Haryana: ಅ.17ರಂದು ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ, ಪ್ರಧಾನಿ ಉಪಸ್ಥಿತಿ
Team Udayavani, Oct 12, 2024, 12:39 PM IST
ಹರ್ಯಾಣ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಗೆಲುವಿನ ನಂತರ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗಿದೆ. ಅದರಂತೆ ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅವರು ಅಕ್ಟೋಬರ್ 17 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಹೊಸ ಸರ್ಕಾರದ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದು. ಗುರುವಾರ (ಅ.17) ರಂದು ಪಂಚಕುಲದ ದಸರಾ ಮೈದಾನದಲ್ಲಿ ಬೆಳಗ್ಗೆ 10:00 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಉಪಸ್ಥಿತಿ:
ಪ್ರಧಾನಿ ಮೋದಿ, ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಜೊತೆಗೆ ಪಕ್ಷದ ಹಿರಿಯ ನಾಯಕರೂ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಏತನ್ಮಧ್ಯೆ, ಪರೇಡ್ ಮೈದಾನದಲ್ಲಿ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. “ನಾವು ಕಾರ್ಯಕ್ರಮಕ್ಕಾಗಿ ಸ್ಥಳವನ್ನು ಸಿದ್ಧಪಡಿಸುತ್ತಿದ್ದೇವೆ” ಎಂದು ಪಂಚಕುಲದ ಉಪ ಆಯುಕ್ತ (ಡಿಸಿ) ಡಾ. ಯಶ್ ಗಾರ್ಗ್ ಟ್ವೀಟ್ ಮಾಡಿದ್ದಾರೆ.
ಪ್ರಮಾಣ ವಚನ ಸಮಾರಂಭಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಬಿಜೆಪಿ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ನಯಾಬ್ ಸಿಂಗ್ ಸೈನಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷವು(ಬಿಜೆಪಿ) ತನ್ನ ಮೂರನೇ ಇನ್ನಿಂಗ್ಸ್‌ಗೆ ಸಿದ್ಧವಾಗಿದೆ. ಅದರಂತೆ ನಯಾಬ್ ಸಿಂಗ್ ಸೈನಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Assam: ಲುಂಗಿ, ಬೆಡ್ ಶೀಟ್ ಬಳಸಿ ಜೈಲಿನ 20 ಅಡಿ ಎತ್ತರದ ಗೋಡೆ ಜಿಗಿದು 5 ಕೈದಿಗಳು ಎಸ್ಕೇಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Ballari: ದೌರ್ಜನ್ಯ, ಹಿಂಸಾಚಾರ ಖಂಡಿಸಿ ಬಳ್ಳಾರಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ
Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್ ಅಲಿ ಪುತ್ರ ಬಂಧನ
Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ
Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ
Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.