BBK11: ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಶಾಕ್‌ ನೀಡಿದ ಪೊಲೀಸರು; ಆಗಿದ್ದೇನು?

Team Udayavani, Oct 13, 2024, 2:31 PM IST

BBK11: ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ  ಶಾಕ್‌ ನೀಡಿದ ಪೊಲೀಸರು; ಆಗಿದ್ದೇನು?

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeep) ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ -11 (Bigg Boss Kannada-11) ಕಾರ್ಯಕ್ರಮ ಆರಂಭವಾಗಿ ಎರಡು ವಾರದಲ್ಲೇ ಪೊಲೀಸರು ಆಯೋಜಕರಿಗೆ ಶಾಕ್‌ ನೀಡಿದ್ದಾರೆ.

ಈ ಬಾರಿಯ ಬಿಗ್‌ ಬಾಸ್‌ ಕಾರ್ಯಕ್ರಮ ಸ್ವರ್ಗ- ನರಕದ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗಿತ್ತು. ಆರಂಭದಿಂದಲೇ ಕೆಲ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಹಾಗೂ ನರಕಕ್ಕೆ ಕಳುಹಿಸಲಾಗಿತ್ತು. ನರಕದ ಮನೆಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಗಂಜಿ ಊಟವನ್ನು ಮಾತ್ರ ನೀಡಲಾಗುತ್ತಿತ್ತು. ಕುಡಿಯುವ ನೀರನ್ನು ಮಡಿಕೆಯಲ್ಲಿ ಇಡಲಾಗಿತ್ತು. ಇದಲ್ಲದೆ ವಾಶ್‌ ರೂಮ್‌ ಹೋಗುವುದಕ್ಕೂ ಸ್ವರ್ಗ ನಿವಾಸಿಗಳ ಬಳಿ ಅನುಮತಿ ಕೇಳಬೇಕಿತ್ತು.

ಇದನ್ನೂ ಓದಿ: BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

ಈ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು,  ಮಾನವಕ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್​ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ದೂರು ನೀಡಿದ್ದರು.

ಪೌಷ್ಟಿಕ ಆಹಾರ, ಶೌಚಾಲಯ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ ಎಂದು ನಾಗಲಕ್ಷ್ಮಿ ಆರೋಪ ಮಾಡಿದ್ದರು.

ಕೆಲ ಸ್ಪರ್ಧಿಗಳು ಪರಸ್ಪರ ಜಗಳವಾಡುವ ಭರದಲ್ಲಿ ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಕಾರಣದಿಂದ ಮಹಿಳಾ ಆಯೋಗದ ಅಧ್ಯಕ್ಷೆ ಪೊಲೀಸರಿಗೂ ಪತ್ರ ಬರೆದಿದ್ದರು.

ಪೊಲೀಸರಿಂದ ನೋಟಿಸ್:

ಇದೀಗ ಮಹಿಳಾ ಆಯೋಗ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಠಾಣೆ ಪೊಲೀಸರು ಬಿಗ್‌ ಬಾಸ್‌ ಆಯೋಜಕರಿಗೆ ನೊಟೀಸ್‌ ನೀಡಿದ್ದಾರೆ.

ʼಬಿಗ್‌ಬಾಸ್’ ಸೆಟ್‌ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

ಸ್ವರ್ಗ – ನರಕದ ಮನೆ ಧ್ವಂಸ..: ಇನ್ನು ಇದೇ ವಾರದಲ್ಲಿ ಬಿಗ್‌ಬಾಸ್‌ನಲ್ಲಿ ಈ ಬಾರಿ ಇದ್ದ ಸ್ವರ್ಗ – ನರಕದ ಮನೆ ಧ್ವಂಸ ಮಾಡಲಾಗಿದೆ. ನಿಜವಾದ ಸ್ವರ್ಗ ನರಕ ನೀವು ಬದುಕುವ ರೀತಿಯಲ್ಲಿದೆ. ನಿಮ್ಮ ದೃಷ್ಟಿಕೋನದಲ್ಲಿ. ಈ‌ ಮನೆ  ಒಂದಾಗುವ ಸಮಯ ಬಂದಿದೆ. ಒಂದಾದ ಮನೆ ಸ್ವರ್ಗವಾಗಿ ಇರುತ್ತಾ, ನರಕವಾಗಿ ಉಳಿಯುತ್ತದೆ ಎನ್ನುವುದು ನಿಮ್ಮ ಕೈಯಲ್ಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ ‌.

ಟಾಪ್ ನ್ಯೂಸ್

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

siddanna-2

B.Y.Vijayendra; ಏನು ಪುರೋಹಿತನಾ? ಜ್ಯೋತಿಷಿನಾ?…: ಸಿದ್ದರಾಮಯ್ಯ ಕಿಡಿ

rape

Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

2-bbk-5

BBK11: ಎರಡೇ ವಾರದಲ್ಲಿ ಬಿಗ್ ಬಾಸ್ ನರಕದ ಮನೆ ಧ್ವಂಸ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ..  ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ.. ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.