Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

ತಲಸ್ಸೇಮಿಯಾಕ್ಕೆ ಹ್ಯಾಪ್ಲೊ ಐಡೆಂಟಿಕಲ್‌ ಅಥವಾ ಅರೆ ಹೊಂದಾಣಿಕೆಯ ಅಸ್ಥಿಮಜ್ಜೆ ಕಸಿ

Team Udayavani, Oct 13, 2024, 3:30 PM IST

7-health

ಪರಿಚಯ

ತಲಸ್ಸೇಮಿಯಾ ಎಂಬುದು ವಂಶಪಾರಂಪರ್ಯವಾಗಿ ಬರುವ ಒಂದು ರಕ್ತಸಂಬಂಧಿ ಅನಾರೋಗ್ಯ. ಹಿಮೊಗ್ಲೋಬಿನ್‌ ಉತ್ಪಾದನೆ ಕಡಿಮೆಯಾಗಿ ತೀವ್ರ ತರಹದ ರಕ್ತಹೀನತೆ ಮತ್ತು ಇದರಿಂದಾಗಿ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಿಸುವುದು ಇದರ ಗುಣಲಕ್ಷಣವಾಗಿದೆ. ಅದರಲ್ಲೂ, ಬೀಟಾ (β) ತಲಸ್ಸೇಮಿಯಾ ಮೇಜರ್‌ ಇದರಲ್ಲಿ ತೀವ್ರ ತರಹದ್ದಾಗಿದ್ದು, ನಿಯಮಿತ ರಕ್ತಮರುಪೂರಣಗಳು ಮತ್ತು ಅಪಾಯಕಾರಿಯಾದ ಕಬ್ಬಿಣದಂಶ ಸಂಗ್ರಹಣೆಯನ್ನು ನಿವಾರಿಸಲು ಐಯರ್ನ್ ಚೆಲೇಶನ್‌ ಚಿಕಿತ್ಸೆಯಂತಹ ಜೀವನಪರ್ಯಂತ ನಿರ್ವಹಣೆಯ ಕ್ರಮಗಳು ಇದಕ್ಕೆ ಅಗತ್ಯವಾಗಿರುತ್ತವೆ.

ಅಸ್ಥಿಮಜ್ಜೆ ಕಸಿ (ಬೋನ್‌ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್‌ – ಬಿಎಂಟಿ)ಯು ತಲಸ್ಸೇಮಿಯಾ ರೋಗಿಗಳಿಗೆ ಒಂದು ಸಂಭಾವ್ಯ ಗುಣಕಾರಿ ಚಿಕಿತ್ಸಾ ವಿಧಾನವಾಗಿ ಬೆಳೆದುಬರುತ್ತಿದೆ. ಇದರ ಮೂಲಕ ಹಾನಿಯುಕ್ತ ರಕ್ತ ಉತ್ಪಾದಕ ಆಕರ ಕೋಶಗಳ ಬದಲಾಗಿ ರೋಗದ ಮೂಲ ಕಾರಣವನ್ನು ಸರಿಪಡಿಸಬಲ್ಲ ಆರೋಗ್ಯಯುತ ಹೆಮಟೊಪೊಯೆಟಿಕ್‌ ಆಕರ ಜೀವಕೋಶ (ಸ್ಟೆಮ್‌ಸೆಲ್‌) ಗಳನ್ನು ಕಸಿ ಮಾಡಿ ಆರೋಗ್ಯಯುತ ಕೆಂಪು ರಕ್ತಕಣಗಳ ಉತ್ಪಾದನೆಗೆ ದಾರಿ ಮಾಡಿಕೊಡಲಾಗುತ್ತದೆ.

ತಲಸ್ಸೇಮಿಯಾ ರೋಗವನ್ನು ಹೊಂದಿರುವ ವ್ಯಕ್ತಿಗಳಿಗೆ ಮೊತ್ತಮೊದಲ ಬಾರಿಗೆ ಅಲೊಜೆನಿಕ್‌ ಹೆಮಟೊಪೊಯೆಟಿಕ್‌ ಆಕರ ಜೀವಕೋಶ ಕಸಿಯನ್ನು ಯಶಸ್ವಿಯಾಗಿ ನಡೆಸಿ ಮೂರು ದಶಕಕ್ಕೂ ಅಧಿಕ ಸಮಯ ಕಳೆದುಹೋಗಿದೆ. 80 ಮತ್ತು 90ರ ದಶಕದ ಆರಂಭಿಕ ಅನುಭವಗಳ ಬಳಿಕ ತಲಸ್ಸೇಮಿಯಾ ಮೇಜರ್‌ ಕಾಯಿಲೆಗೆ ಲಭ್ಯವಿರುವ ಗುಣಕಾರಿ ಚಿಕಿತ್ಸೆಯ ಆಯ್ಕೆ ಅಲೊಜೆನಿಕ್‌ ಕಸಿಯೊಂದೇ ಆಗಿದೆ.

ತಲಸ್ಸೇಮಿಯಾಕ್ಕೆ ಲಭ್ಯವಿರುವ ಅಸ್ಥಿಮಜ್ಜೆ ಕಸಿ ವಿಧಗಳು

 ಹೊಂದಾಣಿಕೆಯಾಗುವ ಸಂಬಂಧಿಯ/ ಸಂಬಂಧಿಯಲ್ಲದ ದಾನಿಯಿಂದ ಕಸಿ ತಲಸ್ಸೇಮಿಯಾಕ್ಕೆ ಲಭ್ಯವಿರುವ ಅತೀ ಸಾಮಾನ್ಯ ಅಸ್ಥಿಮಜ್ಜೆ ಕಸಿ ವಿಧಾನ ಇದು. ಇದರಲ್ಲಿ ಆಕರ ಕೋಶ ದಾನಿ ಎಚ್‌ಎಲ್‌ಎ ಪೂರ್ಣವಾಗಿ ಹೊಂದಾಣಿಕೆಯಾಗುವ ಸಹೋದರ  -ಸಹೋದರಿಯರು ಅಥವಾ ಸಂಬಂಧಿಯಲ್ಲದ ದಾನಿ ಆಗಿರುತ್ತಾರೆ. ಆದರೆ ಎಚ್‌ಎಲ್‌ಎ ಹೊಂದಾಣಿಕೆಯಾಗುವ ಸಂಬಂಧಿ ದಾನಿ ಅಥವಾ ಹೊಂದಾಣಿಕೆಯಾ ಗುವ ಸಂಬಂಧಿಯಲ್ಲದ ದಾನಿಯನ್ನು ಹೊಂದಿರುವ ರೋಗಿಗಳ ಪ್ರಮಾಣ ಶೇ. 30ಕ್ಕಿಂತಲೂ ಕಡಿಮೆ ಇರುತ್ತದೆ.

 ಹಾಪ್ಲೊ ಐಡೆಂಟಿಕಲ್‌ ಕಸಿ ಪೂರ್ಣವಾಗಿ ಸರಿಹೊಂದುವ ದಾನಿ ಅಲಭ್ಯವಾಗಿದ್ದಾಗ, ಹಾಪ್ಲೊ ಐಡೆಂಟಿಕಲ್‌ ಕಸಿಗಳು ಅಂದರೆ, ಭಾಗಶಃ ಹೊಂದಾಣಿಕೆಯಾಗುವ ಕುಟುಂಬ ಸದಸ್ಯರ ಆಕರ ಕೋಶಗಳನ್ನು ಉಪಯೋಗಿಸಿ ಮಾಡುವ ಕಸಿ ಒಂದು ವಿಶ್ವಾಸಾರ್ಹ ಪರ್ಯಾಯವಾಗಿರುತ್ತದೆ. ದಾನಿಗಳ ಆಯ್ಕೆ ಮತ್ತು ಕಸಿ ತಂತ್ರಜ್ಞಾನಗಳಲ್ಲಿ ಆಗಿರುವ ಅತ್ಯಾಧುನಿಕ ಪ್ರಗತಿಗಳಿಂದಾಗಿ ಈ ಕಾರ್ಯವಿಧಾನವು ಮುಂಚೂಣಿಗೆ ಬರುತ್ತಿದ್ದು, ಹೆಚ್ಚು ಸಂಖ್ಯೆಯ ರೋಗಿಗಳಿಗೆ ಲಭ್ಯವಾಗುತ್ತಿದೆ.

ತಲಸ್ಸೇಮಿಯಾಕ್ಕೆ ಹಾಪ್ಲೊ ಐಡೆಂಟಿಕಲ್‌ ಅಸ್ಥಿಮಜ್ಜೆ ಕಸಿ

1 ಹಾಗೆಂದರೇನು?

ಹಾಪ್ಲೊ ಐಡೆಂಟಿಕಲ್‌ ಕಸಿಯಲ್ಲಿ ಭಾಗಶಃ ಹೊಂದಾಣಿಕೆಯಾಗುವ ದಾನಿಯಿಂದ, ಹೆಚ್ಚಿನ ಬಾರಿ ಹೆತ್ತವರು ಅಥವಾ ಅಣ್ಣತಮ್ಮ/ ಅಕ್ಕತಂಗಿಯಂತಹ ಹತ್ತಿರದ ಸಂಬಂಧಿಯಿಂದ ಪಡೆದ ಆಕರ ಕೋಶಗಳನ್ನು ಕಸಿಗೆ ಉಪಯೋಗಿಸಲಾಗುತ್ತದೆ. ಈ ವಿಧವಾದ ಕಸಿಯಲ್ಲಿ ಅನಾರೋಗ್ಯಯುತವಾದ ರಕ್ತ ಉತ್ಪಾದಕ ಕೋಶಗಳಿಗೆ ಬದಲಾಗಿ ಆರೋಗ್ಯಯುತ ಕೋಶಗಳನ್ನು ಸ್ಥಾಪಿಸಲಾಗುತ್ತದೆ.

2 ದಾನಿಯ ಅರ್ಹತೆ

ಹೆತ್ತವರು ಅಥವಾ ಸಹೋದರ-ಸಹೋದರಿಯರ ಎಚ್‌ಎಲ್‌ಎ ಮಾರ್ಕರ್‌ಗಳು ಶೇ. 50ರಷ್ಟು ಹೊಂದಾಣಿಕೆ ಆಗುವುದರಿಂದ ಅವರೇ ಸಾಮಾನ್ಯವಾಗಿ ಅರ್ಹ ದಾನಿಗಳಾಗಿರುತ್ತಾರೆ.

3 ಹಾಪ್ಲೊ ಐಡೆಂಟಿಕಲ್‌ ಕಸಿಯ ವಿಧಗಳು

 ಟಿ ಸೆಲ್‌ ರಿಪ್ಲೀಟ್‌: ದಾನಿಯ ಜೀವಕೋಶಗಳನ್ನು ಮರುಪೂರಣಗೊಳಿಸಿದ ಬಳಿಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಹೆಚ್ಚುವರಿ ಕಿಮೊಥೆರಪಿಯನ್ನು ಉಪಯೋಗಿಸಿ ಮಾಡುವ ಕಸಿ.

 ಟಿ ಸೆಲ್‌ ಡಿಪ್ಲೇಶನ್‌: ಕಸಿಗೆ ಮುನ್ನ ಅನಪೇಕ್ಷಿತ ಟಿ ಸೆಲ್‌ಗ‌ಳನ್ನು ನಿವಾರಿಸಿ, ಕಸಿಯ ವಿರುದ್ಧ ಅತಿಥೇಯ ದೇಹ ಕಾರ್ಯಾಚರಿಸುವ ಗ್ರಾಫ್ಟ್ ವರ್ಸಸ್‌ ಹೋಸ್ಟ್‌ ಡಿಸೀಸ್‌ (ಜಿವಿಎಚ್‌ಡಿ) ಕಾಯಿಲೆ ತಲೆದೋರುವ ಅಪಾಯವನ್ನು ಕಡಿಮೆ

4 ಅನುಕೂಲಗಳು ಎಲ್ಲ ತಲಸ್ಸೇಮಿಯಾ ರೋಗಿಗಳ ಕುಟುಂಬದಲ್ಲಿ ಅರೆ ಹೊಂದಾಣಿಕೆ ಆಗುವ ದಾನಿಗಳು ಎಂದಿಗೂ ಲಭ್ಯರಿರುತ್ತಾರೆ.

5 ಅನನುಕೂಲಗಳು ಕಸಿಯನ್ನು ದೇಹವು ತಿರಸ್ಕರಿಸುವ ಅಥವಾ ಕಸಿಯ ವಿರುದ್ಧ ಅತಿಥೇಯ ದೇಹ ಕಾರ್ಯಾಚರಿಸುವ ಗ್ರಾಫ್ಟ್ ವರ್ಸಸ್‌ ಹೋಸ್ಟ್‌ ಡಿಸೀಸ್‌ (ಜಿವಿಎಚ್‌ಡಿ) ಕಾಯಿಲೆಯಂತಹ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಜತೆಗೆ ಪೂರ್ಣ ವಾಗಿ ಹೊಂದಾಣಿಕೆಯಾಗುವ ಕಸಿಗಿಂತ ಇಲ್ಲಿ ಹೆಚ್ಚು ಸಂಕೀರ್ಣವಾದ ಕಸಿ ಕಾರ್ಯವಿಧಾನವನ್ನು ಅನುಸರಿಸ ಬೇಕಾಗುತ್ತದೆಯಲ್ಲದೆ ಇದಕ್ಕೆ ಹೆಚ್ಚು ಕೌಶಲಯುಕ್ತ ಮತ್ತು ಪರಿಣತ ವೈದ್ಯರು-ವೈದ್ಯಕೀಯ ಸಿಬಂದಿಯ ಅಗತ್ಯವಿರುತ್ತದೆ.

6 ಅಪಾಯ ತಗ್ಗಿಸುವ ವಿಧಾನ ಟಿ ಸೆಲ್‌ ಡಿಪ್ಲೇಶನ್‌ ಮತ್ತು ಕಸಿಪೂರ್ವ ಚಿಕಿತ್ಸೆ (ಪ್ರಿಟ್ರಾನ್ಸ್‌ಪ್ಲಾಂಟ್‌ ಇಮ್ಯುನೊ ಸಪ್ರಸಿವ್‌ ಥೆರಪಿ)ಯಂತಹ ವಿಧಾನಗಳು ಸುರಕ್ಷೆ ಮತ್ತು ಯಶಸ್ಸಿನ ಪ್ರಮಾಣವನ್ನು ಸಾಕಷ್ಟು ಹೆಚ್ಚಿಸಿದ್ದು, ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡಿವೆ.

7 ಯಶಸ್ಸಿನ ಪ್ರಮಾಣ ಹಾಪ್ಲೊ ಐಡೆಂಟಿಕಲ್‌ ಬಿಎಂಟಿಗಳು ಶೇ. 80-90 ಯಶಸ್ಸಿನ ಪ್ರಮಾಣವನ್ನು ದಾಖಲಿಸಿದ್ದು, ಈ ಮೂಲಕ ತಲಸ್ಸೇಮಿಯಾ ರೋಗಿಗಳಿಗೆ ಒಂದು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆಯಾಗಿ ಬೆಳೆದಿವೆ.

8 ಭಾರತದಲ್ಲಿ ಅಸ್ಥಿಮಜ್ಜೆ ಕಸಿಯ ವೆಚ್ಚ ಹಾಪ್ಲೊ ಐಡೆಂಟಿಕಲ್‌ ಅಸ್ಥಿಮಜ್ಜೆ ಕಸಿಗೆ ಟಿ ಸೆಲ್‌ ರಿಪ್ಲೀಟ್‌ ಅಥವಾ ಟಿ ಸೆಲ್‌ ಡಿಪ್ಲೇಟೆಡ್‌ ಕಸಿಯೇ ಎಂಬುದನ್ನು ಆಧರಿಸಿ ಭಾರತದಲ್ಲಿ ಸರಿಸುಮಾರು 20ರಿಂದ 40 ಲಕ್ಷ ರೂಪಾಯಿಗಳು ತಗಲುತ್ತವೆ.

9 ಕರ್ನಾಟಕದಲ್ಲಿ ಈ ಕಸಿ ಚಿಕಿತ್ಸೆಯ ಲಭ್ಯತೆ ಹಾಪ್ಲೊ ಐಡೆಂಟಿಕಲ್‌ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗಳು ಭಾರತದಾತ್ಯಂತ ವಿವಿಧ ವಿಶೇಷಜ್ಞ ಆಸ್ಪತ್ರೆಗಳಲ್ಲಿ ಲಭ್ಯವಿವೆ. ಗಮನಾರ್ಹ ಕೇಂದ್ರಗಳೆಂದರೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳು ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ (ಕೆಎಂಸಿ).

10 ಹಣಕಾಸು ನೆರವು ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ, ಅದರಲ್ಲೂ ವಿಶೇಷವಾಗಿ ತಲಸ್ಸೇಮಿಯಾ ಮಕ್ಕಳಿಗೆ ಹಣಕಾಸು ನೆರವು ನೀಡಲು ಹಲವಾರು ಎನ್‌ಜಿಒಗಳು, ಸಿಎಸ್‌ಆರ್‌ ಉಪಕ್ರಮಗಳು ಮತ್ತು ಕ್ರೌಡ್‌ಫ‌ಂಡಿಂಗ್‌ ವೇದಿಕೆಗಳು ಲಭ್ಯವಿವೆ. ಈ ಮೂಲಕ ಈ ಚಿಕಿತ್ಸೆಯು ಅವರ ಕೈಗೆಟಕುವಂತೆ ಮಾಡಲಾಗುತ್ತದೆ.

ತಲಸ್ಸೇಮಿಯಾ ಕಾಯಿಲೆಯನ್ನು ಹೊಂದಿರುವ ಮಕ್ಕಳಿಗೆ ಅಸ್ಥಿಮಜ್ಜೆ ಕಸಿಯು ಒಂದು ಆಶಾಕಿರಣದಂತಿದ್ದು, ಸಂಪೂರ್ಣ ಗುಣಮುಖರಾಗಿ ಸಹಜ ಜೀವನಕ್ಕೆ ಮರಳಲು ದಾರಿದೀಪವಾಗಿದೆ. ಅಸ್ಥಿಮಜ್ಜೆ ಕಸಿಯ ಕಾರ್ಯವಿಧಾನಗಳಲ್ಲಿನ ಇತ್ತೀಚೆಗಿನ ಅತ್ಯಾಧುನಿಕ ಪ್ರಗತಿಗಳು ಹಾಗೂ ದಾನಿ ಆಯ್ಕೆಯಲ್ಲಿ ಆಗಿರುವ ಬೆಳವಣಿಗೆಗಳು ಅಸ್ಥಿಮಜ್ಜೆ ಕಸಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದು, ಈ ಹಿಂದೆ ಸೀಮಿತ ಆಯ್ಕೆಗಳನ್ನು ಹೊಂದಿದ್ದ ರೋಗಿಗಳಿಗೆ ವಿಶ್ವಾಸಾರ್ಹ ಪರ್ಯಾಯ ಚಿಕಿತ್ಸಾ ಕ್ರಮವಾಗಿ ಬೆಳೆದುಬಂದಿದೆ.

ಹೀಗಾಗಿ ಸಂಪೂರ್ಣ ಹೊಂದಾಣಿಕೆಯಾಗುವ ರಕ್ತಸಂಬಂಧಿ ದಾನಿ ಲಭ್ಯವಿಲ್ಲದಿದ್ದರೂ ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಡೆಸುವುದು ಸಾಧ್ಯವಾಗಿದೆ. ತಲಸ್ಸೇಮಿಯಾದಿಂದ ಬಾಧಿತವಾಗಿರುವ ರೋಗಿಗಳು ಮತ್ತು ಅವರ ಕುಟುಂಬದವರಿಗೆ ಅಸ್ಥಿಮಜ್ಜೆ ಕಸಿಯ ಸಾಧ್ಯಾಸಾಧ್ಯತೆಗಳ ಸಹಿತ ಲಭ್ಯ ಚಿಕಿತ್ಸೆಯ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ವೈದ್ಯರ ಜತೆಗೆ ವಿವರವಾದ ಸಮಾಲೋಚನೆ ಅತ್ಯಗತ್ಯವಾಗಿರುತ್ತದೆ.

ಡಾ| ಸ್ವಾತಿ ಪಿ. ಎಂ.

ಅಸಿಸ್ಟೆಂಟ್‌ ಪ್ರೊಫೆಸರ್‌

ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ ಕೆಎಂಸಿ,

ಮಣಿಪಾಲ

-ಡಾ| ವಾಸುದೇವ ಭಟ್‌

ಪ್ರೊಫೆಸರ್‌ ಮತ್ತು ಯೂನಿಟ್‌ ಹೆಡ್‌,

ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ, ಕೆಎಂಸಿ,

ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.