Womens T20 World Cup; ಭಾರತಕ್ಕೆ ಸೋಲು: ಆಸ್ಟ್ರೇಲಿಯ ಸೆಮಿಫೈನಲಿಗೆ
ನಾಳೆ ಒಂದು ವೇಳೆ ಪಾಕಿಸ್ಥಾನ ಗೆದ್ದರೆ..?
Team Udayavani, Oct 13, 2024, 11:44 PM IST
ಶಾರ್ಜಾ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಪ್ರಯತ್ನದ ಹೊರತಾಗಿಯೂ ಭಾರತೀಯ ವನಿತೆಯರು ರವಿವಾರ ನಡೆದ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ “ಎ’ ಬಣದ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 9 ರನ್ನುಗಳಿಂದ ಸೋಲನ್ನು ಕಂಡಿದೆ. ಇದರಿಂದ ಸೆಮಿಫೈನಲಿಗೇರುವ ಆಸೆ ಕಠಿನವಾಗಿದೆ.
ಪಾಕಿಸ್ಥಾನ ಗೆದ್ದರೆ?
ಈ ಗೆಲುವಿನಿಂದ ಆಸ್ಟ್ರೇಲಿಯ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಜೇಯ ತಂಡವಾಗಿ ಸೆಮಿಫೈನಲಿಗೇರಿದೆ. ಈ ಸೋಲಿನಿಂಧ ಭಾರತ ತಾನಾಡಿದ ನಾಲ್ಕು ಪಂದ್ಯಗಳಿಂದ ನಾಲ್ಕಂಕ ಸಂಪಾದಿಸಿದೆ. ಲೀಗ್‌ನ ಅಂತಿಮ ಪಂದ್ಯದಲ್ಲಿ ಸೋಮವಾರ ನ್ಯೂಜಿಲ್ಯಾಂಡ್ ತಂಡವು ಪಾಕಿಸ್ಥಾನವನ್ನು ಎದುರಿಸಲಿದೆ. ನ್ಯೂಜಿಲ್ಯಾಂಡ್ ಸದ್ಯ ನಾಲ್ಕಂಕ ಹೊಂದಿದ್ದು ಪಾಕಿಸ್ಥಾನ ವಿರುದ್ಧ ಗೆದ್ದರೆ ಅದು ಸೆಮಿಫೈನಲಿಗೇರಲಿದೆ. ಒಂದು ವೇಳೆ ಪಾಕಿಸ್ಥಾನ ಗೆದ್ದರೆ ಎಲ್ಲ ಮೂರು ತಂಡಗಳು ತಲಾ ನಾಲ್ಕಂಕ ಪಡೆಯಲಿವೆ. ಆಗ ಉತ್ತಮ ರನ್‌ಧಾರಣೆ ಇರುವ ತಂಡ ಸೆಮಿಫೈನಲಿಗೇರಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ವನಿತಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿತು. ಇದಕ್ಕುತ್ತರವಾಗಿ ಆರಂಭದಲ್ಲಿ ಭಾರತೀಯ ವನಿತೆಯರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಅಂತಿಮ ಹಂತದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 9 ವಿಕೆಟಿಗೆ 142 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು. ಏಕಾಂಗಿಯಾಗಿ ಹೋರಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 54 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರನ್ನು ಹೊರತುಪಡಿಸಿ ಶಫಾಲಿ ಶರ್ಮ, ನಾಯಕಿ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮ, ಜೆಮಿಮಾ ರಾಡ್ರಿಗಸ್ ಉತ್ತಮವಾಗಿ ಆಡಿದರು. ಸ್ಮತಿ 6 ರನ್ನಿಗೆ ಔಟಾಗಿ ನಿರಾಶೆ ಅನುಭವಿಸಿದರು. ನಾಯಕಿ ಹರ್ಮನ್‌ಪ್ರೀತ್ ಮತ್ತು ದೀಪ್ತಿ ಶರ್ಮ ಬಿರುಸಿನ ಆಟವಾಡಿದರೂ ಕೊನೆ ಹಂತದಲ್ಲಿ ಬ್ಯಾಟಿಂಗ್ ಕುಸಿತ ಕಂಡ ಕಾರಣ ಸೋಲು ಕಾಣಬೇಕಾಯಿತು.
ಈ ಮೊದಲು ಗ್ರೇಸ್ ಹ್ಯಾರಿಸ್ ಮತ್ತು ಕೊನೆ ಹಂತದಲ್ಲಿ ಎಲಿಸ್ ಪೆರ್ರಿ ಅವರ ಬಿರುಸಿನ ಆಟದಿಂದಾಗಿ ಆಸ್ಟ್ರೇಲಿಯದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು. ತಂಡದ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 40 ಹೊಡೆದರೆ ಟಹ್ಲಿಯಾ ಮೆಕ್‌ಗ್ರಾಥ್ 32, ಎಲಿಸ್ ಪೆರ್ರಿ 32 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ 8 ವಿಕೆಟಿಗೆ 151 (ಗ್ರೇಸ್ ಹ್ಯಾರಿಸ್ 40, ಟಹ್ಲಿಯಾ 32, ಎಲಿಸ್ ಪೆರ್ರಿ 32, ರೇಣುಕಾ ಸಿಂಗ್ 24ಕ್ಕೆ 2, ದೀಪ್ತಿ ಶರ್ಮ 28ಕ್ಕೆ 2); ಭಾರತ 9 ವಿಕೆಟಿಗೆ 142 (ಶಫಾಲಿ ಶರ್ಮ 20, ರಾಡ್ರಿಗಸ್ 16, ಹರ್ಮನ್‌ಪ್ರೀತ್ 54 ಔಟಾಗದೆ, ದೀಪ್ತಿ ಶರ್ಮ 29, ಅನ್ನಾಬೆಲ್ ಸೂಥರ್‌ಲ್ಯಾಂಡ್ 22ಕ್ಕೆ 2, ಸೋಫಿ ಮೊಲಿನೆಕ್ಸ್ 32ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.