RSS;ಶತಮಾನ ಸಂಭ್ರಮಕ್ಕೆ ‘ಪಂಚಪರಿವರ್ತನ’: 3 ಹಂತದಲ್ಲಿ 5 ತತ್ತ್ವಗಳ ಪಾಲನೆ

ಮುಂದಿನ ಒಂದು ವರ್ಷ ಕಾಲ ಕೋಟ್ಯಂತರ ಕಾರ್ಯಕರ್ತರಿಂದ ಈ ಅಭಿಯಾನ ನಡೆಯಲಿದೆ

Team Udayavani, Oct 13, 2024, 7:10 AM IST

RSS

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರೆಸ್ಸೆಸ್‌) 100 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಸಮಾಜದಲ್ಲಿ ಗುಣಾತ್ಮಕ ಬದಲಾವಣೆಗಾಗಿ “ಪಂಚ ಪರಿವರ್ತನಾ’ ಎಂಬ ಕಾರ್ಯಕ್ರಮ ಜಾರಿಗೆ ಮುಂದಾಗಿದೆ.

ಮುಂದಿನ 1 ವರ್ಷ ಕಾಲ ಈ ಅಭಿಯಾನವನ್ನು ನಿತ್ಯ ಜೀವನದ ಭಾಗವಾಗಿ ಜೋಡಿಸುವುದಕ್ಕೆ ಸಂಘ ಚಿಂತಿಸಿದ್ದು, ಪಂಚ ಪರಿವರ್ತನೆಯನ್ನು “ಶತಾಬ್ದ ಘೋಷಣೆ’ ಎಂದು ಪರಿಗಣಿಸಿದೆ.ಸರಸಂಘ ಚಾಲಕ ಮೋಹನ್‌ ಭಾಗವತ್‌ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನಿರ್ದೇಶನದಂತೆ ಸಮಾಜದ ಗುಣಾತ್ಮಕ ಪರಿವರ್ತನೆ ದೃಷ್ಟಿಯಿಂದ ಈ ಕಲ್ಪನೆ ರೂಪಿಸಿದ್ದು, ವಿವಿಧ ಸ್ತರಗಳಲ್ಲಿರುವ ಕೋಟ್ಯಂತರ ಕಾರ್ಯಕರ್ತರು ಈ 5 ತಣ್ತೀಗಳನ್ನು 3 ಹಂತದಲ್ಲಿ ಪಾಲನೆ ಮಾಡುವುದರೊಂದಿಗೆ ಅಭಿಯಾನ ನಡೆಯಲಿದೆ.

ಇಡೀ ದೇಶಕ್ಕೆ ಅನ್ವಯವಾಗುವಂಥ ಬೃಹತ್‌ ಅಭಿಯಾನ, ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅನುಭವ ಇರುವ ಆರೆಸ್ಸೆಸ್‌ ಶತಮಾನದ ಸಂಭ್ರಮದಲ್ಲಿ ಇದ್ಯಾವುದಕ್ಕೂ ಆದ್ಯತೆ ನೀಡದೆ “ಪಂಚ ಪರಿವರ್ತನೆ’ಯನ್ನೇ ಪ್ರಧಾನವಾಗಿಟ್ಟುಕೊಳ್ಳಲು ನಿರ್ಧರಿಸಿದೆ.

ಸಂಘಟನೆಯೊಂದು 100 ವರ್ಷ ತಲುಪುವುದು ನಾಗರಿಕ ಸಮಾಜದಲ್ಲಿ ಒಂದು ಮೈಲುಗಲ್ಲು. ಆದರೆ ವಿಶ್ವದ ಅತಿದೊಡ್ಡ ಸಾಮಾಜಿಕ ಸಂಘಟನೆಯಾದ ಆರೆಸ್ಸೆಸ್‌ ಈ ಸಂದರ್ಭದಲ್ಲಿ ವಿನೂತನವಾಗಬೇಕು. “ಸಮಾಜದಲ್ಲಿ ಆರೆಸ್ಸೆಸ್‌ ಅಲ್ಲ, ಸಮಾಜವೇ ಆರೆಸ್ಸೆಸ್‌’ ಎಂಬ ಕಲ್ಪನೆಯೊಂದಿಗೆ ಪಂಚಪರಿವರ್ತನಾ ಅಭಿಯಾನ ನಡೆಸಬೇಕೆಂದು ದತ್ತಾತ್ರಯ ಹೊಸಬಾಳೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಯಾವುದು ಈ ಸೂತ್ರ?
“ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ’ ಈ 5 ತಣ್ತೀಗಳಾಗಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸಮಾಜದಲ್ಲಿ ಇನ್ನೂ ಜಾತೀಯತೆ ತೊಲಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮರಸ್ಯ’ ಎಂಬ ತತ್ವವನ್ನು ವ್ರತದಂತೆ ಪಾಲಿಸಬೇಕೆಂಬುದು ಸಂಘದ ನಿಲುವಾಗಿದೆ. ದೇವಸ್ಥಾನ, ಸ್ಮಶಾನ, ಜಲಮೂಲಗಳ ಬಳಕೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜಾತೀ ಯ ತೆ ಸಲ್ಲ. ಜಾತಿ ಮೀರಿದ ಬಾಂಧವ್ಯ ಸಮಾಜದಲ್ಲಿ ಬೆಳೆಯಬೇಕೆಂಬುದು ಈ ಪೈಕಿ ಮೊದಲನೆಯದಾಗಿದೆ.

ಎರಡನೆಯದಾಗಿ “ಕುಟುಂಬ ಪ್ರಬೋಧನಾ’. ಸಮಾಜದಲ್ಲಿ ಮೌಲ್ಯಗಳು ಶಿಥಿಲಗೊಳ್ಳುತ್ತಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 6 ಅಂಶಗಳ ಮೂಲಕ ಭಾರತೀಯ ಕುಟುಂಬ ಸಂಸ್ಕಾರದ ಮರು ಸ್ಥಾಪನೆ ಸಂಘದ ಉದ್ದೇಶವಾಗಿದೆ. ಭಾಷಾ (ಮಾತೃ ಭಾಷೆ ಪಾಲನೆ), ಭೂಷ (ಭಾರತೀಯ ವಸ್ತ್ರ ಪದ್ಧತಿ), ಭಜನ್‌ (ಆರಾಧನಾ ವಿಧಾನ), ಭೋಜನ (ಭಾರತೀಯ ಆಹಾರ ಪದ್ಧತಿ), ಭ್ರಮಣ್‌ ( ಕೌಟುಂಬಿಕ ಪ್ರವಾಸ) ಹಾಗೂ ಭವನ ( ಭಾರತೀಯ ಕುಟುಂಬ ಕಲ್ಪನೆ) ಇದರ ಭಾಗವಾಗಿದೆ.

ಪರಿಸರ ಸಂರಕ್ಷಣೆ 3ನೇ ಅಂಶವಾಗಿದ್ದು, ಸಸ್ಯ ಪಾಲನೆ, ಜಲ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್‌ ಹಠಾವೋ ಇದರಲ್ಲಿ ಸೇರುತ್ತದೆ. 4ನೇ ವಿಚಾರ ಸ್ವದೇಶಿ ಜೀವನ ಶೈಲಿಗೆ ಸಂಬಂಧಪಟ್ಟಿದ್ದು, ಇದರಲ್ಲಿ ಮಾತೃಭಾಷಾ ಶಿಕ್ಷಣವೂ ಸೇರಿದೆ. 5ನೇಯದು ಸಂಘದ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಸಂವಿಧಾನದಲ್ಲಿ ಉಲ್ಲೇಖಿತವಾದ ಮೂಲಭೂತ ಕರ್ತವ್ಯದ ಪಾಲನೆಯೂ ಸೇರಿದಂತೆ ಸಮಾಜದಲ್ಲಿ ನಾಗರಿಕ ಶಿಷ್ಟಾಚಾರ ಹಾಗೂ ನಾವೇ ಮಾಡಿದ ಕಾನೂನುಗಳ ಸ್ವಯಂ ಪಾಲನೆ ಸೇರಿದೆ.

100 ವರ್ಷದಲ್ಲಿ ಸಂಘ ತಲುಪದ ಕ್ಷೇತ್ರವೇ ಇಲ್ಲ. ಪಂಚ ಪರಿವರ್ತನೆ ಎಂಬ ಶತಾಬ್ದಿ ಘೋಷಣೆ ಸಮಾಜದ ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಾಗರಿಕ ಕರ್ತವ್ಯ ಪಾಲನೆ ಕ್ಷೀಣಿಸುತ್ತಿದೆ. ಜವಾಬ್ದಾರಿಯುತ ಸಮಾಜ ಎಲ್ಲರ ಬಯಕೆಯಾಗಿದ್ದು, ಸಂಘದ ಈ ಉದಾತ್ತ ಕಲ್ಪನೆಯ ಅನುಷ್ಠಾನದಲ್ಲಿ ನಾವೆಲ್ಲರೂ ಮೊದಲಿಗರಾಗೋಣ.
ವಿ. ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ರಾಘವೇಂದ್ರ ಭಟ್‌

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.