Mangaluru: ಲಾರಿ ಅಡಿಗೆ ಬಿದ್ದು ಸ್ಕೂಟರ್ ಸವಾರ ಸಾವು
Team Udayavani, Oct 12, 2024, 9:51 PM IST
ಮಂಗಳೂರು: ಪಡೀಲ್‌ನ ಪೆಟ್ರೋಲ್‌ಪಂಪ್ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ಲಾರಿಗೆ ಸ್ಕೂಟರ್ ಢಿಕ್ಕಿಯಾಗಿ ಸವಾರನ ಮೇಲೆ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಪಡೀಲ್‌ನ ಇಂಡಿಯನ್ ಪೆಟ್ರೋಲ್‌ನಿಂದ ರಾತ್ರಿ 9 ಗಂಟೆ ವೇಳೆಗೆ ಲಾರಿ ಚಾಲಕ ಮಲ್ಲಿಕಾರ್ಜುನ್ ಎಂಬಾತ ಫರಂಗಿಪೇಟೆ ಕಡೆಗೆ ತೆರಳುವ ಉದ್ದೇಶದಿಂದ ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಡೀಲ್ ಜಂಕ್ಷನ್ ಕಡೆಯಿಂದ ಸ್ಕೂಟರ್ ಸವಾರ ಅಡ್ಯಾರ್‌ಪದವು ನಿವಾಸಿ ಜೋಸೆಫ್ ಕೆ.ಕೆ. (52) ವೇಗವಾಗಿ ಬಂದಿದ್ದು, ಎದುರಿನಲ್ಲಿ ಮೊಹಮ್ಮದ್ ಅಲ್ಫಿಯಾನ್ ಎನ್ನುವವರು ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಸಹಸವಾರರಾಗಿದ್ದ ಟಿ.ಮೊಹಮ್ಮದ ಶಾಹೀರ್‌ನ ಎಡ ಕಾಲಿಗೆ ಸ್ಕೂಟರ್ ತಾಗಿಸಿ, ಲಾರಿಯ ಹಿಂದಿನ ಬಲ ಬದಿಯ ಚಕ್ರದ ಕೆಳಗೆ ಸ್ಕೂಟರ್ ಸಮೇತಾ ಬಿದ್ದಿದ್ದಾರೆ. ಲಾರಿಯ ಚಕ್ರವು ಸ್ಕೂಟರ್ ಸವಾರನ ಮೇಲೆ ಸಾಗಿದೆ.
ಅಪಘಾತದ ಪರಿಣಾಮ ಜೋಸೆಫ್ ಅವರ ಮುಖಕ್ಕೆ, ಎದೆಗೆ, ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯ, ಬಲಗೈ ಮೂಳೆ ಮುರಿತ ಮತ್ತು ಎಡ ಕೈ ತುಂಡಾಗಿದೆ. ತತ್‌ಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಟಿ.ಮೊಹಮ್ಮದ್ ಶಾಹೀರ್ ಅವರು ಎಡಕಾಲಿಗೂ ಗಾಯವಾಗಿದ್ದು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ನಗರ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.