Udupi: ಉಭಯ ಜಿಲ್ಲೆಯಲ್ಲಿ ದಿಢೀರ್‌ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

ಕಟಾವು ಮಾಡಿದ ಭತ್ತ ಸಂಗ್ರಹಿಸಿಡುವುದು ಕಷ್ಟ, ಮನೆಯ ಅಂಗಳದಲ್ಲಿ ಒಣಗಿಸಲು ಆಗಲ್ಲ

Team Udayavani, Oct 13, 2024, 7:23 AM IST

Rain-Agri

ಉಡುಪಿ: ಉಭಯ ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಭತ್ತದ ಕಟಾವು ಪ್ರಕ್ರಿಯೆ ಆರಂಭ ವಾಗಲಿದೆ. ಇದೀಗ ಕೆಲವೆಡೆ ದಿಢೀರ್‌ ಸುರಿಯುತ್ತಿರುವ ಮಳೆಯು ಬೆಳೆಗೆ ನೇರ ಹೊಡೆತ ಕೊಡುವ‌ ಆತಂಕ ಆರಂಭವಾಗಿದೆ.

ಮುಂಗಾರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡದಲ್ಲಿ 9500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೀಗ ಭತ್ತದ ತೆನೆ ಬೆಳೆದು ಕಟಾವಿಗೆ ಸಿದ್ಧವಾಗುತ್ತಿದೆ. ದೀಪಾವಳಿಗೂ ಪೂರ್ವದಲ್ಲಿ ಹಲವೆಡೆ ಕಟಾವು ಆರಂಭವಾಗಲಿದೆ. ಉಭಯ ಜಿಲ್ಲೆಯ ಕೆಲವು ಕಡೆ ಎರಡು ಮೂರು ದಿನದಿಂದ ಏಕಾಏಕಿ ಮಳೆ ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಭಯ ತಂದಿದೆ.

ಕಟಾವು ಸಂದರ್ಭದಲ್ಲಿ ಮಳೆ ಬಂದರೆ ಒಟ್ಟಾರೆ ಉತ್ಪಾದನೆಯೇ ಕುಸಿತವಾಗಲಿದೆ. ರೈತರಿಗೆ ಸರಿಯಾದ ಬೆಲೆಯೂ ಸಿಗದು. ಸರಕಾರ ಖರೀದಿ ಕೇಂದ್ರ ತೆರೆಯುವುದು ತಡವಾಗುವ ಕಾರಣ ರೈತರು ನಷ್ಟ ಪಡುವಂತಾಗಲಿದೆ. ಈಗಾಗಲೇ ಉಡುಪಿ, ಹೆಬ್ರಿ, ಬ್ರಹ್ಮಾವರ, ಕಾರ್ಕಳ, ಕುಂದಾಪುರದ ಕೆಲವು ಭಾಗ, ಮಂಗಳೂರು ಸೇರಿದಂತೆ ಪುತ್ತೂರು, ಬೆಳ್ಳಾರೆ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ.

ಸಮಸ್ಯೆಯೇನು?
ಭತ್ತದ ಗಿಡಗಳು ತೆನೆ ಬಿಡುವ ಸಮಯದಲ್ಲಿ ಮಳೆ ಹೆಚ್ಚಾದರೆ ಇಳುವರಿ ಮೇಲೆ ನೇರ ಪರಿಣಾಮ ಬೀರಿ ಬೆಳವಣಿಗೆ ಕಡಿಮೆಯಾಗಿ ಜಳ್ಳು ಹೆಚ್ಚಾಗುತ್ತದೆ. ತೆನೆ ಬಿಟ್ಟ ಅನಂತರ ಗಾಳಿ ಮಳೆ ಬಂದರೆ ಗಿಡಗಳು ಬೀಳುವ ಸಾಧ್ಯತೆ ಇರುತ್ತದೆ. ಹೀಗಾದರೆ ಕಟಾವು ಕಷ್ಟ. ಗದ್ದೆಯಲ್ಲಿ ನೀರು ತುಂಬಿಕೊಂಡಿದ್ದು, ಭತ್ತ ಮೊಳಕೆ ಬರುವ ಸಾಧ್ಯತೆಯೂ ಹೆಚ್ಚಿದೆ. ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿಡುವುದು ಕಷ್ಟ. ಮನೆಯ ಅಂಗಳದಲ್ಲಿ ಒಣಗಿಸಲು ಆಗುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುವ ಸಂಭವವಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ ಎಂದು ಸಾರ್ವಜನಿಕರ ಆಗ್ರಹ.

ಯಂತ್ರಗಳ ಕೊರತೆ
ಭತ್ತದ ಕಟಾವಿಗೆ ಎಲ್ಲರೂ ಯಂತ್ರಗಳನ್ನೆ ಅವಲಂಬಿಸಿದ್ದರೂ ಸಾಕಷ್ಟು ಯಂತ್ರಗಳಿಲ್ಲ. ಉಡುಪಿಯಲ್ಲಿ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, 8 ಯಂತ್ರಗಳೇ ನಿರ್ವಹಿಸ ಬೇಕಿದೆ. ಕಟಾವು ಆರಂಭವಾದ ಅನಂತರ ಎರಡು ಅಥವಾ ಮೂರು ಯಂತ್ರ ಸೇರ್ಪಡೆಯಾಗಬಹುದು. 9500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 11 ಯಂತ್ರವಿದೆ. ಇನ್ನೂ ಮೂರು ಅಥವಾ ನಾಲ್ಕು ಸೇರ್ಪಡೆಯಾಗಲಿದೆ. ಪ್ರತಿ ತಾಲೂಕಿಗೂ ಕನಿಷ್ಠ 4-5 ಯಂತ್ರಗಳ ಅಗತ್ಯವಿದೆ. ಯಂತ್ರಗಳ ಕೊರತೆಯಾದಂತೆೆ ಖಾಸಗಿ ಯಂತ್ರದ ದರವೂ ಏರಿಕೆಯಾಗಲಿದೆ. ಗಂಟೆ ಲೆಕ್ಕಾಚಾರದಲ್ಲಿ ದರ ವಿಧಿಸಲಾಗುತ್ತದೆ.

ಕೃಷಿ ವಿಜ್ಞಾನಿಗಳು ಭೇಟಿ
ಜಿಲ್ಲೆಯ ವಿವಿಧ ಗದ್ದೆಗಳಲ್ಲಿ ಬೆಳೆದಿರುವ ಎಂಒ4 ತಳಿಯ ಇಳುವರಿ ಹೇಗಿದೆ ಮತ್ತು ಇದಕ್ಕೆ ಪರ್ಯಾಯವಾಗಿ ಯಾವ ತಳಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಪರಿಶೀಲಿಸಲು ಶಿವಮೊಗ್ಗದಲ್ಲಿರುವ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ಕೃಷಿ ಸಂಶೋಧನ ವಿಜ್ಞಾನಿಗಳು ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಟಾವು ಯಂತ್ರಗಳು ಸದ್ಯ ತಾಲೂಕುಗಳಲ್ಲಿ ಒಂದರಂತೆ ಲಭ್ಯವಿದೆ. ಕೆಲವೆಡೆ ಹೆಚ್ಚಿದೆ. ಇನ್ನಷ್ಟು ಯಂತ್ರಗಳು ಬರಲಿವೆ. ಕಟಾವು ಆರಂಭವಾಗುವುದರೊಳಗೆ ರೈತರಿಗೆ ಯಂತ್ರದ ಲಭ್ಯತೆ ಇರಲಿದೆ.
ಡಾ| ಸೀತಾ ಎಂ.ಸಿ., ಹೊನ್ನಪ್ಪಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ, ದ.ಕ.,

– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

salman-khan

Mumbai: ಬಿಗ್‌ ಬಾಸ್‌ ಶೂಟಿಂಗ್‌ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್

INDvsBAN: India’s young speedster Mayank Yadav joins the special record club

INDvsBAN: ವಿಶೇಷ ದಾಖಲೆ ಕ್ಲಬ್‌ ಸೇರಿದ ಭಾರತದ ಯುವ ವೇಗಿ ಮಯಾಂಕ್‌ ಯಾದವ್

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fake-docu

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

Malpe

Navarathri Holiday: ಸರಣಿ ರಜೆ: ಮಲ್ಪೆ ಬೀಚ್‌, ಸೈಂಟ್‌ಮೇರೀಸ್‌ನಲ್ಲಿ ಜನಸಾಗರ

Udupi: ಅನುಮಾನ ಬಾರದಂತೆ 5 ವರ್ಷದಿಂದ ವಾಸ; ಗಾರೆ ಕಾರ್ಮಿಕರಾಗಿದ್ದ ಬಾಂಗ್ಲಾ ಅಕ್ರಮ ವಲಸಿಗರು

Udupi: ಅನುಮಾನ ಬಾರದಂತೆ 5 ವರ್ಷದಿಂದ ವಾಸ; ಗಾರೆ ಕಾರ್ಮಿಕರಾಗಿದ್ದ ಬಾಂಗ್ಲಾ ಅಕ್ರಮ ವಲಸಿಗರು

Kolluru

Kolluru: ನವರಾತ್ರಿ ರಥೋತ್ಸವ, ನವಾನ್ನಪ್ರಾಶನ, ವಿಜಯೋತ್ಸವ

Kapu-Uccila

Udupi: ಉಚ್ಚಿಲ: ಮಹಾಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

3-kottigehara

Kottigehara: ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

1-kampli-1

Kampli- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.