H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?
Team Udayavani, Oct 13, 2024, 1:16 AM IST
ಮೈಸೂರು: 10 ವರ್ಷ ಹಿಂದೆ ಮಾಡಿದ ಜಾತಿಗಣತಿ ವರದಿಯ ನ್ನು ಈಗ ಇಟ್ಟುಕೊಂಡು ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಕಚೇರಿಯಲ್ಲಿ ತಯಾರಿಸಿದ ವರದಿ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ಸಭೆಯಲ್ಲಿ ಎಸ್‌ಐಟಿ ತನಿಖೆ ಮಾಡಲಾಗುವುದು ಅಂದಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಇವರು ವಿಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಸದನದಲ್ಲಿಯೂ ಚರ್ಚಿಸಿದ್ದರು. ಸರಕಾರ ರಚನೆ ಆಗಿ 15 ತಿಂಗಳಾಗಿದೆ. ಇಷ್ಟುದಿನ ಸುಮ್ಮನಿದ್ದವರು ಈಗ ತನಿಖೆ ಮಾಡುತ್ತೇವೆಂದರೆ ಏನರ್ಥ. ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನವರು ಅದ್ಯಾವುದೋ ಜಾಹೀರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯವಂತೆ. ರಾಜ್ಯವನ್ನು ವಾಮಾಮಾರ್ಗ, ಮೋಸದಿಂದ ಅಸ್ತಿರಗೊಳಿಸುತ್ತಿದ್ದಾರೆ ಅಂತ ಕೊಟ್ಟಿದ್ದಾರೆ. ಆದರೆ ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರೋ ಸರಕಾರ ಇದು. ವಾಲ್ಮೀಕಿ ನಿಗಮದ ಹಣ ವನ್ನು ನುಂಗಿದ್ದಾರೆ. ಮೋಸದಿಂದ ನಿವೇಶನ ತೆಗೆದುಕೊಂಡಿದ್ದು, ವಾಪಸ್ ಕೊಟ್ಟಿ¨ªಾರೆ. ಸಿದ್ರಾಮಣ್ಣ ನಿವೇಶನ ಪಡೆದ ಮಾಹಿತಿ ಹಿನಕಲ್ ಸಾಕಮ್ಮನನ್ನು ಕೇಳಿದರೆ ಗೊತ್ತಾಗುತ್ತದೆ. ಹೀಗಾಗಿ ಸ್ಥಿರ, ಅಸ್ಥಿರ ಚಾಮಂಡಮ್ಮನ ಕೈಯಲ್ಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.