Central Government: ವೃದ್ಧಾಪ್ಯದ ಕಾಯಿಲೆಗಳು ಆಯುಷ್ಮಾನ್‌ಗೆ ಸೇರ್ಪಡೆ?

 ಮರೆಗುಳಿತನ, ಹೃದಯ ಸಂಬಂಧಿ ರೋಗ ವಿಮೆ ವ್ಯಾಪ್ತಿಗೆ ಸಾಧ್ಯತೆ; ಮಾಸಾಂತ್ಯದಲ್ಲೇ ಅನುಷ್ಠಾನ?

Team Udayavani, Oct 14, 2024, 7:20 AM IST

Central Government: ವೃದ್ಧಾಪ್ಯದ ಕಾಯಿಲೆಗಳು ಆಯುಷ್ಮಾನ್‌ಗೆ ಸೇರ್ಪಡೆ?

ಹೊಸದಿಲ್ಲಿ: ದೇಶಾದ್ಯಂತ 70 ವರ್ಷ ದಾಟಿದ ಎಲ್ಲರನ್ನೂ ಆಯುಷ್ಮಾನ್‌ ವಿಮೆ ಯೋಜನೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಹಿರಿಯ ನಾಗರಿಕರಿಗೆ ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಪ್ಯಾಕೇಜ್‌ಗಳನ್ನು ಯೋಜನೆಗೆ ಸೇರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ವೃದ್ಧರಲ್ಲಿ ಹೆಚ್ಚಾಗಿರುವ ಮರೆಗುಳಿತನ, ಬುದ್ಧಿಮಾಂದ್ಯ, ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿವೆ ಎನ್ನಲಾಗಿದೆ.

ಇಂಥ ಸೇವೆಗಳು ಸೇರ್ಪಡೆಯಾದರೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಎಲ್ಲ ಹಿರಿಯರನ್ನೂ ಯೋಜನೆ ವ್ಯಾಪ್ತಿಗೆ ತರುವುದರಿಂದ 4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ನಾಗರಿಕರಿಗೆ ಪ್ರಯೋಜನವಾಗಲಿದೆ. ಈ ಮಾಸಾಂತ್ಯದಲ್ಲೇ ಅಧಿಕೃತವಾಗಿ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಅದರಂತೆ ಮಾಸಾಂತ್ಯಕ್ಕೆ ವಿಸ್ತೃತ ಸೇವೆಗಳು ಸಿಗುವ ಸಾಧ್ಯತೆಗಳು ಇವೆ.

ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)ಯ ಅನುಷ್ಠಾನ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಈ ಕುರಿತು ಪರಿಶೀಲನೆ ನಡೆಸುತ್ತಿದೆ.

ಎಬಿ-ಪಿಎಂಜೆಎವೈ ವ್ಯಾಪ್ತಿಯಲ್ಲಿ 27 ವಿವಿಧ ವೈದ್ಯಕೀಯ ವಿಭಾಗಗಳಿಗೆ ಸೇರಿದ 1,949 ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ. ಸೆ. 1ರ ವರೆಗೆ ದೇಶದಲ್ಲಿರುವ ಖಾಸಗಿ ವಲಯದ 12,696 ಸಹಿತ 29,648 ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭಗಳನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಧಾರ್‌ ಕಾರ್ಡ್‌ನಲ್ಲಿ 70 ವರ್ಷ ಮೀರಿದ ಹಿರಿಯ ನಾಗರಿಕರು ಯೋಜನೆಯ ಲಾಭ ಪಡೆಯಲು ಅರ್ಹರು. ಪಿಎಂಜೆಎವೈ ಆ್ಯಪ್‌ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಆಯುಷ್ಮಾನ್‌ ಭಾರತ ಕಾರ್ಡ್‌ ಇದ್ದವರು ಮತ್ತೂಂದು ಕಾರ್ಡ್‌ ಬೇಕಿದ್ದರೆ ಹೊಸದಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು. ಜತೆಗೆ ಕೈವೈಸಿ ಪ್ರಕ್ರಿಯೆ ನಡೆಸಬೇಕು. 70 ವರ್ಷ ದಾಟಿದವರು ಮತ್ತು ಅವರ ಕುಟುಂಬದವರು ಈಗಾಗಲೇ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, 5 ಲಕ್ಷ ರೂ. ವರೆಗೆ ಹೆಚ್ಚುವರಿ ಆರೋಗ್ಯ ವಿಮೆ ಸಿಗಲಿದೆ.

ಉಪಯೋಗವೇನು?
-ಮರೆಗುಳಿತನ, ಕ್ಯಾನ್ಸರ್‌, ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಅನುಕೂಲ
-4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ವಿಮಾ ಸೌಲಭ್ಯ
– ಈಗಾಗಲೇ ನೋಂದಣಿ ಆದವರಿಗೆ ಹೆಚ್ಚುವರಿ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ

ಟಾಪ್ ನ್ಯೂಸ್

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

5

Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ

Women’s T20 World Cup: Despite losing against Aussies, India still have a chance in the semis

Women’s T20 World Cup: ಆಸೀಸ್‌ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ

Hunasuru: ಜ್ವರಕ್ಕೆ ಮದ್ದು ತರಲು ಹೋಗುತಿದ್ದವರಿಗೆ ಬೈಕ್ ಡಿಕ್ಕಿ… ಬಾಲಕಿ ಮೃತ್ಯು

Hunasuru: ಜ್ವರಕ್ಕೆ ಮದ್ದು ತರಲು ಹೋಗುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ, ಬಾಲಕಿ ಮೃತ್ಯು

Punjalkatte: ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಮಹಿಳೆ ಸಾವು

Punjalkatte: ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಮಹಿಳೆ ಸಾವು

4

Belthangady: ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

Sampaje: ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿಯಾದ ಕಾರು

Sampaje: ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿಯಾದ ಕಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

1-kkkk

Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್‌ರಾಜ್‌ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್‌?

1-himm

Muslims; ಹಿಮಾಚಲ ಸೇಬು ಬಹಿಷ್ಕರಿಸಿ: ಒವೈಸಿ ಪಕ್ಷದ ನಾಯಕನ ವಿವಾದ

arrest-lady

Love; ಒಟ್ಟಿಗಿರಲು ಭಿಕ್ಷುಕನನ್ನು ಸುಟ್ಟು ಪ್ರೇಮಿಗಳ ನಾಟಕ!!: 27 ವರ್ಷದ ಯುವತಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

kannada movie Murphy

Murphy: ʼಮರ್ಫಿʼಗೆ ಸಾಥ್‌ ನೀಡಿದ ನಟಿಮಣಿಯರು

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

5

Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ

Women’s T20 World Cup: Despite losing against Aussies, India still have a chance in the semis

Women’s T20 World Cup: ಆಸೀಸ್‌ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ

Hunasuru: ಜ್ವರಕ್ಕೆ ಮದ್ದು ತರಲು ಹೋಗುತಿದ್ದವರಿಗೆ ಬೈಕ್ ಡಿಕ್ಕಿ… ಬಾಲಕಿ ಮೃತ್ಯು

Hunasuru: ಜ್ವರಕ್ಕೆ ಮದ್ದು ತರಲು ಹೋಗುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ, ಬಾಲಕಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.