Mysuru Dasara: ವಿಶ್ವವಿಖ್ಯಾತ ಜಂಬೂಸವಾರಿ ಸಂಪನ್ನ; 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

ನಾಡದೇವಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪುಷ್ಪಾರ್ಚನೆ ​

Team Udayavani, Oct 12, 2024, 9:28 PM IST

Jamboo1

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ವಿಜಯದಶಮಿ ದಿನದಂದು ಜಂಬೂಸವಾರಿಗೆ ಅದ್ಧೂರಿ ಚಾಲನೆ ದೊರೆಯಿತು. ನಾಡದೇವಿ ಚಾಮುಂಡೇಶ್ವರಿ ಸಹಿತವಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯ 5ನೇ ಬಾರಿಗೆ ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ  ಐತಿಹಾಸಿಕ ಕ್ಷಣವನ್ನು ಕೋಟ್ಯಾಂತರ ಜನರು ಕಣ್ತುಂಬಿಕೊಂಡರು.

ಶನಿವಾರ ಮಧ್ಯಾಹ್ನ 1.41 ರಿಂದ 2.10ರ ನಡುವೆಯ ಶುಭ ಮಕರ‌ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿತು. ಬಳಿಕ ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಚಾಲನೆ ನೀಡಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ, ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಜೊತೆಗಿದ್ದರು. ಜಂಬೂಸವಾರಿಯ ಚಾಮುಂಡೇಶ್ವರಿ ದೇವಿ ಪುಷ್ಪಾರ್ಚನೆ ವೇಳೆ ಸಂಸದ ಹಾಗೂ ರಾಜವಂಶಸ್ಥ ಯದುವೀರ ಒಡೆಯರ್‌  ಗೈರಾಗಿದ್ದರು.

ಚಿನ್ನದ ಅಂಬಾರಿ 5ನೇ ಬಾರಿಗೆ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮೀ ಜೊತೆಗಿದ್ದು ಸಹಕಾರ ನೀಡಿದರೆ, ​ಧನಂಜಯ ನಿಶಾನೆ ಆನೆಯಾಗಿದ್ದ. ಒಟ್ಟು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಿದವು. ಅರಮನೆಯಿಂದ ಆರಂಭಗೊಂಡ ಜಂಬೂಸವಾರಿ ಜಯಚಾಮರಾಜ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಆರ್​​ಎಂಸಿ ವೃತ್ತ, ಬಂಬೂಬಜಾರ್​ ಮೂಲಕ ಬನ್ನಿಮಂಟಪ ತಲುಪಿತು.

ಮೈಸೂರು ದಸರಾ ಮಹೋತ್ಸವ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ, ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಹಾಗೂ ಇಲಾಖಾವಾರು, ನಿಗಮ ಮಂಡಳಿ , ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ 51 ಸ್ತಬ್ಧ ಚಿತ್ರಗಳು ಜಂಬೂಸವಾರಿಯಲ್ಲಿ ಭಾಗಿಯಾಗಿದ್ದವು. ಜನರಿಂದ ತಮಟೆ, ಡೋಲು ವಾದ್ಯಕ್ಕೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ.

ಮಳೆಯ ಸಿಂಚನ:
ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಆರಂಭಕ್ಕಿಂತ ಮೊದಲು ಮಳೆಯ ಸಿಂಚನದಿಂದ ಮೆರವಣಿಗೆಯು ಅರ್ಧ ತಾಸು ವಿಳಂಬವಾಗಿ ಆರಂಭವಾಯಿತು. ವಿಶ್ವವಿಖ್ಯಾತ ಜಂಬೂಸವಾರಿಯನ್ನು ಕೋಟ್ಯಂತರ ಭಕ್ತರು ಕಾತರ ಕಾದು ಕಣ್ತಿಂಬಿಕೊಂಡಿದ್ದಾರೆ. ಅಂಬಾರಿಯಲ್ಲಿ ಆಸಿನವಾಗಿದ್ದ ನಾಡ ದೇವತೆ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು. ಇನ್ನು ಜಂಬೂಸವಾರಿ ನಡೆಯುವ ದಾರಿಯುದ್ದಕ್ಕೂ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ​

ಟಾಪ್ ನ್ಯೂಸ್

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Bhatakal

Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್

1-ewss

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

Joshi

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

1-a-shobha

Shobha Karandlaje; ದುಷ್ಟ ಶಕ್ತಿಗಳು ಯಾರೆಂಬುದನ್ನು ಜನರೇ ತೀರ್ಮಾನಿಸುತ್ತಾರೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Joshi

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.