Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು
Team Udayavani, Oct 14, 2024, 2:06 AM IST
ಮಾಧವಪಾಂಡವರು ಶಂಖನಾದ ಮಾಡಿದರು ಎಂಬಲ್ಲಿ ಮಾಧವ ಶಬ್ದ ಮಧುವಂಶವನ್ನೂ ಸೂಚಿಸುತ್ತದೆ. ಮಧುವಂಶವೆಂದರೆ ಯದುವಂಶ.
ಕಾರ್ತ್ಯವೀರ್ಯಾರ್ಜುನನ ಮಗ ಮಧು. ಮಾಧವ ಅಂದರೆ ಕೃಷ್ಣ ಈ ವಂಶದಿಂದ ಬಂದವ. ಅರ್ಜುನ ಪಾಂಡುವಂಶದ ಕೀರ್ತಿಯನ್ನು ಬೆಳಗಿಸಿದವ. ಮಾಧವ ಮಧು ವಂಶದ ಕೀರ್ತಿಯನ್ನು ಬೆಳಗಿಸಿದವ. ಪಾಂಡವರ ಕಡೆಯಲ್ಲಿ ವಂಶ/ಕುಲವನ್ನು ಬೆಳಗಿಸುವ ಗುರಿ ಇದೆಯೆ ವಿನಾ ಸ್ವಂತದ (ಸ್ವಾರ್ಥ) ಉದ್ದೇಶವಿಲ್ಲ. ಕುಲದ ಕೀರ್ತಿಗಾಗಿ ಹೋರಾಡುವವರಿಗೆ ಬಹಳ ಮಹತ್ವವಿದೆ. ಕೌರವರ ಕಡೆಯಲ್ಲಿ ಕುಲದ ಕೀರ್ತಿಯನ್ನು ಎತ್ತಿಹಿಡಿಯುವ ಆಸಕ್ತಿ ಕಾಣದೆ ಸ್ವಂತ ಹಿತಾಸಕ್ತಿ ಎದ್ದು ಕಾಣುತ್ತದೆ. ದುರ್ಯೋಧನ “ಮಮಸೈನ್ಯಾಶ್ಚ’ ಎಂದು ಹೇಳಿದ್ದನಲ್ಲವೆ? ಇವರಿಗೆ ಸ್ವಂತ ಪ್ರತಾಪವೇ ಮುಖ್ಯ. ಪಾಂಡವರ ಶಂಖವನ್ನು ದಿವ್ಯ ಶಂಖವೆಂದು ಬಣ್ಣಿಸಲಾಗಿದೆ. ಈ ಶಂಖಕ್ಕೆ ಸುದೀರ್ಘ ಇತಿಹಾಸವಿದೆ.
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ (ಗೀತೆ 1-15). “ದೇವದತ್ತ’ವೆಂಬ ಶಂಖವು ದೇವತೆಗಳಿಂದ ಅರ್ಜುನನಿಗೆ ಬಂದದ್ದು. ದೇವತೆಗಳು ಜಯವಾಗಲಿ ಎಂದು ಹರಸಿ ಕೊಟ್ಟ ಶಂಖವಿದು. ಇಂತಹ ಇತಿಹಾಸ ಕೌರವರ ಕಡೆಯವರ ಶಂಖಕ್ಕೆ ಇಲ್ಲ. ಯಾರಿಗೆ ಯಾವ ದೇವತೆಗಳ ವರಗಳಿವೆ ಎಂಬ ಮಾನದಂಡದಲ್ಲಿ ಅವರ ಶೂರತ್ವ, ಧೀರತ್ವವನ್ನು ಅಳೆಯುತ್ತಿದ್ದರೆ ವಿನಾ ಎಷ್ಟು ಅಸ್ತ್ರ, ಶಸ್ತ್ರಗಳಿವೆ ಎಂಬ ಮಾನದಂಡದಲ್ಲಿ ಅಲ್ಲ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು
ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ
Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.