Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

Team Udayavani, Oct 12, 2024, 7:30 AM IST

11

ಕಡಬ: ಕೊಯಿಲ ಗ್ರಾಮದಲ್ಲಿ ಕಳೆದ ವರ್ಷ ಮಕ್ಕಳಿಂದ ಮನೆಗಳಲ್ಲಿ ನಡೆದ ಶಾರದಾ ಪೂಜೆ.

ಕಡಬ: ವಿಜಯದಶಮಿ ದಿನದಂದು ಕಡಬ ತಾಲೂಕಿನ ಕೊçಲ ಗ್ರಾಮದ ಮನೆಗಳಲ್ಲಿ ತಮ್ಮ ಪಠ್ಯ ಪುಸ್ತಕಗಳಿಗೆ ತಾವೇ ಹೂವು ಇಟ್ಟು, ಆರತಿ ಎತ್ತಿ ಶಾರದಾ ಪೂಜೆ ನಡೆಸುವ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಬಾರಿ ಆರಂಭವಾದ ಈ ಹೊಸ ಸಂಪ್ರದಾಯವನ್ನು ದ.ಕನ್ನಡ ಮತ್ತು ಕೊಡಗು ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ.

ಕಳೆದ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ಗ್ರಾಮದ ಪ್ರತಿ ಮನೆಗಳಿಗೂ ಏಕಾರತಿ, ಘಂಟಾ ಮಣಿ ಹಾಗೂ ತಟ್ಟೆಯನ್ನು ಪ್ರಸಾದ ರೂಪವಾಗಿ ನೀಡಲಾಗಿತ್ತು. ಅವುಗಳನ್ನು ಬಳಸಿ ವಿಜಯದಶಮಿಯದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಚಿಭೂತರಾಗಿ, ಶುಭ್ರ ವಸ್ತ್ರ ಉಟ್ಟು ಮನೆಯ ದೇವರ ಕೋಣೆಯಲ್ಲಿ ತಮ್ಮ ಪುಸ್ತಕಗಳನ್ನಿಟ್ಟು ಅದಕ್ಕೆ ಹೂವು, ತುಳಸಿ, ಕುಂಕುಮ, ಅಕ್ಷತೆ ಇಟ್ಟು, ಆರತಿ ಎತ್ತಿ ಪೂಜೆ ಮಾಡಿ ಅದರ ಫೂಟೋಗಳನ್ನು ದೇವಸ್ಥಾನದ ಪ್ರಮುಖರೊಂದಿಗೆ ಹಂಚಿಕೊಳ್ಳುವ ಮೂಲಕ ಹೊಸದೊಂದು ಚಿಂತನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.

ʼನಮ್ಮ ದೇವಸ್ಥಾನ-ನಮ್ಮ ವಿದ್ಯಾರ್ಥಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಧರ್ಮ ಜಾಗƒತಿಯ ನೆಲೆಯಲ್ಲಿ ಕಳೆದ ವರ್ಷ ಗ್ರಾಮದ ಸುಮಾರು 600 ಮನೆಗಳಲ್ಲಿ ಮಕ್ಕಳು ಶಾರದಾಪೂಜೆ ನಡೆಸಿದ್ದರು ಎಂದು ಹೇಳುತ್ತಾರೆ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ.

ಈ ಬಾರಿ ಜಿಲ್ಲೆಗೆ ವಿಸ್ತರಣೆ
ಕೊಯಿಲ ಗ್ರಾಮದಲ್ಲಿ ಆರಂಭಗೊಂಡ ಚಿಂತನೆಯನ್ನು ಈ ಬಾರಿ ದೇವಾಲಯಗಳ ಸಂವರ್ಧನ ಸಮಿತಿಯ ಮೂಲಕ ದ.ಕ. ಹಾಗೂ ಕೊಡಗು ಜಿಲ್ಲೆಗಳಿಗೆ ವಿಸ್ತರಣೆ ಮಾಡಿದ್ದೇವೆ. ಎಲ್ಲೆಡೆ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 5 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ದೇವಾಲಯಗಳ ಸಂವರ್ಧನ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್‌ ಕೇಶವ ಪ್ರಸಾದ್‌ ಮುಳಿಯ ಹೇಳಿದ್ದಾರೆ.

-ನಾಗರಾಜ್‌ ಎನ್‌. ಕೆ.

ಟಾಪ್ ನ್ಯೂಸ್

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ

Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ

Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್‌ ಕಾರ್ಡ್‌ ವಶ

Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್‌ ಕಾರ್ಡ್‌ ವಶ

6-mysore-story

Mysore Dasara: ನಮ್ಮ ಒಡೆಯರ್‌ ಊರು…

IPL 2025: Will Pant leave Delhi Capitals?; Rishabh’s tweet sparked curiosity

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತೊರೆಯುತ್ತಾರಾ ಪಂತ್;‌ ಕುತೂಹಲ ಕೆರಳಿಸಿದ ರಿಷಭ್ ಟ್ವೀಟ್‌

Madikeri Dasara 2024: ಮೈಸೂರು – ಮಂಗಳೂರು ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

Madikeri Dasara 2024: ಮೈಸೂರು – ಮಂಗಳೂರು ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

Gadag: ಕುಂಭ ಹೊತ್ತು 3 ಕಿ.ಮೀ. ಪಾದಯಾತ್ರೆ ನಡೆಸಿದ ರಂಭಾಪುರಿ ಜಗದ್ಗುರುಗಳು

Gadag: ಕುಂಭ ಹೊತ್ತು 3 ಕಿ.ಮೀ. ಪಾದಯಾತ್ರೆ ನಡೆಸಿದ ರಂಭಾಪುರಿ ಜಗದ್ಗುರುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ

10(2)

Bantwal: ಪಾಣೆಮಂಗಳೂರು ಶಾಲಾ ಶಾರದೋತ್ಸವಕ್ಕೆ ಶತಮಾನ

sullia

Sullia: ಬಣ್ಣದ ಮಾಲಿಂಗರ ಮಹಿರಾವಣನ ಯಕ್ಷ ಪ್ರತಿಮೆ ಅನಾವರಣ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ

Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ

Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್‌ ಕಾರ್ಡ್‌ ವಶ

Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್‌ ಕಾರ್ಡ್‌ ವಶ

6-mysore-story

Mysore Dasara: ನಮ್ಮ ಒಡೆಯರ್‌ ಊರು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.