Darshan; ವಿಜಯಲಕ್ಷ್ಮೀ ಪೋಸ್ಟ್ ವೈರಲ್: ದರ್ಶನ್ ಬಿಡುಗಡೆಯ ಸೂಚನೆ?
Team Udayavani, Oct 13, 2024, 11:11 AM IST
ಸ್ಟಾರ್ ನಟರ ಹಳೇ ಸಿನಿಮಾಗಳ ಬಿಡುಗಡೆಯ ಪರ್ವ ಮತ್ತೆ ಮುಂದುವರೆದಿದೆ. ಈ ಬಾರಿ ನಟ ದರ್ಶನ್ ಅವರ ಸರಣಿ. ಅವರು ಅಭಿನಯಿಸಿರುವ “ನವಗ್ರಹ’ ಚಲನಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಶೀಘ್ರ ಬಿಡುಗಡೆಗೊಳ್ಳಲಿದೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೂ, ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಂಧನದಲ್ಲಿರುವ ದರ್ಶನ್ ಅವರ ಬಿಡುಗಡೆಗೂ ಸಂಬಂಧವಿರಬಹುದು ಎಂದು ಮಾತು ಕೇಳಿಬರುತ್ತಿವೆ.
“ನಿಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದ ಚಿತ್ರ ನವಗ್ರಹ ಅತೀ ಶೀಘ್ರದಲ್ಲಿ ರೀ ರಿಲೀಸ್ ಆಗಲಿದೆ. ಇದು ಮೊದಲಿಗಿಂತ ಜಾಸ್ತಿ ಸ್ಪೆಷಲ್ ಆಗಿರಲಿದೆ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ’ ಎಂದು ವಿಜಯಲಕ್ಷ್ಮೀ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಬಂಧನದಿಂದ ಸ್ಥಗಿತಗೊಂಡಿದ್ದ “ಡೆವಿಲ್’ ಚಿತ್ರ ತಂಡವೂ ದಸರಾ ಹಬ್ಬದ ಶುಭಾಶಯ ಪೋಸ್ಟರ್ ಹಂಚಿಕೊಂಡಿದೆ. ಸದ್ಯ ಜೈಲಿನಿಂದ ದರ್ಶನ್ ಅವರಿಗೆ ಜಾಮೀನು ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದೇ ಸಮಯಕ್ಕೆ ದಸರಾ ಕುರಿತಂತೆ ಇರುವ “ನವಗ್ರಹ’ ಸಿನಿಮಾ ರೀ ರಿಲೀಸ್ ಆಗುತ್ತಿರುವುದು ಹಲವು ಕುತೂಹಲ ಸೃಷ್ಟಿಸಿದೆ. ವಿಜಲಯಕ್ಷ್ಮೀ ಅವರ ಈ ಪೋಸ್ಟ್ ದರ್ಶನ್ ಬಿಡುಗಡೆಯ ಸೂಚನೆ ಎಂಬಂತೆ ಜಾಲತಾಣಗಳಲ್ಲಿ ಬಿಂಬಿತವಾಗಿದೆ.
ದಿನಕರ್ ತುಗೂದೀಪ್ ನಿರ್ದೇಶನದ “ನವಗ್ರಹ’ ಚಿತ್ರ 2008ರಲ್ಲಿ ತೆರೆ ಕಂಡು, ಮೆಚ್ಚುಗೆ ಗಳಿಸಿತ್ತು. ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ನವಗ್ರಹ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇದರ ವಿಶೇಷತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.