌ ಬ್ಯಾಂಡ್‌ ತಂಡಗಳು ಹಾಗೂ 50ಕ್ಕೂ ಅಧಿಕ ಟ್ಯಾಬ್ಲೋ ಒಳಗೊಂಡ ಶೋಭಾ ಯಾತ್ರೆ ನಡೆಯಲಿದೆ.

ಉಡುಪಿ ಉಚ್ಚಿಲ ದಸರಾದಲ್ಲಿನ ಅಚ್ಚುಕಟ್ಟುತನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಸರಾ ರೂವಾರಿ ಡಾ| ಜಿ. ಶಂಕರ್‌, ಪ್ರಮುಖರಾದ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಗಿರಿಧರ ಸುವರ್ಣ, ವಿನಯ್‌ ಕರ್ಕೇರ ಮುಂತಾದವರ ಶ್ರಮದಿಂದ ಈ ಬಾರಿ ಹೆಚ್ಚಿನ ಆಕರ್ಷಣೆ. ವಿವಿಧೆಡೆ ಪಾರ್ಕಿಂಗ್‌ ಸೌಲಭ್ಯ

ಅ. 12ರಂದು ಮಹಾಚಂಡಿಕಾ ಯಾಗ ಪೂರ್ಣಾಹುತಿ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶೋಭಾಯಾತ್ರೆ ಮುಗಿದ ಬಳಿಕ ಕಾಪು ಬೀಚ್‌ನಲ್ಲಿ ಉಪಾಹಾರದ ವ್ಯವಸ್ಥೆಯಿದೆ. ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನ, ಉಚ್ಚಿಲ ಮಹಾಲಕ್ಷಿ$¾à ಶಾಲೆ ಬಳಿಯ ಬಯಲು ಪ್ರದೇಶ, ದೇವಸ್ಥಾನದ ಮುಂಭಾಗದ ಪ್ರದೇಶ, ಮೊಗವೀರ ಭವನದ ಸುತ್ತಮುತ್ತಲು ಹಾಗೂ ಎರ್ಮಾಳು ಜನಾರ್ದನ ದೇವಸ್ಥಾನದ ಬಳಿಯೂ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಪರ್ಯಾಯ ರಸ್ತೆ ಬಳಸಿ
ಸುಮಾರು 15-18 ಕಿ. ಮೀ. ವರೆಗೆ ಶೋಭಾಯಾತ್ರೆ ಸಾಗುವು ದರಿಂದ ಹೆದ್ದಾರಿ ಸಂಚಾರಕ್ಕೆ ತೊಂದರೆ ಯಾಗದಂತೆ ವಿವಿಧ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಶೋಭಾಯಾತ್ರೆ ಸಂದರ್ಭದ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು ಮಂಗಳೂರಿನಿಂದ ಉಡುಪಿಗೆ ತೆರಳುವ ವಾಹನ ಸವಾರರು ಪಡುಬಿದ್ರಿ-ಮುದರಂಗಡಿ-ಶಿರ್ವ- ಕಟಪಾಡಿ ರಸ್ತೆ ಹಾಗೂ ಉಡುಪಿಯಿಂದ ಮಂಗಳೂರಿಗೆ ತೆರಳುವ ಸವಾರರು ಕಟಪಾಡಿ-ಶಿರ್ವ-ಮುದರಂಗಡಿ-ಪಡುಬಿದ್ರಿ ರಸ್ತೆಯಲ್ಲಿ ಸಂಚರಿಸುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಪೊಲೀಸ್‌ ಇಲಾಖೆ ಮತ್ತು ದಸರಾ ಸಮಿತಿ ಅಭಿಪ್ರಾಯ.

ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಸಿದ್ಧತೆ ಪರಿಶೀಲನೆ
ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಎಚ್‌. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಸಿಪಿಐ ಜಯಶ್ರೀ ಮಾನೆ , ಪಡುಬಿದ್ರಿ ಎಸ್‌ಐ ಪ್ರಸನ್ನ ಕುಮಾರ್‌, ಕಾಪು ಎಸ್‌ಐ ಅಬ್ದುಲ್‌ ಖಾದರ್‌ ಸಹಿತ ಪೊಲೀಸ್‌ ಅಧಿಕಾರಿಗಳು ಗುರುವಾರ ರಾತ್ರಿ ಉಚ್ಚಿಲಕ್ಕೆ ಭೇಟಿ ನೀಡಿ, ಶೋಭಾಯಾತ್ರೆಯ ಸಿದ್ಧತೆಯನ್ನು ಪರಿಶೀಲಿಸಿದರು.

ಉಚ್ಚಿಲ ದಸರಾ 2024ರಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು ನಭೂತೋ ಎಂಬಂತೆ ಆಚರಿಸಲಾಗಿದೆ. ಅ. 11 ಮತ್ತು 12ರಂದು ಕ್ಷೇತ್ರಕ್ಕೆ ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ವಿವಿಧೆಡೆ ಪಾರ್ಕಿಂಗ್‌ ಸೌಲಭ್ಯ ಮಾಡಲಾಗಿದೆ. ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಸಾರ್ವಜನಿಕರು ಮತ್ತು ಸ್ಥಳೀಯರು ತಮ್ಮ ಮನೆ, ಕಟ್ಟಡಗಳ ಮುಂಭಾಗವನ್ನು ತಳಿರು ತೋರಣಗಳಿಂದ ಶೃಂಗರಿಸಬಹುದು. ರಾ. ಹೆ. 66 ಮತ್ತು ಬೀಚ್‌ಗೆ ತೆರಳುವ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೆ ಸುಗಮ ಸಂಚಾರಕ್ಕೆ ಕೈ ಜೋಡಿಸುವಂತೆ ವಿನಂತಿಸಲಾಗಿದೆ.
– ಡಾ| ಜಿ. ಶಂಕರ್‌, ಉಡುಪಿ ಉಚ್ಚಿಲ ದಸರಾ ರೂವಾರಿ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.