Bangladesh Unrest: ಹಿಂದೂ ಸಮುದಾಯದ ರಕ್ಷಣೆ: ಬಾಂಗ್ಲಾ ಸರಕಾರ ಬದ್ಧತೆ ತೋರಲಿ
Team Udayavani, Oct 14, 2024, 6:00 AM IST
ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿ ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಡೆಯುತ್ತಿರುವ ದಾಳಿಗಳು ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ದಂಗೆ ನಡೆಸುವ ಮೂಲಕ ಬಾಂಗ್ಲಾದಲ್ಲಿ ಅಧಿಕಾರದಲ್ಲಿದ್ದ ಶೇಖ್ ಹಸೀನಾ ನೇತೃತ್ವದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ ಅಲ್ಲಿನ ಹಿಂದೂಗಳು ಅತಂತ್ರರಾಗಿದ್ದಾರೆ.
ಸದ್ಯ ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರಕಾರ ಹಿಂದೂಗಳಿಗೆ ರಕ್ಷಣೆ ನೀಡುವ ಅಭಯ ನೀಡುತ್ತ ಬಂದಿದ್ದರೂ ಹಿಂದೂಗಳ ದೇಗುಲಗಳು, ಆರಾಧನ ಸ್ಥಳಗಳ ಮೇಲಿನ ದಾಳಿಗಳು ಮುಂದುವರಿಯುತ್ತಲೇ ಇದೆ. ನವರಾತ್ರಿ ಸಂಭ್ರ ಮಾ ಚರಣೆ ಸಂದರ್ಭದಲ್ಲೂ ದುರ್ಗಾಮಾತೆಯ ಪೆಂಡಾಲ್‌ಗಳ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆಯಲ್ಲದೆ ಹಲವೆಡೆ ದಾಳಿಗಳನ್ನು ನಡೆಸಿ, ದೇವಾಲಯಗಳಲ್ಲಿನ ಚಿನ್ನಾಭರಣಗಳನ್ನು ಲೂಟಿ ಮಾಡಲಾಗಿದೆ. ಈ ಎಲ್ಲ ಘಟನಾವಳಿಗಳು ಬಾಂಗ್ಲಾದಲ್ಲಿನ ಹಿಂದೂಗಳನ್ನು ಅಭದ್ರತೆಯ ಕೂಪಕ್ಕೆ ತಳ್ಳಿವೆ.
ಬಾಂಗ್ಲಾದಲ್ಲಿನ ಪ್ರಜಾಸತ್ತಾತ್ಮಕ ಸರಕಾರವನ್ನು ದಾಂಧಲೆ ನಡೆಸಿ ಕಿತ್ತೂಗೆ ಯುವಲ್ಲಿ ಯಶಸ್ವಿಯಾದ ಅಲ್ಲಿನ ಕೆಲವು ಸಂಘಟನೆಗಳು ಈಗ ದೇಶದಲ್ಲಿನ ಹಿಂದೂಗಳನ್ನು ಗುರಿಯಾಗಿಸಿ ಅವರ ಮೇಲೆ ಅವ್ಯಾಹತವಾಗಿ ದಾಳಿಗಳನ್ನು ನಡೆಸುತ್ತಿವೆ. ದೇಶದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ್ದ ಮಧ್ಯಾಂತರ ಸರಕಾರ ಈ ಕಿಡಿಗೇಡಿಗಳ ದುಷ್ಕೃತ್ಯಗಳಿಗೆ ಮೂಕಪ್ರೇಕ್ಷಕವಾಗಿದೆ.
ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿ ಯಾದಾಗಿನಿಂದಲೂ ಇದರ ಹಿಂದೆ ಭಾರೀ ಷಡ್ಯಂತ್ರ ಅಡಗಿರುವ ಮಾತು ಗಳು ಕೇಳಿ ಬರುತ್ತಲೇ ಇವೆಯಾದರೂ ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ವಾಗಲೀ, ವಿಶ್ವಸಂಸೆ§ಯಾಗಲೀ ತಲೆಕೆಡಿಸಿಕೊಂಡಿಲ್ಲ. ಇದು ಬಾಂಗ್ಲಾದ ಆಂತರಿಕ ವಿಚಾರ ಎಂದು ಇವೆಲ್ಲವೂ ಮೌನಕ್ಕೆ ಶರಣಾಗಿವೆ. ಇದೇ ವೇಳೆ ಬಾಂಗ್ಲಾದಲ್ಲಿನ ಈ ಬೆಳವಣಿಗೆಗಳ ಹಿಂದೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಕೈವಾಡವೂ ಇದೆ ಎಂಬ ಆರೋ ಪವೂ ಇದ್ದು, ಭಾರತವನ್ನು ಗುರಿಯಾಗಿಸಿಯೇ ಬಾಂಗ್ಲಾದಲ್ಲಿ ಅರಾ ಜಕತೆಯ ವಾತಾವರಣವನ್ನು ಸೃಷ್ಟಿಸಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. ಬಾಂಗ್ಲಾದಲ್ಲಿನ ಪ್ರಸಕ್ತ ಬೆಳವಣಿಗೆಗಳನ್ನು ಗಮನಿಸಿದಾಗ ಈ ಎಲ್ಲ ಅನುಮಾನಗಳಲ್ಲಿ ಹುರುಳಿದ್ದಂತೆ ತೋರುತ್ತಿದೆ.
ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಗಳು, ದೌರ್ಜನ್ಯಗಳ ಬಗೆಗೆ ಅಲ್ಲಿನ ಮಧ್ಯಂತರ ಸರಕಾರದ ಗಮನವನ್ನು ಭಾರತ ಸೆಳೆಯುತ್ತಲೇ ಬಂದಿದ್ದು, ಹಿಂದೂಗಳಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಒತ್ತಡ ಹೇರುತ್ತಲೇ ಬಂದಿದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತ್ರವಲ್ಲದೆ ಉಭಯ ದೇಶ ಗಳ ನಾಯಕರು ಭೇಟಿಯಾದಾಗಲೆಲ್ಲ ಈ ಬಗ್ಗೆ ಚರ್ಚೆ ನಡೆಸಿ, ಹಿಂದೂಗಳಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಬಾಂಗ್ಲಾದಲ್ಲಿ ನಡೆಯು ತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿದೇಶಿ ನಾಯಕರ ಗಮನ ಸೆಳೆಯುವ ಪ್ರಯತ್ನವನ್ನು ಭಾರತ ಮಾಡಿದೆ. ಈ ಎಲ್ಲ ಮನವಿ, ಪ್ರಯತ್ನಗಳ ಹೊರತಾಗಿಯೂ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಅದರಲ್ಲೂ ಹಿಂದೂಗಳನ್ನೇ ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಗಳ ಹಿಂದೆ ಭಾರೀ ಷಡ್ಯಂತ್ರವಿದೆ ಎಂಬುದರಲ್ಲಿ ಅನು ಮಾನವೇ ಇಲ್ಲ. ಹೀಗಾಗಿ ಭಾರತ ಸರಕಾರ ಈ ಬಗ್ಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ದನಿ ಎತ್ತಬೇಕಿದೆ.
ಈ ವಿಷಯದಲ್ಲಿ ಭಾರತ ಈಗಾಗಲೇ ಸಾಕಷ್ಟು ತಾಳ್ಮೆ, ಸಂಯಮ ವಹಿಸಿದ್ದು, ಇನ್ನೊಂದಿಷ್ಟು ಏರು ಧ್ವನಿಯಲ್ಲಿ ಬಾಂಗ್ಲಾ ದೇಶಕ್ಕೆ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಬೇಕು. ಅಂತಾ ರಾಷ್ಟ್ರೀಯ ಮಟ್ಟದಲ್ಲಿಯೂ ಬಾಂಗ್ಲಾದಲ್ಲಿನ ಅರಾಜಕತೆ, ಮಾನವಹಕ್ಕುಗಳ ಉಲ್ಲಂಘನೆಯ ವಿಷಯಗಳನ್ನು ಪ್ರಸ್ತಾಪಿಸಿ, ಬಾಂಗ್ಲಾ ಸರಕಾರದ ಮೇಲಣ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿ, ಅಲ್ಲಿನ ಹಿಂದೂಗಳಲ್ಲಿ ಸುರಕ್ಷಾ ಭಾವವನ್ನು ಮೂಡಿಸುವ ಪ್ರಯತ್ನಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.