Udupi: ಬಾಂಗ್ಲಾದಿಂದ ಭಾರತಕ್ಕೆ ವಲಸೆಯ ಉದ್ದೇಶ?

Team Udayavani, Oct 14, 2024, 7:20 AM IST

\172.17.1.5ImageDirUdayavaniDaily13-10-24Daily_NewsBangla.tif

ಉಡುಪಿ: ಮಲ್ಪೆಯಲ್ಲಿ ಸುಮಾರು 5 ವರ್ಷಗಳಿಂದಲೂ ವಾಸ ಮಾಡಿಕೊಂಡಿದ್ದ ಬಾಂಗ್ಲಾದೇಶದ ವಲಸಿಗರನ್ನು ಬಂಧಿಸಲ್ಪಟ್ಟಿದ್ದು, ಮತ್ತಷ್ಟು ಮಂದಿ ಇರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭಾರತಕ್ಕೆ ಬರುವ ಅವರ ಉದ್ದೇಶದ ಕಥೆಯೂ ಅಷ್ಟೇ ಭಯಾನಕವಾಗಿದೆ.

ಸಣ್ಣ ವಯೋಮಾನದಲ್ಲಿ ಊರು ಬಿಡುವ ಕೆಲವು ಮಂದಿಯ ತಂಡಕ್ಕೆ ಏಜೆಂಟರೇ ಆಸರೆ. ನಕಲಿ ಪಾರ್ಸ್‌ ಪೋರ್ಟ್‌, ಆಧಾರ್‌ ಕಾರ್ಡ್‌ ಹೀಗೆ ಎಲ್ಲ ದಾಖಲೆಗಳನ್ನು ನೀಡಿ ಅವರಿಂದ ನಿರ್ದಿಷ್ಟ ಮೊತ್ತ ಪಡೆದು ಭಾರತಕ್ಕೆ ಕರೆಸಲಾಗುತ್ತದೆ. ಸೂಕ್ತ ವಿದ್ಯಾ ಭ್ಯಾಸವೂ ಅವರಿಗೆ ಇರದು. ಹಿಂದಿ ಭಾಷೆಯೊಂದೇ ಅವರಿಗೆ ಆಸರೆ.

ಭಾರತಕ್ಕೆ ಆಗಮಿಸಿ ವಿಂಗಡನೆ
ಮುಖ್ಯವಾಗಿ ಗಡಿಭಾಗದಿಂದ, ಜಲಮಾರ್ಗದ ಮೂಲಕ ಸುಲಭದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸುವ ಇವರು, ಬಳಿಕ ವಿವಿಧ ರಾಜ್ಯಗಳಿಗೆ ತೆರಳಿ ಸಣ್ಣಪುಟ್ಟ ನೌಕರಿ ಹುಡುಕಿಕೊಳ್ಳುತ್ತಾರೆ. ಒಂದೆರಡು ವರ್ಷ ಕೆಲಸ ಮಾಡಿ ಸ್ಥಳೀಯರ ವಿಶ್ವಾಸ ಗಿಟ್ಟಿಸಿಕೊಳ್ಳುವ ಅವರು, ಹಂತಹಂತವಾಗಿ ಹೆಚ್ಚಿನ ವೇತನದೊಂದಿಗೆ ಇತರ ಉದ್ಯೋಗ ವನ್ನೂ ಕಲಿಯ ತೊಡಗುತ್ತಾರೆ. ಬಳಿಕ ಭಾರತೀಯ ಪ್ರಜೆಗಳಂತೆಯೇ ಬಿಂಬಿಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ನಕಲಿ ವೋಟರ್‌ ಐಡಿಗಳನ್ನು ತಮ್ಮ ಏಜೆಂಟರಿಂದ ಮಾಡಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತದೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಅವರಿಗೆ ವೇತನಕ್ಕಿಂತಲೂ ಇಲ್ಲಿ ಭದ್ರ ನೆಲೆಯೂರಲು ಅವಕಾಶ ಬೇಕಷ್ಟೇ. ಅನಂತರ ಅವರ ಗುರಿ ಪ್ರತಿಷ್ಠಿತ ರಾಷ್ಟ್ರಗಳು. ಈ ಮಧ್ಯೆ ಅಲ್ಲಿಗೆ ತೆರಳಲು ಬೇಕಾದ ಎಲ್ಲ ದಾಖಲೆಗಳನ್ನು ತಾವಿರುವ ವಿಳಾಸದಡಿ ಸೃಷ್ಟಿಸಿಕೊಳ್ಳುವ ಪ್ರಕ್ರಿಯೆಯೂ ಚಾಲ್ತಿಯಲ್ಲಿರುತ್ತದೆ.

ಸಕ್ರಿಯ ನಕಲಿ ತಯಾರಿ ಜಾಲ
ನಕಲಿ ಪಾಸ್‌ಪೋರ್ಟ್‌, ಅಂಕಪಟ್ಟಿ, ಆಧಾರ್‌ಕಾರ್ಡ್‌ ಹೀಗೆ ವಿವಿಧ ರೀತಿಯ ದಾಖಲೆಗಳನ್ನು ತಯಾರಿಸಿ ಕೊಡುವ ಜಾಲವೂ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಸಂಶಯವನ್ನು ಈ ಪ್ರಕ ರಣ ಬಿತ್ತಿದೆ. ಮಂಗಳೂರಿನಲ್ಲಿ ಸಿಕ್ಕ ಓರ್ವ ಆರೋಪಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರ ವಿಚಾರಣೆಯಿಂದ ಮಾಹಿತಿ ಸಿಗಬೇಕಿದೆ.

ಜಿಲ್ಲೆಯಲ್ಲಿ ಇದುವರೆಗೆ ಇಂತಹ ಪ್ರಕರಣಗಳು ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಈ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಸಾಮತ್ಯೆ ಇದೆಯೇ ಎಂಬ ನಿಟ್ಟಿನಲ್ಲೂ ತನಿಖೆ ಮುಂದು ವರಿಯುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದುಬಾೖಗೆ ಹೋಗಲು ಯತ್ನ
ದುಬಾೖಯಲ್ಲಿ ಭಾರತೀಯರು ಎಂದರೆ ಸ್ವಲ್ಪ ಗೌರವ ಹೆಚ್ಚು. ಬಾಂಗ್ಲಾ ದೇಶದವರು ಎಂದರೆ ಅಷ್ಟಕಷ್ಟೇ. ಹೀಗೆ ಅಲ್ಲಿ ಹೆಚ್ಚಿನ ವೇತನಕ್ಕೆಂದು ತೆರಳು ತ್ತಾರೆ. ಒಂದು ವೇಳೆ ಅಲ್ಲಿ ಸಿಕ್ಕಿಹಾಕಿಕೊಂಡಲ್ಲಿ ಕಳಂಕ ಮಾತ್ರ ಭಾರತಕ್ಕೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಮೂಲ ಸ್ಥಳೀಯ ಪ್ರಾಂತ್ಯದ್ದಾಗಿರುತ್ತದೆ. ಆದರೆ ಅಲ್ಲಿನ ಸ್ಥಳೀಯರಿಗೆ ಆತ ಯಾರೆಂಬುದೇ ತಿಳಿದಿರದು. ಜಿಲ್ಲೆಯಲ್ಲೂ ಈ ಹಿಂದೆ ಇಂತಹ ಕೆಲವು ಪ್ರಕರಣಗಳು ನಡೆದಿವೆ. ಇದಕ್ಕೆ ನಕಲಿ ದಾಖಲೆಗಳು ಕಾರಣ. ಬಂಧಿತರೂ ಇದೇ ಉದ್ದೇಶದಿಂದ ದುಬಾೖಗೆ ತೆರಳಲು ಉದ್ದೇಶಿಸಿದ್ದರು ಎಂಬ ಅಂಶ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇಂದು ಪೊಲೀಸ್‌ ಕಸ್ಟಡಿಗೆ
ಆರೋಪಿಗಳನ್ನು ಈಗಾಗಲೇ ನ್ಯಾಯಾಂಗಬಂಧನಕ್ಕೆ ಒಳಪಡಿಸಿದ್ದು, ಸೋಮವಾರ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳುವರು. ಆರೋಪಿ ಗಳು ಆಧಾರ್‌ಕಾರ್ಡ್‌ಗಳನ್ನು ಫೋರ್ಜರಿ ಮಾಡಿದ್ದಾರೆಯೇ ಅಥವಾ ನಕಲಿ ಕಾರ್ಡ್‌ ಸೃಷ್ಟಿ ಆಗಿದೆಯೇ ಎಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.
-ಡಾ| ಕೆ.ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಟಾಪ್ ನ್ಯೂಸ್

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

Geetha-yajna-KanchiShree

Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ

MGM–Udupi-1

Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.