Ajjarakadu: ಗಾಂಧಿ ಭವನ ನಿರ್ಮಾಣ ವಿಳಂಬ

2022ರಲ್ಲಿ ಶಿಲಾನ್ಯಾಸ ನಡೆದಿದ್ದರೂ ಅಡಿಪಾಯದ ಅನಂತರ ಮೇಲೇಳದ ಭವನ

Team Udayavani, Oct 13, 2024, 3:29 PM IST

2

ಉಡುಪಿ: ಜಿಲ್ಲೆಯಲ್ಲಿ ಎರಡು ವರ್ಷ ಕಳೆದರೂ ಗಾಂಧಿ ಭವನ ನಿರ್ಮಾಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.
2022ರಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದರೂ ಅಡಿಪಾಯದ ಅನಂತರ ಭವನ ಮೇಲೇಳಲೇ ಇಲ್ಲ. ಕಾಮಗಾರಿಯೂ ಸದ್ಯ ಸ್ಥಗಿತಗೊಂಡಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯುವಜನರಿಗೆ ಗಾಂಧಿ ವಿಚಾರಧಾರೆ, ಗಾಂಧಿ ಸ್ವತಂತ್ರ್ಯ ಹೋರಾಟ, ಜೀವನ ಶೈಲಿಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಸರಕಾರವು ಸಾರ್ವಜನಿಕ ಜನ ಸಂಪರ್ಕ ಮತ್ತು ವಾರ್ತಾ ಇಲಾಖೆ ಮೂಲಕ ಗಾಂಧಿ ಭವನ ನಿರ್ಮಾಣ ಯೋಜನೆ ಜಾರಿಗೊಳಿಸಿತ್ತು. 3 ಕೋ. ರೂ. ವೆಚ್ಚದಲ್ಲಿ ಈಗಾಗಲೆ ಕೆಲವು ಜಿಲ್ಲೆಗಳಲ್ಲಿ ಭವನ ನಿರ್ಮಾಣಗೊಂಡು ಉದ್ಘಾಟನೆಯೂ ನಡೆದಿದೆ. ಉಡುಪಿಯಲ್ಲಿ ಮಾತ್ರ ಭವನ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ.

ಈ ಗಾಂಧಿ ಭವನ ನಿರ್ಮಾಣಕ್ಕೆ 2022ರಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ವರ್ಷದೊಳಗೆ ವ್ಯವಸ್ಥಿತ ಭವನ ನಿರ್ಮಾಣಗೊಂಡು ಗಾಂಧಿ ವಿಚಾರಗಳನ್ನು ಯುವಜನರು ಅರ್ಥೈಸಲು ಇದೊಂದು ಸೂಕ್ತ ತಾಣವಾಗಲಿದೆ. ಸಂಪೂರ್ಣ ಪರಿಸರ ಸ್ನೇಹಿಯಾಗಿ ಈ ಕಟ್ಟಡವನ್ನು ರೂಪಿಸಲಾಗುತ್ತದೆ ಎಂದಿದ್ದರು. ಅನಂತರ ಸರಕಾರ ಬದಲಾಯಿತು. ಭವನ ನಿರ್ಮಾಣವಾಗಲೇ ಇಲ್ಲ.

ಅನುದಾನ ಬಿಡುಗಡೆ ವಿಳಂಬವೇ?
ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮತ್ತು ನಿರ್ವಹಣೆ ನಡೆಯಲಿದ್ದು, ಸರಕಾರ ಅನುದಾನ ಬಿಡುಗಡೆ ವಿಳಂಬ ಮಾಡುತ್ತಿರುವುದರಿಂದ ಕಟ್ಟಡ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಮಳೆ, ಚುನಾವಣೆ ನೀತಿ ಸಂಹಿತೆಯು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಶೀಘ್ರ ಕಾಮಗಾರಿ ಆರಂಭ
ಜಿಲ್ಲೆಗೊಂದು ಗಾಂಧಿ ಭವನ ನಿರ್ಮಾಣ ಯೋಜನೆಯಂತೆ ಅಜ್ಜರಕಾಡು ಪಾರ್ಕ್‌ ಬಳಿ ಗಾಂಧಿ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೆ ಅಡಿಪಾಯ ಕಾರ್ಯ ಪೂರ್ಣಗೊಂಡಿದೆ.ಸರಕಾರ ಅನುದಾನ ಬಿಡುಗಡೆಗೆ ವಿಳಂಬ ಮಾಡಿಲ್ಲ. ಶೀಘ್ರದಲ್ಲಿ ಭವನದ ಮುಂದುವರಿದ ಕಾಮಗಾರಿ ನಡೆಯಲಿದೆ. ಗಾಂಧಿ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸುವ ಆಶಯವನ್ನು ಈ ಯೋಜನೆ ಹೊಂದಿದೆ.
-ಮಂಜುನಾಥ್‌, ಸಹಾಯಕ ನಿರ್ದೇಶಕ, ವಾರ್ತಾ ಇಲಾಖೆ

ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಣೆ
3 ಕೋ. ರೂ. ವೆಚ್ಚದ ಈ ಭವನ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿಯಲ್ಲೆ ನಿರ್ಮಾಣಗೊಳ್ಳಲಿದೆ. ಕರಾವಳಿ ಸಂಸ್ಕೃತಿ ಬಿಂಬಿಸುವ ಮಾದರಿಯಲ್ಲಿ ಪರಿಸರ ಸ್ನೇಹಿಯಾಗಿ ಮ್ಯೂಸಿಯಂ, ಆರ್ಟ್‌ ಗ್ಯಾಲರಿ, ಮಹಾತ್ಮ ಗಾಂಧೀಜಿ ಅವರ ಪ್ರತಿಮೆ, ಸಣ್ಣ ಸಭಾಗೃಹ ಇಲ್ಲಿ ನಿರ್ಮಾಣವಾಗಲಿದೆ. ನಿರ್ಮಿತಿ ಕೇಂದ್ರದ ವತಿಯಿಂದ ಈ ಕಟ್ಟಡದ ಕಾಮಗಾರಿ ನಡೆಯಲಿದೆ.

ಟಾಪ್ ನ್ಯೂಸ್

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

siddanna-2

B.Y.Vijayendra; ಏನು ಪುರೋಹಿತನಾ? ಜ್ಯೋತಿಷಿನಾ?…: ಸಿದ್ದರಾಮಯ್ಯ ಕಿಡಿ

rape

Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

4

Brahmavara: ಎಂಟನೇ ತರಗತಿ ವಿದ್ಯಾರ್ಥಿ ಮದರಸ ಹಾಸ್ಟೆಲ್‌ ನಲ್ಲಿ ನೇಣು ಬಿಗಿದು ಆತ್ಮಹ*ತ್ಯೆ

4-udupi

Malpe: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪಾಪನಾಶಿನಿ ನದಿಯಲ್ಲಿ ಪತ್ತೆ

Malpe

Navarathri Holiday: ಸರಣಿ ರಜೆ: ಮಲ್ಪೆ ಬೀಚ್‌, ಸೈಂಟ್‌ಮೇರೀಸ್‌ನಲ್ಲಿ ಜನಸಾಗರ

puttige-2

Udupi; ಗೀತಾರ್ಥ ಚಿಂತನೆ 62 : ಆಯುಕ್ತ ಶಬ್ದದ ಉಗಮ ಗೀತೆಯಲ್ಲಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.